ಮಂಗಳವಾರ, ಜೂನ್ 15, 2021
20 °C

ವಿನಾಶದ ಅಂಚಿನಲ್ಲಿ ಜನಾರ್ದನ ಕೆರೆ: ರಕ್ಷಣೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜರಾಜೇಶ್ವರಿನಗರ: ನಗರ ಅಭಿವೃದ್ಧಿಯಾದಂತೆಲ್ಲಾ ಕೆರೆಗಳು ವಿನಾಶದ ಅಂಚಿಗೆ ತಲುಪುತ್ತಿವೆ. ಆ ಸಾಲಿಗೆ ಇದೀಗ ವಸಂತಪುರ ಬಳಿಯ ಸತ್ಯಮ್ಮನಕುಂಟೆಯ ಜನಾರ್ದನ ಕೆರೆ ಕೂಡ ಸೇರ್ಪಡೆಯಾಗಿದೆ.ಸುಮಾರು 7.10 ಎಕರೆ ವಿಸ್ತೀರ್ಣದಲ್ಲಿರುವ ಈ ಕೆರೆ ಅಭಿವೃದ್ಧಿ ಕಾಣದೆ ಪಾಳು ಬಿದ್ದಿದೆ. ಅರಣ್ಯ ಇಲಾಖೆಯು ಕೆರೆಯ ಬಳಿ ನಾಮಫಲಕ ಹಾಕಿರುವುದನ್ನು ಬಿಟ್ಟರೆ ಅದರ ಸಂರಕ್ಷಣೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಸ್ಥಳೀಯರ ಆರೋಪ.ಬೊಮ್ಮನಹಳ್ಳಿ ವಲಯವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರಿ ಕೆಲ ವರ್ಷ ಕಳೆದರೂ ಸಂಬಂಧಪಟ್ಟ ಇಲಾಖೆಗಳು ಕೆರೆ ಒತ್ತುವರಿಯನ್ನು ತೆರೆವುಗೊಳಿಸುವಲ್ಲಿಯೂ ಸಂಪೂರ್ಣ ವಿಫಲವಾಗಿವೆ.15 ವರ್ಷಗಳ ಹಿಂದೆ ಕೆರೆಯಲ್ಲಿ ಸಮೃದ್ಧವಾದ ನೀರಿತ್ತು. ಸುತ್ತಲಿನ ಜನರು ಇದೇ ನೀರನ್ನು ಉಪಯೋಗಿಸುತ್ತಿದ್ದರು. ಅಂಥ ಕೆರೆ ಇದೀಗ ಅವಸಾನದ ಅಂಚಿಗೆ ತಲುಪಿದೆ. ದೇಸಾಯಿ ಗಾರ್ಡನ್, ದೊಡ್ಡಕಲ್ಲಸಂದ್ರ ಮತ್ತಿತರ ಬಡಾವಣೆಗಳ ತ್ಯಾಜ್ಯ ನೀರನ್ನು ಕೆರೆಗೆ ಹರಿಸಲಾಗುತ್ತಿದೆ. ಮಳೆ ಬಂದಾಗ ಕೋಣನಕುಂಟೆ, ದೊಡ್ಡಕಲ್ಲಸಂದ್ರದಿಂದ ಬರುತ್ತಿದ್ದ ನೀರಿನ ಮೂಲವನ್ನು ತಡೆದು ಕೆರೆಯನ್ನು ನಾಶ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ. ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ದಿನದಿಂದ ದಿನಕ್ಕೆ ಕುಸಿದು ಜನತೆ ಕುಡಿಯುವ ನೀರಿಗೆ ಬವಣೆ ಪಡುವಂತಾಗಿದೆ.  ಕೆರೆಗಳನ್ನು ರಕ್ಷಿಸದಿದ್ದರೆ ಮುಂದೆ ಗಂಭೀರ ಪರಿಣಾಮ ಎದುರಿಸ ಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸುತ್ತಾರೆ.: ನಗರ ಅಭಿವೃದ್ಧಿಯಾದಂತೆಲ್ಲಾ ಕೆರೆಗಳು ವಿನಾಶದ ಅಂಚಿಗೆ ತಲುಪುತ್ತಿವೆ. ಆ ಸಾಲಿಗೆ ಇದೀಗ ವಸಂತಪುರ ಬಳಿಯ ಸತ್ಯಮ್ಮನಕುಂಟೆಯ ಜನಾರ್ದನ ಕೆರೆ ಕೂಡ ಸೇರ್ಪಡೆಯಾಗಿದೆ.ಸುಮಾರು 7.10 ಎಕರೆ ವಿಸ್ತೀರ್ಣದಲ್ಲಿರುವ ಈ ಕೆರೆ ಅಭಿವೃದ್ಧಿ ಕಾಣದೆ ಪಾಳು ಬಿದ್ದಿದೆ. ಅರಣ್ಯ ಇಲಾಖೆಯು ಕೆರೆಯ ಬಳಿ ನಾಮಫಲಕ ಹಾಕಿರುವುದನ್ನು ಬಿಟ್ಟರೆ ಅದರ ಸಂರಕ್ಷಣೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಸ್ಥಳೀಯರ ಆರೋಪ.ಬೊಮ್ಮನಹಳ್ಳಿ ವಲಯವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರಿ ಕೆಲ ವರ್ಷ ಕಳೆದರೂ ಸಂಬಂಧಪಟ್ಟ ಇಲಾಖೆಗಳು ಕೆರೆ ಒತ್ತುವರಿಯನ್ನು ತೆರೆವುಗೊಳಿಸುವಲ್ಲಿಯೂ ಸಂಪೂರ್ಣ ವಿಫಲವಾಗಿವೆ.

15 ವರ್ಷಗಳ ಹಿಂದೆ ಕೆರೆಯಲ್ಲಿ ಸಮೃದ್ಧವಾದ ನೀರಿತ್ತು. ಸುತ್ತಲಿನ ಜನರು ಇದೇ ನೀರನ್ನು ಉಪಯೋಗಿಸುತ್ತಿದ್ದರು.

ಅಂಥ ಕೆರೆ ಇದೀಗ ಅವಸಾನದ ಅಂಚಿಗೆ ತಲುಪಿದೆ. ದೇಸಾಯಿ ಗಾರ್ಡನ್, ದೊಡ್ಡಕಲ್ಲಸಂದ್ರ ಮತ್ತಿತರ ಬಡಾವಣೆಗಳ ತ್ಯಾಜ್ಯ ನೀರನ್ನು ಕೆರೆಗೆ ಹರಿಸಲಾಗುತ್ತಿದೆ. ಮಳೆ ಬಂದಾಗ ಕೋಣನಕುಂಟೆ, ದೊಡ್ಡಕಲ್ಲಸಂದ್ರದಿಂದ ಬರುತ್ತಿದ್ದ ನೀರಿನ ಮೂಲವನ್ನು ತಡೆದು ಕೆರೆಯನ್ನು ನಾಶ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ. ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ದಿನದಿಂದ ದಿನಕ್ಕೆ ಕುಸಿದು ಜನತೆ ಕುಡಿಯುವ ನೀರಿಗೆ ಬವಣೆ ಪಡುವಂತಾಗಿದೆ.  ಕೆರೆಗಳನ್ನು ರಕ್ಷಿಸದಿದ್ದರೆ ಮುಂದೆ ಗಂಭೀರ ಪರಿಣಾಮ ಎದುರಿಸ ಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.