ವಿದ್ಯುತ್ ಸಂಪರ್ಕ ಕಲ್ಪಿಸಲು ಆಗ್ರಹ

7

ವಿದ್ಯುತ್ ಸಂಪರ್ಕ ಕಲ್ಪಿಸಲು ಆಗ್ರಹ

Published:
Updated:

ಹಳೇಬೀಡು: ಕಳೆದ ವರ್ಷ ಆರಂಭ ವಾದ ಹಳೇಬೀಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡ ವಿದ್ಯುತ್, ಸಮತಟ್ಟಾದ ಆಟದ ಮೈದಾನ, ಕುಡಿಯುವ ನೀರು, ಬಸ್ಸು ತಂಗುದಾಣ, ಕೊಠಡಿ ಕೊರತೆ ಹೀಗೆ ಹಲವಾರು ಸಮಸ್ಯೆಗಳಿಂದ ನಲುಗು ತ್ತಿದೆ. ಕಾಲೇಜಿಗೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿ ವಿದ್ಯಾರ್ಥಿಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.ಕಾಲೇಜಿಗೆ ಪರಿವರ್ತಕ(ಟ್ರಾನ್ಸ್‌ಪಾರ್ಮರ್)ಅ ಳವಡಿಸಿದ್ದರೂ ವಿದ್ಯುತ್ ಸಂಪರ್ಕ ದೊರಕಿಲ್ಲ. ಗುಣಮಟ್ಟದ ಬೋಧನೆ ದೊರಕು ತ್ತಿದ್ದರೂ ವಿದ್ಯುತ್ ಇಲ್ಲದೆ ಕಂಪ್ಯೂಟರ್ ಲ್ಯಾಬ್‌ನಲ್ಲಿ ಕಲಿಯುವ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ವಿದ್ಯುತ್ ಸಮಸ್ಯೆಯಿಂದ ಕಚೇರಿ ಕೆಲಸಕ್ಕೂ ಅಡಚಣೆಯಾಗುತ್ತಿದೆ. ಕುಡಿಯುವ ನೀರಿನ ಪಂಪ್‌ಸೆಟ್ ವಿದ್ಯುತ್ ಇಲ್ಲದೆ ಚಾಲನೆಯಾಗುತ್ತಿಲ್ಲ. ಪಟ್ಟಣದಿಂದ ದೂರದಲ್ಲಿ ಬರಗಾಲದ ಪರಿಸ್ಥಿತಿಯಿಂದ ಹತ್ತಿರದ ಕೃಷಿ ಪಂಪ್‌ಸೆಟ್‌ನಲ್ಲಿಯೂ ನೀರು ಇಲ್ಲದಂತಾಗಿದೆ ಎಂದು ವಿದ್ಯಾರ್ಥಿಗಳು ದೂರಿದರು.ಕಾಲೇಜು ಬಳಿ ಬಸ್ ತಂಗುದಾಣ ನಿರ್ಮಿಸಬೇಕು. ಆಟದ ಮೈದಾನ ಸಮತಟ್ಟು ಮಾಡಬೇಕು. ಹೆಚ್ಚುವರಿ ಕೊಠಡಿಗಳನ್ನು ನಿರ್ಮಿಸಬೇಕು. ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸ ಬೇಕು. ಪ್ರತಿಭಟನೆ ಉಗ್ರರೂಪಕ್ಕೆ ತಾಳುವ ಮೊದಲೇ ಅಧಿಕಾರಿ ವರ್ಗ ಹಾಗೂ ಜನಪ್ರತಿನಿಧಿಗಳು ಕಾಲೇಜಿನ ಎಲ್ಲ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ವಿದ್ಯಾರ್ಥಿಗಳು ಎಚ್ಚರಿಸಿದರು.ಲೋಕೋಪಯೋಗಿ, ವಿದ್ಯುತ್ ಪರೀವೀಕ್ಷಣಾ ಇಲಾಖೆ ಹಾಗೂ ಸೆಸ್ಕ್ ಕಂಪೆನಿಯ ಅಧಿಕಾರಿ ವರ್ಗದಲ್ಲಿ ಒಮ್ಮ ತದ ಕೊರತೆ ಇರುವುದರಿಂದ ಕಾಲೇಜು ಕಟ್ಟಡ ವಿದ್ಯುತ್‌ನಿಂದ ವಂಚಿತವಾಗಿದೆ. ಕಾಲೇಜು ಶಿಕ್ಷಣ ಇಲಾಖೆ ವಿದ್ಯುತ್ ಸಂಪರ್ಕಕ್ಕಾಗಿ ಹಣ ಪಾವತಿ ಮಾಡಿ ದ್ದರೂ ಕೆಲಸ ವಿಳಂಬವಾಗುತ್ತಿದೆ. ಜನ ಪ್ರತಿನಿಧಿಗಳು ಮಧ್ಯಪ್ರವೇಶಿಸಿ ವಿದ್ಯತ್ ವ್ಯವಸ್ಥೆ ಮಾಡಬೇಕು ಎಂದು ವಿದ್ಯಾರ್ಥಿ ಗಳು ಮನವಿ ಮಾಡಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry