ಬುಧವಾರ, ಜೂನ್ 16, 2021
26 °C

ವಿನಯ ಪರ ರಾಹುಲ್‌ಗಾಂಧಿ ಪ್ರಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರ ಕೈಗೊಳ್ಳಲು ಇದೇ 31ರಂದು ಹುಬ್ಬಳ್ಳಿಗೆ ರಾಹುಲ್‌­ಗಾಂಧಿ ಬರಲಿದ್ದಾರೆ ಎಂದು ಪಕ್ಷದ ಅಭ್ಯರ್ಥಿಯೂ ಆದ ಶಾಸಕ ವಿನಯ ಕುಲಕರ್ಣಿ ತಿಳಿಸಿದರು.‘ವೈಯಕ್ತಿಕವಾಗಿ ಒಲವು ಇರಲಿಲ್ಲ. ಪಕ್ಷದ ನಿರ್ಧಾರದಂತೆ ಸ್ಪರ್ಧಿಸಲು ಮುಂದಾಗಿದ್ದೇನೆ. ನನ್ನ ಸ್ಪರ್ಧೆಗೆ ಕ್ಷೇತ್ರದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಇದರಿಂದ ಸಹಜ­ವಾಗಿಯೇ ಖುಷಿಯಾಗಿದೆ. ರಾಹುಲ್‌­ಗಾಂಧಿ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಪ್ರಚಾರಕ್ಕೆ ಬರಲಿದ್ದಾರೆ. ಇದೇ 24 ಅಥವಾ 25ರಂದು ನಾಮಪತ್ರ ಸಲ್ಲಿಸುತ್ತಿರು­ವುದಾಗಿ’ ಹೇಳಿದರು.ಅತೃಪ್ತಿ ಇಲ್ಲ: ‘ಟಿಕೆಟ್‌ ಸಿಗದ ಕಾರಣ ಮಂಜುನಾಥ ಕುನ್ನೂರ ಅಸಮಾಧಾನ­ಗೊಂಡಿದ್ದಾರೆ. ಜೆಡಿಎಸ್‌ಗೆ ಹೋಗು­ತ್ತಾರೆ ಎಂಬುದೆಲ್ಲಾ ಸುಳ್ಳು. ಎಲ್ಲರೂ ಬೆಂಬಲಿಸಲಿದ್ದಾರೆ. ನಾನು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದು­ಕೊಂಡು ಮುಂದುವರೆ­ಯುವೆ. ನಾಮ­ಪತ್ರ ಸಲ್ಲಿಕೆಯ ವೇಳೆ ಶಾಸಕ ಸಂತೋಷ್ ಲಾಡ್ ಕೂಡ ಇರಲಿದ್ದಾರೆ’ ಎಂದು ತಿಳಿಸಿದರು.ಶಿವಳ್ಳಿಗೆ ಬೆಂಬಲ: ‘ಸಚಿವ ಸ್ಥಾನಕ್ಕೆ ಶಿವಳ್ಳಿ ಅವರೊಂದಿಗೆ ಸ್ಪರ್ಧೆಯಲ್ಲಿರುವ ಕಾರಣ ಅದನ್ನು ತಪ್ಪಿಸಲು ವಿನಯಗೆ ಲೋಕ­ಸಭಾ ಚುನಾವಣೆಗೆ ನಿಲ್ಲಿಸ­ಲಾಗುತ್ತಿದೆ’ ಎಂಬುದು ಅಪಪ್ರಚಾರ ಮಾತ್ರ. ‘ಹಿರಿಯ ಶಾಸಕರಾದ ಶಿವಳ್ಳಿ ಅವರಿಗೆ ಸಚಿವ ಸ್ಥಾನ ನೀಡಿದಲ್ಲಿ ಸಂತೋಷ ಪಡುತ್ತೇನೆ. ಯಾವಾಗಲೂ ನಾವು ಒಟ್ಟಿಗೆ ಇದ್ದೇವೆ. ಸಚಿವ ಸ್ಥಾನಕ್ಕೆ ಬೇಡಿಕೆ ಇಡಲೂ ಒಟ್ಟಿಗೆ ಹೋಗಿದ್ದೇವೆ ಆದ್ದರಿಂದ ಇಲ್ಲಿ ಸ್ಪರ್ಧೆಯ ಮಾತೇ ಇಲ್ಲ. ಸಚಿವ ಸ್ಥಾನ ಕೊಟ್ಟರೆ ನಾನೇ ಅವರನ್ನು ಬೆಂವಿನಯ ಪರ ರಾಹುಲ್‌ಗಾಂಧಿ ಪ್ರಚಾರಸಲಿದ್ದೇನೆ’ ಎಂದರು.ಸ್ವಾಗತ ಇಂದು: ಲೋಕಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಯಾಗಿ ಘೊಷಣೆಯಾದ ನಂತರ ಮೊದಲ ಬಾರಿಗೆ ಕ್ಷೇತ್ರಕ್ಕೆ ಬರುತ್ತಿರುವ ವಿನಯ ಕುಲಕರ್ಣಿಗೆ ಇಲ್ಲಿನ ಬಿಡ್ನಾಳ ಕ್ರಾಸ್‌ನಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಶನಿವಾರ ಸ್ವಾಗತ ಕೋರಲಿದ್ದಾರೆ.ಕಾಂಗ್ರೆಸ್‌ಗೆ ಸೇರ್ಪಡೆ: ಮಾಜಿ ಸಚಿವ ಹಾಗೂ ಹುಬ್ಬಳ್ಳಿ ಅಂಜುಮನ್ ಸಂಸ್ಥೆ ಅಧ್ಯಕ್ಷ ಜಬ್ಬಾರ್‌ಖಾನ್‌ ಹೊನ್ನಳ್ಳಿ ಹಾಗೂ ಧಾರವಾಡ ಅಂಜುಮನ್‌ ಅಧ್ಯಕ್ಷ ಇಸ್ಮಾಯಿಲ್ ತಮಾಟಗಾರ ಶುಕ್ರವಾರ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದರು.23ರಂದು ಅಂತಿಮ:  ಜೆಡಿಎಸ್‌ ಅಭ್ಯರ್ಥಿಯ ಹೆಸರನ್ನು ಇದೇ 23ರಂದು ಭಾನುವಾರ ಅಂತಿಮಗೊಳಿಸುವುದಾಗಿ ಮಹಾನಗರ ಜಿಲ್ಲಾ ಜೆಡಿಎಸ್‌ ಘಟಕದ ಅಧ್ಯಕ್ಷ ರಾಜಣ್ಣ ಕೊರವಿ ತಿಳಿಸಿದರು. ಮಾಜಿ ಸಚಿವ ಎ.ಎಂ. ಹಿಂಡಸಗೇರಿ ಅಥವಾ ಮಾಜಿ ಸಂಸದ ಮಂಜುನಾಥ ಕುನ್ನೂರ ಜೆಡಿಎಸ್‌ ಅಭ್ಯರ್ಥಿಗಳಾಗಿ ಕಣಕ್ಕಿಳಿಯಲಿ­ದ್ದಾರೆ ಎಂಬುದು ಕೇವಲ ಊಹಾಪೋಹ ಎಂದು ಕೊರವಿ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.