ವಿಧಾನಸಭೆ: ಹೊಸ ಹುದ್ದೆ ಭರ್ತಿವಿರೋಧಿಸಿ ಪ್ರತಿಭಟನೆ

7

ವಿಧಾನಸಭೆ: ಹೊಸ ಹುದ್ದೆ ಭರ್ತಿವಿರೋಧಿಸಿ ಪ್ರತಿಭಟನೆ

Published:
Updated:

ಬೆಂಗಳೂರು: ವಿಧಾನಸಭೆಯ ಸಂಶೋಧನೆ ಮತ್ತು ಉಲ್ಲೇಖನೆ ಶಾಖೆಯಲ್ಲಿ ಹೊಸದಾಗಿ ಸೃಷ್ಟಿಸಲಾಗಿರುವ ಹುದ್ದೆಗಳನ್ನು ಭರ್ತಿ ಮಾಡುವ ಕ್ರಮವನ್ನು ವಿರೋಧಿಸಿ ರಾಜ್ಯ ವಿಧಾನಸಭೆ ಸಚಿವಾಲಯದ ನೌಕರರ ಸಂಘ ಶನಿವಾರ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಲಿದೆ.

ಸಂಶೋಧನೆ ಮತ್ತು ಉಲ್ಲೇಖನೆ ಶಾಖೆಗಳ ಹುದ್ದೆಗೆ ಭರ್ತಿ ಮಾಡಲು ಅನುಸರಿಸಲಾಗುತ್ತಿರುವ ಕ್ರಮ ವೃಂದ ಮತ್ತು ನೇಮಕಾತಿ ನಿಯಮಾವಳಿಗೆ ವಿರುದ್ಧವಾಗಿದೆ. ಇದನ್ನು ಪ್ರತಿಭಟಿಸಿ ಸಚಿವಾಲಯದ ಎಲ್ಲ ಅಧಿಕಾರಿಗಳು ಮತ್ತು ನೌಕರರು ಕಪ್ಪು ಪಟ್ಟಿ ಧರಿಸಲಿದ್ದಾರೆ ಎಂದು ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಎಸ್.ಕುಮಟ ಮತ್ತು ಪ್ರಧಾನ ಕಾರ್ಯದರ್ಶಿ ಆರ್.ಧನಂಜಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry