ವಿನಾಯಕನ ವಿಶ್ವರೂಪ

7

ವಿನಾಯಕನ ವಿಶ್ವರೂಪ

Published:
Updated:
ವಿನಾಯಕನ ವಿಶ್ವರೂಪ

ದುಬಾರಿ ಗಣೇಶ

ಪಿಂಗಾಣಿಯ ಮೇಲೆ ಚಿನ್ನದ ಚಿತ್ತಾರ, ಅಲ್ಲಲ್ಲಿ ಅಮೂಲ್ಯ ಹರಳುಗಳು. ಇವು ಐಷಾರಾಮಿ ಗೃಹಾಲಂಕರಣ ಮತ್ತು ಪೀಠೋಪಕರಣ ಮಳಿಗೆ ಡಿ ಮಾರ್ಟ್ ಎಕ್ಸ್‌ಕ್ಲೂಸಿಫ್ ಹೊರತಂದಿರುವ ಸೀಮಿತ ಸಂಖ್ಯೆಯ ಗಣೇಶ ಮತ್ತು ಶ್ರೀನಿವಾಸನ ಮೂರ್ತಿಯ ಪುಟ್ಟ ಪರಿಚಯ.24 ಕ್ಯಾರೆಟ್ ದ್ರವ ಚಿನ್ನದ ಲೇಪನ, ಪ್ಲಾಟಿನಂ, ಅತ್ಯಂತ ಸೂಕ್ಷ್ಮ ಕುಸುರಿ ಕೆಲಸಗಳಿಂದ ಅಲಂಕೃತಗೊಂಡ ಈ ಮೂರ್ತಿಗಳು ಇಟಲಿಯಲ್ಲಿ ತಯಾರಾಗಿದ್ದು, ನೋಡಲು ಮುದ್ದಾಗಿವೆ. ಎತ್ತರ ಒಂದರಿಂದ ಒಂದೂಕಾಲು ಅಡಿ. ಆದರೆ ಬೆಲೆ ಎಷ್ಟು ಗೊತ್ತೇ? ಗಣೇಶನಿಗೆ 2.5 ಲಕ್ಷ, ಶ್ರೀನಿವಾಸನಿಗೆ 4.5 ಲಕ್ಷ ರೂ. ಸ್ಥಳ: 95 / 3, ಗೌರಾಸಿ ಆರ್ಕೆಡ್, ಮಾರತಹಳ್ಳಿ. ತಾನಿಷ್ಕ್ ಪದಕ

ಗಣೇಶ ಚತುರ್ಥಿ ಹಿಂದುಗಳ ಸಂಭ್ರಮದ ಹಬ್ಬಗಳಲ್ಲೊಂದು. ಸಿದ್ಧಿವಿನಾಯಕನ ಪೂಜೆಯ ಸಮಯವದು. ಬುದ್ಧಿ, ಶ್ರೇಯಸ್ಸು, ಅದೃಷ್ಟಗಳ ಅಧಪತಿ ಗಣಪ.

ಸಿದ್ಧಿವಿನಾಯಕನ ಆರಾಧನೆಗಾಗಿಯೇ ಆಭರಣ ಬ್ರಾಂಡ್ ತಾನಿಷ್ಕ್, ಗಣೇಶ ಪದಕಗಳನ್ನು ಪರಿಚಯಿಸಿದೆ.22 ಕ್ಯಾರೆಟ್ ಚಿನ್ನದಲ್ಲಿ ತಯಾರಾದ ಈ  ಪದಕಗಳು ಹಗುರವಾಗಿದ್ದು, ಆಧುನಿಕವಾಗಿಯೂ ಇವೆ. ಬೆಲೆ 10 ಸಾವಿರಕ್ಕೂ ಅಧಿಕ.ಟ್ಯಾಂಜೆಂಟ್ ಲಕ್

ಆಧುನಿಕ ಲುಕ್ ನೀಡುವ ಪೀಠೋಪಕರಣಗಳಿಗೆ ಹೆಸರಾದ `ಟ್ಯಾಂಜೆಂಟ್~ ಈಗ ನಾನಾ ರೂಪದ ಲಕ್ಕಿ ಗಣೇಶನ ಕಲಾತ್ಮಕ ಮೂರ್ತಿಗಳನ್ನು ಹೊರ ತಂದಿದೆ.ವಿವಿಧ ಅಭಿರುಚಿಗೆ ಹೊಂದುವ ಸಿರಾಮಿಕ್‌ಫೈಬರ್, ಗಾಜು ಮತ್ತು ಕಂಚು-ಹಿತ್ತಾಳೆಯ ವೈವಿಧ್ಯಮಯ ಗಣೇಶನ ಶ್ರೇಣಿಗಳು ಮನೆ, ಕಚೇರಿಯ ಸೌಂದರ್ಯ ಹೆಚ್ಚಿಸುವಂತಿವೆ.

ಮೈಸೂರು ರಸ್ತೆ ಸೆಟೆಲೈಟ್ ಬಸ್ ನಿಲ್ದಾಣದ ಮುಂಭಾಗ ಮತ್ತು ಹೊಸೂರು ರಸ್ತೆ ಫೋರಂ ಮಾಲ್ ಬಳಿಯ ಮಳಿಗೆಗಳಲ್ಲಿ ಇವು ದೊರೆಯುತ್ತವೆ.ಹೋಂ ಗಣೇಶ

ಮುಂಬರುವ ಹಬ್ಬಕ್ಕಾಗಿ ಸುಂದರ ವಿನ್ಯಾಸದ ಗಣೇಶ ವಿಗ್ರಹಗಳನ್ನು `ಜಸ್ಟ್ ಹೋಂ~ ಸಂಗ್ರಹಿಸಿಟ್ಟಿದೆ.ವಿವಿಧ ಗಾತ್ರ, ಆಕಾರಗಳಲ್ಲಿ ದೊರೆಯುವ ಮುದ್ದಾದ ಗಣೇಶನನ್ನು ಮನೆಯಲ್ಲಿ ಅಲಂಕಾರಕ್ಕೆ, ಪೂಜೆಗೆ ಇಡಬಹುದು. ವಿಗ್ರಹ, ವಸ್ತುಗಳನ್ನು  ಹೋಮ್‌ನಲ್ಲಿ ಖರೀದಿಸಬಹುದು.ಜಂಬೋ ಅಗರಬತ್ತಿ

ಈ ಬಾರಿಯ ಗೌರಿ-ಗಣೇಶ ಹಬ್ಬದ ಸಾಮೂಹಿಕ ಸಂಭ್ರಮಾಚರಣೆಗೆ ಮೋಕ್ಷ್ ಅಗರಬತ್ತಿ ಸಂಸ್ಥೆ 5 ಅಡಿ ಎತ್ತರದ ಅಭೂತಪೂರ್ವ ಜಂಬೋ ಅಗರಬತ್ತಿಗಳನ್ನು ಪರಿಚಯಿಸುತ್ತಿದೆ.ನೈಜ ಅಧ್ಯಾತ್ಮದ ಭಕ್ತಿಭಾವ ಬೀರಲು ವಿಶೇಷ ಸುವಾಸಿತ ಗಿಡಮೂಲಿಕೆಗಳು, ಪುಷ್ಪಗಳು, ರೆಸಿನ್ ಹಾಗೂ ಇದ್ದಿಲು ಪುಡಿಯಿಂದ ತಯಾರಾದ ಈ ಅಗರಬತ್ತಿ ಸುಮಾರು 14 ರಿಂದ 20 ಗಂಟೆವರೆಗೆ ಸುಗಂಧ ಪರಿಮಳ ಪಸರಿಸುವ  ಸಾಮರ್ಥ್ಯ ಹೊಂದಿದೆ.ಸಾಮೂಹಿಕ ಗಣೇಶ ಉತ್ಸವ, ಧಾರ್ಮಿಕ ಕಾರ್ಯಕ್ರಮ, ಮದುವೆ ಹಾಗೂ ಮತ್ತಿತರ ಶುಭ ಸಮಾರಂಭ ಹಾಗೂ ಸಂತೋಷ ಕೂಟಗಳಲ್ಲಿ ಬಳಕೆಗೆ ಸೂಕ್ತವಾಗಿದೆ. ಮಾಹಿತಿಗೆ: 98455 42036. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry