ವಿದ್ಯುತ್ ಸ್ಪರ್ಶ: ಇಬ್ಬರು ರೈತರು ಸಾವು

ಸೋಮವಾರ, ಮೇ 20, 2019
32 °C

ವಿದ್ಯುತ್ ಸ್ಪರ್ಶ: ಇಬ್ಬರು ರೈತರು ಸಾವು

Published:
Updated:

ದಾವಣಗೆರೆ: ಮೆಕ್ಕೆಜೋಳ ಹೊಲದ ಬೇಲಿ ದಾಟಲು ಹೋದ ಇಬ್ಬರು ರೈತರು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ಘಟನೆ ಚನ್ನಗಿರಿ ತಾಲ್ಲೂಕು ಉಬ್ರಾಣಿ ಹೋಬಳಿ ಚಿಕ್ಕಮಳಲಿ ಗ್ರಾಮದ ಬಳಿ ಮಂಗಳವಾರ ನಡೆದಿದೆ.ಕಗ್ಗಿ ಗ್ರಾಮದ ರೈತರಾದ ಶಿವಮೂರ್ತಿ ಹಾಗೂ ಸುರೇಶ್ ಮೃತ ದುರ್ದೈವಿಗಳು. ಇಬ್ಬರೂ 25 ವರ್ಷದ ಒಳಗಿನ ಯುವಕರು.ಚಿಕ್ಕಮಳಲಿ ಗ್ರಾಮದ ಸುರೇಶ  ಕಾಳುಗಟ್ಟಿದ ಮೆಕ್ಕೆಜೋಳದ ಬೆಳೆಗೆ ಕಾಡುಹಂದಿಗಳ ಕಾಟ ತಪ್ಪಿಸುವ ಉದ್ದೇಶದಿಂದ ಹೊಲದ ಸುತ್ತ ಇದ್ದ ಬೇಲಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದು, ಅದರ ಪರಿವೆ ಇಲ್ಲದ ಇವರಿಬ್ಬರು ಪಕ್ಕದಲ್ಲಿದ್ದ ತಮ್ಮ ಹೊಲಕ್ಕೆ ಹೋಗಲು ಬೇಲಿ ದಾಟುವಾಗ ದುರ್ಘಟನೆ ನಡೆದಿದೆ. ಬೆಸ್ಕಾಂ ಎಇಇ ಪಾಟೀಲ್, ಸಿಪಿಐ ಪಿ.ಕೆ. ಪಾಟೀಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪ್ರಕರಣ ಚನ್ನಗಿರಿ ಠಾಣೆಯಲ್ಲಿ ದಾಖಲಾಗಿದೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry