ಶನಿವಾರ, ಏಪ್ರಿಲ್ 17, 2021
24 °C

ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ಬಿಸಿಸಿಐ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಬೆಳಗಾವಿ ವಾಣಿಜ್ಯೋದ್ಯಮ ಸಂಸ್ಥೆಯ (ಬಿಸಿಸಿಐ) ಪದಾಧಿಕಾರಿಗಳ ನಿಯೋಗ ಹುಬ್ಬಳ್ಳಿ ವಿದ್ಯುತ್ ಸರಬ ರಾಜು ಕಂಪೆನಿ (ಹೆಸ್ಕಾಂ) ಅಧಿಕಾರಿಗಳನ್ನು ಮಂಗಳವಾರ ನಡೆದ ಗ್ರಾಹಕರ ಸಭೆಯಲ್ಲಿ ಮಾಡಿ ವಿದ್ಯುತ್ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದೆ.ಕೈಗಾರಿಕೆಗಳು ವಿದ್ಯುತ್ ಸಮಸ್ಯೆಯನ್ನು ಹೆಚ್ಚಾಗಿ ಎದುರಿಸುತ್ತಿದ್ದು, ಸಮಸ್ಯೆಗಳ ಪರಿಹಾರಕ್ಕೆ ಸಕಾಲಕ್ಕೆ ಹೆಸ್ಕಾಂ ಸಿಬ್ಬಂದಿ ಸಿಗುತ್ತಿಲ್ಲ.ಆದ್ದರಿಂದ ಸರ್ವಿಸ್ ಸ್ಟೇಶನ್‌ಗಳಲ್ಲಿ ಎಲ್ಲ ಸೌಕರ್ಯಗಳ ಜೊತೆಗೆ ಲೈನ್‌ಮನ್ ಹಾಗೂ ಸಿಬ್ಬಂದಿ ನಿಯೋಜಿಸಬೇಕು. ಪರಿವರ್ತಕಗಳ ಬದಲಾವಣೆ ಸಂದರ್ಭದಲ್ಲಿ ಸಿಬ್ಬಂ ದಿಯೇ ಇರುವುದಿಲ್ಲ, ಈ ಸಮಸ್ಯೆ ಹೋಲಾಡಿಸಬೇಕು ಎಂದು ನಿಯೋಗವು ಮನವಿ ಸಲ್ಲಿಸಿ ಆಗ್ರಹಿಸಿತು.ಹೆಸ್ಕಾಂ ನಿಯೋಗವು ಪರಿವರ್ತಕಗಳ ಸಂಗ್ರಹ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿತು.

ಬೆಳಗಾವಿ ಸಣ್ಣ ಕೈಗಾರಿಕೆಗಳ ಸಂಘದ ಸದಸ್ಯರು ಸಹ ಮನವಿ ಸಲ್ಲಿಸಿ, ವಿದ್ಯುತ್ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿದರು.ಮನವಿ ಸ್ವೀಕರಿಸಿದ ಹೆಸ್ಕಾಂ ಅಧಿಕಾರಿ ಎ.ಎಂ.ಪೂಜಾರಿ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.ಬಿಸಿಸಿಐ ಅಧ್ಯಕ್ಷ ಸತೀಶ ತೆಂಡೂಲ್ಕರ್, ರೋಹನ ಜವಳಿ, ವಿಕಾಸ ಕಲಘಟಗಿ, ಶ್ರೀಧರ ಉಪ್ಪಾರ, ರಾಜೇಂದ್ರಕುಮಾರ ಹರ್ಕುಣಿ, ಅಶೋಕ ಕೋಳಿ ಮತ್ತಿತರರು ನಿಯೋಗದಲ್ಲಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.