ವಿನೆಗರ್ನಲ್ಲಿ ಆದಿವಾಸಿ ಶೈಲಿ ವಿನ್ಯಾಸ

7

ವಿನೆಗರ್ನಲ್ಲಿ ಆದಿವಾಸಿ ಶೈಲಿ ವಿನ್ಯಾಸ

Published:
Updated:
ವಿನೆಗರ್ನಲ್ಲಿ ಆದಿವಾಸಿ ಶೈಲಿ ವಿನ್ಯಾಸ

ಸೌಂದರ್ಯ, ಸ್ಟೈಲ್, ಲೈನ್ಸ್  ಮತ್ತು ಕಟ್ಸ್‌ಗಳನ್ನು ಒಳಗೊಂಡ ಅಸಂಖ್ಯ ಬಣ್ಣಗಳ ಮತ್ತು ಆಕರ್ಷಕ ಪ್ರಿಂಟ್‌ಗಳ ಸಮಾಗಮವಾದ `ವಿನೆಗರ್~ ತನ್ನ ವಿನ್ಯಾಸದ ಬಟ್ಟೆಗಳಿಗೆ ಹೊಸತನ ಸೇರಿಸಿದೆ.ಇಲ್ಲಿ ಹಲವಾರು ವಿಧದ ಬಟ್ಟೆಗಳ ಸಂಗ್ರಹವಿದೆ. ಕಲರ್ ಬ್ಲಾಕಿಂಗ್, ಪೊಲ್ಕಾ ಪ್ರಿಂಟರ್ಸ್‌ ಮತ್ತು ಲೇಸ್‌ಗಳ ಸಂಗ್ರಹವಿದ್ದು ಅವುಗಳಲ್ಲಿ ಶರ್ಟ್‌ಗಳು, ಹೂವಿನ ಚಿತ್ತಾರದ ತೆರೆದ ಬೆನ್ನಿನ ಟಾಪ್‌ಗಳು, ಜಂಪ್‌ಸೂಟ್‌ಗಳು ಮತ್ತು ಉದ್ದನೆಯ ನಿಲುವಂಗಿಗಳೂ ಇಲ್ಲಿ ಲಭ್ಯ.ಆಕರ್ಷಕ ಶೈಲಿಯ ಹಾಗೂ ಹೊಳೆಯುವ ವಸ್ತ್ರಗಳಿಂದ ವಿನ್ಯಾಸಗೊಳಿಸಿದ ಬಣ್ಣಬಣ್ಣದ ಉಡುಪುಗಳ ಸಂಗ್ರಹ ಜನರನ್ನು ಆಕರ್ಷಿಸಿದೆ. ಫುಸಿಯಾ ಮತ್ತು ಟರ್ಕಾಯ್ಸ ಪ್ಯಾಂಟ್‌ಗಳಿಗೆ ಥಾಯ್ ರ‌್ಯಾಂಪ್, ನೀಲಿ ಮತ್ತು ಗುಲಾಬಿಯ ಶರ್ಟ್‌ಗಳು ಹಾಗೂ ಎಲ್ಲಾ ಗಾತ್ರದವರಿಗೆ ಸರಿಹೊಂದುವ ಲೇಸ್ ಟ್ರೀಮ್ ಬ್ಯಾಕ್‌ಲೆಸ್ ಟಾಪ್‌ಗಳು, ಪ್ರಿಂಟೆಡ್ ಶಾರ್ಟ್‌ಗಳು, ಬ್ಲೌಸನ್ಸ್ ಮತ್ತು ಟ್ಯೂನಿಕ್ಸ್ ಇಲ್ಲಿ ಲಭ್ಯವಿದೆ.ಬೇರೆ ಬೇರೆ ರೀತಿಯ ವಿನ್ಯಾಸದ ಉಡುಪುಗಳನ್ನು ಒದಗಿಸಿರುವ ವಿನೆಗರ್ ಇದೀಗ ತನ್ನ ಸಂಗ್ರಹದಲ್ಲಿ ಆದಿವಾಸಿ ಶೈಲಿಯನ್ನೂ ಸೇರಿಸಿಕೊಂಡಿದೆ. ಬೆಲ್ಟ್, ಜಾಕೆಟ್, ಸ್ಕರ್ಟ್‌ಗಳ ಮೇಲೆ ಟ್ರೈಬಲ್ ಕಸೂತಿ ಮತ್ತು ಸಿಗ್ನೇಚರ್ ಆಫ್ಕನ್ ಪ್ಯಾಂಟ್‌ಗಳು ಈ ಸಂಗ್ರಹದ ಮುಖ್ಯ ಆಕರ್ಷಣೆ. ವಿನೂತನ ಬಣ್ಣಗಳಿಂದ ವಿನ್ಯಾಸಗೊಂಡ ಈ ಶೈಲಿ ಎಲ್ಲರಿಗೂ ಮೆಚ್ಚುಗೆ ಆಗುವುದರಲ್ಲಿ ಸಂಶಯವಿಲ್ಲ ಎಂಬ ನಂಬಿಕೆ ಕಂಪೆನಿಯದ್ದು.ರೂ.1500ರಿಂದ 6000 ರೂಪಾಯಿವರೆಗಿನ ಉಡುಪುಗಳು ರಾಜಾಜಿನಗರ, ಡಾ.ರಾಜ್‌ಕುಮಾರ್ ರಸ್ತೆಯಲ್ಲಿರುವ ಓರಾಯನ್ ಮಾಲ್‌ನಲ್ಲಿರುವ ವಿನೆಗರ್ ಮಳಿಗೆಯಲ್ಲಿ ಲಭ್ಯವಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry