ವಿಧವಿಧ ದೋಸೆ

7

ವಿಧವಿಧ ದೋಸೆ

Published:
Updated:

ತರಕಾರಿ ದೋಸೆ
ಬೇಕಾಗುವ ಸಾಮಗ್ರಿ: 1/4 ಕೆ.ಜಿ ಮೈದಾ ಹಿಟ್ಟು, 2 ಚಮಚ ಜೀರಿಗೆ, ಸ್ವಲ್ಪ ಮೊಸರು, ರುಚಿಗೆ ತಕ್ಕಷ್ಟು ಉಪ್ಪು, ಬೀನ್ಸ್. ಕ್ಯಾರೆಟ್, ಕ್ಯಾಬೇಜ್, ಕ್ಯಾಪ್ಸಿಕಂ, ಈರುಳ್ಳಿ, ಕೊತ್ತಂಬರಿ ಸೊಪ್ಪು, ಶುಂಠಿ, ಹಸಿಮೆಣಸು, ಕರಿಬೇವು.ಮಾಡುವ ವಿದಾನ: ಮೈದಾ ಹಿಟ್ಟಿಗೆ  ಎಲ್ಲಾ ತರಕಾರಿಗಳನ್ನು ಮಿಶ್ರ ಮಾಡಿಕೊಳ್ಳಿ. ಇದಕ್ಕೆ ಉಪ್ಪು, ಮೊಸರು ಹಾಕಿ ದೋಸೆ ಹಿಟ್ಟಿನ ಹದಕ್ಕೆ ಕಲಸಿ ಕಾದ ಕಾವಲಿ ಮೇಲೆ ಹೊಯ್ದರೆ ದೋಸೆ ಸಿದ್ದ. ಮೆದುವಾಗಿರುವ ಈ ದೋಸೆ ತಿನ್ನಲು ರುಚಿ, ಪೌಷ್ಟಿಕವೂ ಹೌದು.ಸಾಂಬಾರ್ ದೋಸೆ
ಬೇಕಾಗುವ ಸಾಮಗ್ರಿ: 1/4 ಕೆ.ಜಿ.ದಪ್ಪ ಅಕ್ಕಿ, 50ಗ್ರಾಂ ಕೊತ್ತುಂಬರಿ ಬೀಜ, 4-5 ಚಮಚ ಜೀರಿಗೆ, 2-3 ಚಮಚ ಮೆಂತೆ, 8-10ಬ್ಯಾಡಗಿ ಮೆಣಸು, 1/2 ಬಟ್ಟಲು ತೆಂಗಿನ ಕಾಯಿ, ಅಡಕೆ ಗಾತ್ರದ ಹುಣಸೆ ಹಣ್ಣು, ಸ್ವಲ್ಪ ಬೆಲ್ಲ, ಮೆಂತೆ/ಪಾಲಕ್ ಸೊಪ್ಪು.ಮಾಡುವ ವಿಧಾನ: ಮೇಲೆ ಹೇಳಿದ ಸಾಮಗ್ರಿಗಳನ್ನು 3-4 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ, ಇದನ್ನು ದೋಸೆ ಹಿಟ್ಟಿನ ಹದಕ್ಕೆ ರುಬ್ಬಿಕೊಳ್ಳಿ. ಈ ಮಿಶ್ರಣಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಸಣ್ಣ ಹೆಚ್ಚಿದ ಮೆಂತೆ /ಪಾಲಕ್ ಸೊಪ್ಪು ಹಾಕಿ ಕಾದ ಕಾವಲಿ ಮೇಲೆ ದೋಸೆ ಹೊಯ್ದರೆ ಬಿಸಿ ಬಿಸಿ ಸಾಂಬಾರ್ ದೋಸೆ ಸಿದ್ದ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry