ಗುರುವಾರ , ನವೆಂಬರ್ 14, 2019
22 °C

ವಿದ್ಯುತ್ ಸಮಸ್ಯೆ ನಿವಾರಣೆಗೆ ರೈತರ ಆಗ್ರಹ

Published:
Updated:

ಮುದ್ದೇಬಿಹಾಳ: ವಿದ್ಯುತ್ ಟ್ರಾನ್ಸ್ ಫಾರ್ಮರ್ ಸುಟ್ಟು ಹದಿನೈದು ದಿನಗಳಾಗಿದ್ದು, ವಿದ್ಯುತ್ ಪೂರೈಕೆ ಇಲ್ಲದೆ ಬೆಳೆಗಳು ಒಣಗುತ್ತಿವೆ. ಕೂಡಲೇ ಟ್ರಾನ್ಸ್‌ಫಾರ್ಮರ್ ಕೂಡಿಸುವಂತೆ ಆಗ್ರಹಿಸಿ ಕಾಶೀನಕುಂಟೆ ಗ್ರಾಮದ ರೈತರು ಸೋಮವಾರ ವಿದ್ಯುತ್ ವಿತರಣಾ ಕಚೇರಿ ಎದುರು ಪ್ರತಿಭಟನೆ ನಡೆಸಿದರು.ವಿದ್ಯುತ್ ಸಮಸ್ಯೆ ನಿವಾರಿಸುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನ ಆಗಿಲ್ಲ. ಅಧಿಕಾರಿಗಳೂ ನಿರ್ಲಕ್ಷ್ಯ ತೋರುತ್ತಿದ್ದಾರೆ. ಬೆಳೆಯ ಜೊತೆಗೆ ಕುಡಿಯುವ ನೀರು ಪೂರೈಕೆಯೂ ಇಲ್ಲದೆ ತೊಂದರೆ ಆಗಿದೆ ಎಂದು ರೈತರು ದೂರಿದರು.ಕೆಪಿಟಿಸಿಎಲ್ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅವರಿಗೆ ಮನವಿ ಸಲ್ಲಿಸಿದರು.

ನಂತರ ತಹಸೀಲ್ದಾರ ಕಚೇರಿಗೆ ತೆರಳಿದ ರೈತರು, ತಹಸೀಲ್ದಾರ ಗಂಗಪ್ಪ ಅವರೆದುರು ಅಳಲು ತೋಡಿಕೊಂಡರು.ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಅಧ್ಯಕ್ಷ ಅಮೀರ ನಂದವಾಡಗಿ, ಪ್ರಧಾನ ಕಾರ್ಯದರ್ಶಿ ಎಸ್.ಎಚ್. ಸೀತಿಮನಿ, ಎಲ್.ಬಿ. ಕಾಮನಕೇರಿ, ಮೆಹಬೂಬ ಸಾಲವಾಡಗಿ, ಬಸಪ್ಪ ಮಾದರ, ರಾಯಪ್ಪ ಚಬನೂರ, ಶಿವಮಾರತೆಪ್ಪ, ಬಸಪ್ಪ ಸೀತಿಮನಿ, ಮುಲ್ಲಾ ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)