ವಿಧಾನಸೌಧಕ್ಕೆ ನೇರ ಬಸ್‌ ಸೌಲಭ್ಯ ಕಲ್ಪಿಸಿ

7

ವಿಧಾನಸೌಧಕ್ಕೆ ನೇರ ಬಸ್‌ ಸೌಲಭ್ಯ ಕಲ್ಪಿಸಿ

Published:
Updated:

ಎನ್‌.ಆರ್‌. ಕಾಲೋನಿ, ಹೊಸಕೆರೆಹಳ್ಳಿ, ಶ್ರೀನಗರದಿಂದ ವಿಧಾನಸೌಧ, ಎಂ.ಎಸ್‌. ಬಿಲ್ಡಿಂಗ್‌, ಹೈಕೋರ್ಟ್‌ ಮತ್ತು ಇತರೆ ಕಚೇರಿಗಳಿಗೆ ನೇರ ಬಸ್‌ ಸೌಲಭ್ಯವಿಲ್ಲ. ಆ ಕಡೆ ಹೋಗುವ ಒಂದೆರಡು ಬಿಎಂಟಿಸಿ ಬಸ್ಸುಗಳು ಮಹಾರಾಣಿ ಕಾಲೇಜು ಹತ್ತಿರ ಇಳಿಸುತ್ತವೆ. ಈ ಜಾಗದಿಂದ ಮೇಲ್ಕಂಡ ಸ್ಥಳಗಳನ್ನು ತಲುಪಲು 1–2 ಕಿ.ಮೀ. ಆಗುತ್ತದೆ.

ಅಷ್ಟು ದೂರ ನಡೆಯಬೇಕು ಇಲ್ಲವೇ ಆಟೊರಿಕ್ಷಾದ ಮೊರೆ ಹೋಗಬೇಕು. ಆದ್ದರಿಂದ ಬಿಎಂಟಿಸಿಯವರು ಮೇಲ್ಕಂಡ ಸ್ಥಳಗಳಿಂದ ಶಿವಾಜಿನಗರಕ್ಕೆ ಮಾರ್ಕೆಟ್‌, ಚಾಮರಾಜಪೇಟೆ, ಕೆ.ಆರ್‌. ಸರ್ಕಲ್‌ ಮುಖಾಂತರ ಬಸ್ಸುಗಳು ಸಂಚರಿಸಿದರೆ ಸಾರ್ವಜನಿಕರಿಗೆ ಬಹಳ ಉಪಯೋಗವಾಗುತ್ತದೆ. ಹೀಗಾಗಿ ಈ ಮಾರ್ಗಗಳಲ್ಲಿ ಶೀಘ್ರ ಬಸ್‌ ಸೌಕರ್ಯ ಕಲ್ಪಿಸಲಿ.

–ಬಿ.ಎಸ್‌.ಎಂ. ಕುಮಾರ್, ಶ್ರೀನಗರ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry