ವಿದ್ಯುನ್ಮಾನ ಉಪಕರಣಗಳ ವಿಸ್ಮಯ

7

ವಿದ್ಯುನ್ಮಾನ ಉಪಕರಣಗಳ ವಿಸ್ಮಯ

Published:
Updated:

ಅಮೆರಿಕದ ಲಾಸ್ ವೆಗಾಸ್‌ನಲ್ಲಿ ಈಚೆಗೆ ಅಂತರರಾಷ್ಟ್ರೀಯ ಗೃಹೋಪಯೋಗಿ ವಿದ್ಯುನ್ಮಾನ ಉಪಕರಣಗಳ ಪ್ರದರ್ಶನ ನಡೆಯಿತು. ಅದನ್ನು ವೀಕ್ಷಿಸಿದವರಿಗೆ ನಿಬ್ಬೆರಗಾಗುವಷ್ಟು ವೈವಿಧ್ಯದ ಉಪಕರಣಗಳು ಅಲ್ಲಿದ್ದವು. ತೆಳುವಾದ ಟಿವಿ, ಅತಿ ತೆಳ್ಳಗಿನ ಲ್ಯಾಪ್‌ಟಾಪ್, ಕಂಪ್ಯೂಟರ್‌ಗಿಂತ ಹೆಚ್ಚಿನ ಕಾರ್ಯಕ್ಷಮತೆಯ ಟ್ಯಾಬ್ಲೆಟ್ ಹಾಗೂ ಆಂಡ್ರಾಯ್ಡ ಫೋನುಗಳನ್ನು ಪ್ರದರ್ಶಿಸಲಾಗಿತ್ತು.

 

ಅಮೆರಿಕದಲ್ಲಿ ಪ್ರದರ್ಶನಕ್ಕೆ ಬಂದಂಥವು ಮನೆಗೆ ಬಾರದೇ ಇರಬಹುದೇ?! ಇನ್ನೇನು, ಮುಂದಿನ ಒಂದೆರಡು ವರ್ಷಗಳಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳು ಬೆರುಗು ಮೂಡಿಸುವಷ್ಟರ ಮಟ್ಟಿಗೆ ರೂಪು ಪಡೆದುಕೊಳ್ಳಲಿವೆ ಎಂಬ ಸುಳಿವು ಈ ಪ್ರದರ್ಶನದಿಂದ ಗ್ರಾಹಕ ವಲಯಕ್ಕೆ ಸಿಕ್ಕಿತು.ಪ್ರದರ್ಶನದಲ್ಲಿದ್ದ 3,100 ಬೃಹತ್ ಮಳಿಗೆಗಳು ಇದ್ದವು. ಒಂದೊಂದು ಮಳಿಗೆಯಲ್ಲೂ ಒಂದೊಂದು ಕಂಪೆನಿಯು ಮುಂಬರುವ ವರ್ಷಗಳಲ್ಲಿ ಬಿಡುಗಡೆಯಾಗುವ ತನ್ನ ಉಪಕರಣಗಳನ್ನು ಹೆಮ್ಮೆಯಿಂದ ಪ್ರದರ್ಶಿಸಿದ್ದವು.ಟಿವಿ ಠೀವಿ: ಟಿವಿ ಇಡಲು ದೊಡ್ಡ ಟೇಬಲ್ ಬೇಕು ಎಂಬ ಕಾಲವೊಂದಿತ್ತು. ಮುಂದೆ ಫ್ಲ್ಯಾಟ್ ಟಿವಿ ಬಂತು. ಚಿಕ್ಕ ಟೇಬಲ್ ಸಾಕಾಯಿತು. ನಂತರ ಎಲ್‌ಸಿಡಿ ಟಿವಿ ಬಂತು; ಇದಕ್ಕೆ ಟೇಬಲ್ ಬೇಕಿರಲಿಲ್ಲ. ಗೋಡೆಗೆ ತೂಗು ಹಾಕಿದರಾಯ್ತು. ಅಳತೆಯೂ ದೊಡ್ಡದಾಗುತ್ತ ಹೋದಂತೆ ಗ್ರಾಹಕರು ಇನ್ನಷ್ಟು ವಿಶಾಲ ಪರದೆಯ ಟಿವಿ ಬೇಕೆಂದು ಕೇಳಿದರು.ಲಾಸ್‌ವೇಗಾಸ್‌ನ ಪ್ರದರ್ಶನದಲ್ಲಿದ್ದ ಟಿವಿ ಅಳತೆ 84 ಇಂಚುಗಳವರೆಗೂ ಇತ್ತು! ಹೈಡೆಫಿನಿಶನ್ ಸ್ಕ್ರೀನ್, 3-ಡಿ ಸ್ಕ್ರೀನ್, ಜಿಜಾಂಟಿಕ್ ಸ್ಕ್ರೀನ್ ಎಂಬ ವಿಶೇಷಣಗಳು ಬೇರೆ!

ಎಲ್‌ಜಿ ಹಾಗೂ ಸ್ಯಾಮ್‌ಸಂಗ್ ಕಂಪೆನಿಗಳು ಪ್ರೊಟೊಟೈಪ್ 55-ಇಂಚುಗಳ ಒಎಲ್‌ಇಡಿ ಸ್ಕ್ರೀನ್ ಟಿವಿ ಪ್ರದರ್ಶಿಸಿದ್ದವು.

ಇವು ಎಷ್ಟು ತೆಳುವೆಂದರೆ, ಮುಟ್ಟಿದರೆ ಕಾಗದದಷ್ಟೇ ದಪ್ಪ! ಸ್ಪಷ್ಟ ಚಿತ್ರಗಳು, ಹೆಚ್ಚು ವರ್ಣರಂಜಿತವುಳ್ಳ ಈ ಟಿವಿ ದುಬಾರಿ ಕೂಡ ಹೌದು. ಈವರೆಗೆ ಮಾರುಕಟ್ಟೆಗೆ ಬಂದಿರುವ ಎಲ್ಲ ಒಎಲ್‌ಇಡಿ ಸ್ಕ್ರೀನ್ ಟಿವಿಗಿಂತಲೂ ಇದು ದೊಡ್ಡ ಅಳತೆಯದ್ದು.ಈಗ ಎಲ್ಲರೂ ಹೈಡೆಫಿನಿಶನ್ (ಎಚ್‌ಡಿ) ಟಿವಿ ಖರೀದಿಸುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಕಂಪೆನಿಗಳು ಅಂಥ ಟಿವಿ ಉತ್ಪಾದನೆಗೇ ಗಮನ ಕೊಡುತ್ತಿವೆ. 1080 ಪಿಕ್ಸೆಲ್ ಎಚ್‌ಡಿಗಿಂತ ಇನ್ನಷ್ಟು ಅತ್ಯಾಧುನಿಕ ಟಿವಿ ಇಲ್ಲವೇ. ಇದೆ. ಎಲ್‌ಜಿ ಕಂಪೆನಿಯು 4ಕೆ ಟೆಲಿವಿಜನ್ ಇದೇ ತಂತ್ರಜ್ಞಾನದೊಂದಿಗೆ ವಿನ್ಯಾಸಗೊಂಡಿದೆ.ಈಗಂತೂ 3-ಡಿ ಟಿವಿ ಸೆಟ್‌ಗಳ ಮಾರಾಟ ಕ್ರಮೇಣ ಚುರುಕಾಗುತ್ತಿದೆ. ಆದರೆ, ಈ ಟಿವಿ ವೀಕ್ಷಿಸಲು ಸುಮಾರು 50 ಡಾಲರ್ ತೆತ್ತು ವಿಶೇಷ ಕನ್ನಡಕ ಖರೀದಿಸಬೇಕು ಎಂಬುದೂ ನಿಜ. ಪ್ರದರ್ಶನದಲ್ಲಿ ಇದ್ದ `ಕನ್ವೆರ್ಜನ್ಸ್ ಟಿವಿ~ ಇಂಥದೇ ಉದ್ದೇಶದಿಂದ ಅಭಿವೃದ್ಧಿಪಡಿಸಲಾಗಿದ್ದು, ಇದರಲ್ಲಿ ಟಿವಿ ಹಾಗೂ ಇಂಟರ್‌ನೆಟ್ ಎರಡರ ಸೌಲಭ್ಯವೂ ಇದೆ.ಸೋನಿ ಹಾಗೂ ತೋಷಿಬಾ ಕಂಪೆನಿಗಳು ತಮ್ಮ ಪ್ರೊಟೊಟೈಪ್ 3-ಡಿ ಸೆಟ್‌ಗಳನ್ನು ಪ್ರದರ್ಶನದಲ್ಲಿ ಇಟ್ಟಿದ್ದವು. ಇವುಗಳಿಗೆ ವಿಶೇಷ ಕನ್ನಡಕದ ಅಗತ್ಯವಿಲ್ಲ ಎಂಬುದೇ ವಿಶೇಷ.

ಸ್ಯಾಮ್‌ಸಂಗ್‌ನ ಹೊಸ ಟಿವಿಯೊಂದು ಎಲ್ಲರ ಗಮನ ಸೆಳೆಯಿತು. ತಮಗೆ ಬೇಕೆನಿಸುವ ಕಾರ್ಯಕ್ರಮ ವೀಕ್ಷಿಸಲು ಕುಟುಂಬದ ನಾಲ್ಕಾರು ಮಂದಿ ರಿಮೋಟ್‌ಗಾಗಿ ಸೆಣಸಾಟ ನಡೆಸುವುದನ್ನು ತಪ್ಪಿಸುವ `ಸೌಲಭ್ಯ~ ಇದರಲ್ಲಿತ್ತು.ಅಂದರೆ, ಪ್ರತಿಯೊಬ್ಬರೂ ಪ್ರತ್ಯೇಕ ವಿಶೇಷ ಕನ್ನಡಕ ಹಾಕಿಕೊಂಡು, ಒಂದೇ ಟಿವಿಯಲ್ಲಿ ಒಂದೇ ಸಮಯದಲ್ಲಿ ತಮಗೆ ಬೇಕೆನಿಸುವ ಕಾರ್ಯಕ್ರಮವನ್ನು ಇನ್ನೊಬ್ಬರಿಗೆ ಕಾಣಿಸದಂತೆ ನೋಡುವ ಸದವಕಾಶ!! ಮಾಲೀಕನ `ಆದೇಶ~ದಂತೆ ಚಾನೆಲ್ ಬದಲಾಯಿಸುವ ಅಥವಾ ಧ್ವನಿ, ವರ್ಣ ಸಂಯೋಜನೆ ಪಾಲಿಸುವ ಟಿವಿ ಕೂಡ ಸ್ಯಾಮ್‌ಸಂಗ್‌ನ ವಿಶಿಷ್ಟ ಸಂಶೋಧನೆಯಾಗಿ ಬಿಂಬಿತವಾಯಿತು.ಟ್ಯಾಬ್ಲೆಟ್: ಈಗ ಮಾರುಕಟ್ಟೆಯಲ್ಲಿರುವ ಟ್ಯಾಬ್ಲೆಟ್‌ಗಳಿಗಿಂತ ಭಿನ್ನವಾಗಿ ತಯಾರಿಸುವ ಉದ್ದೇಶ ಕಂಪೆನಿಗಳದ್ದು. ಈಗ ಬೆಲೆ ಸಮರವೂ ಸೃಷ್ಟಿಯಾಗಿರುವುದರಿಂದ ಅದರ ಕಡೆಯೂ ಗಮನ ಕೊಡಬೇಕು. `ಅಸಸ್~ ಹಾಗೂ `ಎನ್‌ವಿಡಿಯಾ~ 250 ಡಾಲರ್ ಬೆಲೆಗೆ ಆಂಡ್ರಾಯ್ಡ ಟ್ಯಾಬ್ಲೆಟ್ ಕೊಡುವುದಾಗಿ ಪ್ರಕಟಿಸಿದರೆ, `ಲೀಡರ್ಸ್‌~ ಕೇವಲ 180 ಡಾಲರ್‌ಗೆ ಮಾರುವ ಭರವಸೆ ನೀಡಿದೆ.

 

ಇದಕ್ಕೆ ಪ್ರತಿಸ್ಪರ್ಧಿಯಾಗಿ `ವ್ಯೆಸೊನಿಕ್~ 170 ಡಾಲರ್‌ಗೆ ಟ್ಯಾಬ್ಲೆಟ್ ಕೊಡುವ ಯೋಜನೆಯನ್ನು ಗ್ರಾಹಕರ ಮುಂದಿಟ್ಟಿದೆ. `ಫ್ಯುಜಿತ್ಸು~ ಹಾಗೂ `ಪಾನ್‌ಟೆಕ್~ಗಳು ಜಲನಿರೋಧಕ ಟ್ಯಾಬ್ಲೆಟ್ ಪ್ರದರ್ಶಿಸಿ, ತಂತ್ರಜ್ಞರ ಗಮನ ಸೆಳೆದವು.ಸ್ಮಾರ್ಟ್‌ಫೋನ್

`ಮಾತಾಡುವ ಜತೆಗೆ ಎಲ್ಲವನ್ನೂ ನಿಮ್ಮ ಫೋನ್‌ನಿಂದಲೇ ನಿಯಂತ್ರಿಸಿ~ ಎಂಬುದು ಈ ವರ್ಷದ ಮೇಳದ ಪ್ರಮುಖ ಧ್ಯೇಯವಾಕ್ಯ. ಉದಾಹರಣೆಗೆ, ನಿಮ್ಮ ನಾಯಿ ಕೊರಳಿನ ಕಾಲರ್‌ಗೆ ಜೋಡಿಸಿದ ಟ್ಯಾಗ್‌ನಿಂದ ನಿಮ್ಮ ಫೋನ್‌ಗೆ ಆ ನಾಯಿ ಎಲ್ಲಿದೆ? ಏನು ಮಾಡುತ್ತಿದೆ? ಏನೇನು ತಿನ್ನುತ್ತಿದೆ? ಎಂಬೆಲ್ಲ ಮಾಹಿತಿಗಳು ರವಾನೆಯಾಗುತ್ತ ಇರುತ್ತವೆ.ನೀವು ಕಚೇರಿಯಲ್ಲಿ ಇರುವಾಗ ಅತಿಥಿಗಳು ನಿಮ್ಮ ಮನೆಗೆ ಬಂದರೆ, ಫೋನ್‌ನಿಂದಲೇ ಮನೆ ಬಾಗಿಲು ತೆರೆಯುವಂತೆ ಮಾಡಲು ಸಾಧ್ಯ. ಮನೆಯಿಂದ ಹೊರ ಹೋಗುವಾಗ ವಿದ್ಯುತ್ ದೀಪ, ಎಸಿ ಬಂದ್ ಮಾಡದೇ ಹೋಗಿದ್ದರೆ ಫೋನ್‌ನಿಂದಲೇ ಅದನ್ನು ನಿರ್ವಹಿಸಬಹುದು.ಇ-ಮೇಲ್ ಸೌಲಭ್ಯವುಳ್ಳ ಫೋನ್ ಅನ್ನು ಬ್ಯಾಗಿನಲ್ಲಿ ಇಟ್ಟುಕೊಂಡಾಗ, ದಿಢೀರೆಂದು ಕರೆ ಅಥವಾ ಇ-ಮೇಲ್ ಬರಬಹುದು. ನಿಮಗೆ ಗೊತ್ತಾಗುವುದಿಲ್ಲ ಎಂಬ ಚಿಂತೆ ಬೇಡ. ಮುಂಗೈಗೆ ಕೊಟ್ಟಿಕೊಂಡ `ಕ್ಯಾಸಿಯೊ~ದ ಜಿ-ಶಾಕ್ ಜಿಬಿ6900 ವಾಚು, ಮೊಬೈಲಿಗೆ ಬರುವ ಕರೆ ಅಥವಾ ಇ-ಮೇಲ್ ಬಗ್ಗೆ ಸೂಚನೆ ಕೊಡುತ್ತದೆ. ಅಲ್ಟ್ರಾಬುಕ್

ಲ್ಯಾಪ್‌ಟಾಪ್ ತೆಳ್ಳಗಾದಷ್ಟೂ ಚೆಂದ ಎಂಬ ಗ್ರಾಹಕರ ಬಯಕೆ ಮೇರೆಗೆ ಇಂಟೆಲ್ ಕಂಪೆನಿಯು ಸಂಶೋಧಿಸಿದ ಅತ್ಯಂತ ತೆಳುವಾದ ಲ್ಯಾಪ್‌ಟಾಪ್‌ಗೆ `ಮ್ಯಾಕ್‌ಬುಕ್ ಏರ್ ನಾಕ್ ಆಫ್~ ಎಂದು ನಾಮಕರಣ ಮಾಡಿದೆ.ಇವು ಅತ್ಯಂತ ಹಗುರ. ಸ್ಯಾಮ್‌ಸಂಗ್‌ನ ಸೀರಿಸ್-5 ಹಾಗೂ ಸೀರಿಟ್-8, ಲೆನೆವೊದ ಐಡಿಯಾಪ್ಯಾಡ್, ಎಚ್‌ಪಿಯ ಎನ್ವಿ ಸ್ಪೆಕ್ಟರ್ ಈ ಪೈಕಿ ಕೆಲವು.ಎಲ್‌ಜಿ ಕಂಪೆನಿಯ ವಿಶೇಷ ರೆಫ್ರಿಜಿರೇಟರ್ `ಬ್ಲಾಸ್ಟ್ ಚಿಲ್ಲರ್~ ಸೋಡಾ ಅಥವಾ ಬಿಯರ್ ಅನ್ನು ಕೇವಲ ಐದು ನಿಮಿಷಗಳಲ್ಲಿ ತಂಪು ಮಾಡುತ್ತದೆ. ಗಾಲಿಗಳಿರುವ ಸೂಟ್‌ಕೇಸನ್ನು ಎಳೆದೊಯ್ಯುವಾಗ, ಅದಕ್ಕೆ ಜೋಡಿಸಿದ `ಪವರ್ ಬ್ಯಾಗ್~ನಿಂದ ಲ್ಯಾಪ್‌ಟಾಪ್ ಅಥವಾ ಮೊಬೈಲ್ ಚಾರ್ಜ್ ಮಾಡಿಕೊಳ್ಳಬಹುದು.

 

ಕಂಪ್ಯೂಟರ್‌ಗೆ ಮೈಕ್ರೊಸಾಫ್ಟ್‌ನ `ಕೈನೆಕ್ಟ್~ ಜೋಡಿಸಿಕೊಂಡು, ಅದರ ಮುಂದೆ ಕುಳಿತ ನೀವು ಬರೀ ಕೈ-ಕಾಲು ಅತ್ತಿತ್ತ ಆಡಿಸುತ್ತ ಗೇಮ್ಸ ಆಡಬಹುದು. ಇಂಥವೇ ಹಲವಾರು ಅತ್ಯಾಧುನಿಕ ಉಪಕರಣಗಳು ಪ್ರದರ್ಶನದಲ್ಲಿ ಇದ್ದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry