ಬುಧವಾರ, ಏಪ್ರಿಲ್ 14, 2021
24 °C

ವಿದ್ಯುತ್ ಸರಬರಾಜು ನಿಲುಗಡೆ: ದಿಢೀರ್ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಮಲಾಪುರ: ಮಹಾಗಾಂವ್ ಕ್ರಾಸ್‌ನಲ್ಲಿ ಶನಿವಾರ ಯಾವುದೇ ಮುನ್ಸೂಚನೆ ನೀಡದೇ ವಿದ್ಯುತ್ ಸರಬರಾಜು ನಿಲ್ಲಿಸಿದ ಕಾರಣ ವರ್ತಕ ಸಂಘ ದಿಢೀರನೆ ವಿದ್ಯುತ್ ಸರಬರಾಜು ಕಾರ್ಯಾಲಯಕ್ಕೆ ಬೀಗಹಾಕಿ ಪ್ರತಿಭಟನೆ ನಡೆಸಿತು.ನಿಯಮದ ಪ್ರಕಾರ ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ 11 ಗಂಟೆಯವರೆಗೆ ವಿದ್ಯುತ್ ನೀಡುವ ಸಮಯವಿದ್ದರೂ ಕಡಿತ ಮಾಡಲಾಗಿದೆ. ಸಚಿವ ರೇವೂನಾಯಕ ಬೆಳಮಗಿಯವರ ಹೊಳಕುಂದಾ ಗ್ರಾಮದಲ್ಲಿ ಜನಸ್ಪಂದನ ಸಭೆ ಇದ್ದರೂ ವಿದ್ಯುತ್ ನಿಗಮದ ಅಧಿಕಾರಿಗಳು ಯಾವುದೇ ಮನ್ಸೂಚನೆ ನೀಡದೇ ವಿದ್ಯುತ್ ಸರಬರಾಜು ನಿಲ್ಲಿಸಿ ಜನರಿಗೆ ತೊಂದರೆ ಕೊಟ್ಟಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.ಮಹಾಗಾಂವ್ ವಲಯಕ್ಕೆ 24 ಗಂಟೆಗಳ ವಿದ್ಯುತ್ ಸರಬರಾಜು ನೀಡಬೇಕು. ವಲಯದಲ್ಲಿ ನೀರಿನ ಸಮಸ್ಯೆ ಇರುವುದರಿಂದ ಮೀಟರ್ ಸರಬರಾಜಿಗೆ 24 ಗಂಟೆ ಮೂರು ಫೇಸ್ ವಿದ್ಯುತ್ ನೀಡಬೇಕು. ಅನಧಿಕೃತ ವಿದ್ಯುತ್ ಸಂಪರ್ಕ ಪಡೆದ ಕೆಇಬಿ ನೌಕರರನ್ನು ಅಮಾನತುಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ಪ್ರತಿಭಟನಾ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಗುಲ್ಬರ್ಗ ತಾಲ್ಲೂಕು ತಹಸೀಲ್ದಾರ ಮಹಾದೇವಪ್ಪ ಸಾಸನೂರ ಅವರಿಂದ ಸಮಸ್ಯೆ ಪರಿಹರಿಸಲು ಸಾಧ್ಯವಾಗಲಿಲ್ಲ.

ಸುದ್ದಿ ತಿಳಿದ ಜೆಸ್ಕಾಂ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ ನಂತರ 4 ಗಂಟೆಗಳ ಪ್ರತಿಭಟನೆ ವಾಪಾಸು ತೆಗೆದುಕೊಳ್ಳಲಾಯಿತು.ತಾಲ್ಲೂಕು ರೈತ ಸಂಘದ ಅಧ್ಯಕ್ಷ ಕೇದಾರನಾಥ ಸಿ.ತಡಕಲ್, ವರ್ತಕರ ಸಂಘದ ವೈಜನಾಥ ತಡಕಲ್, ಶ್ರೀಕಾಂತ ಪಾಟೀಲ, ಮಹಾಗಾಂವ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಿರಿಜಾಬಾಯಿ ಮಚ್ಛೇಂದ್ರ, ಜಗನ್ನಾಥ ಹೊಸಮನಿ, ಮಲ್ಲಿಕಾರ್ಜುನ ಪಸಾರ, ಅಬ್ದುಲ್ ಸಿದ್ದಮ್ಮ ಶಿವಪ್ಪ ಗೊಬ್ಬುರವಾಡಿ, ಮಜದ್ ಅಲಿ ದರ್ಜಿ, ಸಿದ್ರಾಮಪ್ಪ ಬೆಳಕೋಟಾ, ಪ್ರಭುದೇವ ಮಹಾಗಾಂವ ವಾಡಿ, ನಂದಕುಮಾರ ಹರಸೂರ, ತಯಾಬೂಬ್ ಅಲಿ ದರ್ಜಿ ಮತ್ತಿತರರು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.