ವಿನಾಯಿತಿ ಕೋರಿದ ನ್ಯಾ.ಯಾದವ್: ಸಿಬಿಐ ವಿರೋಧ

7

ವಿನಾಯಿತಿ ಕೋರಿದ ನ್ಯಾ.ಯಾದವ್: ಸಿಬಿಐ ವಿರೋಧ

Published:
Updated:

ಚಂಡೀಗಡ (ಪಿಟಿಐ): `ನ್ಯಾಯಮೂರ್ತಿ ಮನೆ ಬಾಗಿಲಿಗೆ ಲಂಚ~ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ವಿಚಾರಣೆಯಿಂದ ಶಾಶ್ವತವಾಗಿ ವೈಯಕ್ತಿಕ ವಿನಾಯಿತಿ ನೀಡಬೇಕು ಎಂದು ಕೋರಿ ಪಂಜಾಬ್-ಹರಿಯಾಣ ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿ ನಿರ್ಮಲ್ ಯಾದವ್ ಮಾಡಿರುವ ಮನವಿಯನ್ನು ಸಿಬಿಐ ತೀವ್ರವಾಗಿ ವಿರೋಧಿಸಿದೆ.ಯಾದವ್ ಅವರನ್ನು ಇತರ ಆರೋಪಿಗಳಿಗಿಂತ ಎತ್ತರದ ಸ್ಥಾನದಲ್ಲಿ ಕೂರಿಸಲು ಸಾಧ್ಯವಿಲ್ಲ, ಉನ್ನತ ಸ್ಥಾನದಲ್ಲಿರುವವರು ಇಂತಹ ಅರ್ಜಿಗಳನ್ನು ಮತ್ತೆ ಮತ್ತೆ ಸಲ್ಲಿಸುವುದು ಕಂಡಾಗ ನೋವಾಗುತ್ತದೆ ಎಂದು ಸಿಬಿಐ ಪರ ವಕೀಲ ಅನುಪಮ್ ಗುಪ್ತ ವಾದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry