ಸೋಮವಾರ, ಮೇ 23, 2022
30 °C

ವಿಪತ್ತು ಎದುರಿಸಲು ಸನ್ನದ್ಧರಾಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರ್ಗಲ್: ಪ್ರಕೃತಿಯಲ್ಲಿ ಆಕಸ್ಮಿಕವಾಗಿ ಸಂಭವಿಸುವ ವಿಪತ್ತು ಎದುರಿಸಲು ನಾಗರಿಕ ಸಮಾಜ ಸದಾ ಸನ್ನದ್ಧ ಆಗಿರಬೇಕು ಎಂದು ಸಾಗರ ಉಪ ವಿಭಾಗಾಧಿಕಾರಿ ಡಾ.ಪ್ರವೀಣ್ ಕುಮಾರ್ ತಿಳಿಸಿದರು.ರೆಡ್‌ಕ್ರಾಸ್ ಸೊಸೈಟಿ ಸಾಗರ ಶಾಖೆ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ವತಿಯಿಂದ ಜೋಗದ ಲೋಕೋಪಯೋಗಿ ಇಲಾಖೆಯ ಅತಿಥಿಗೃಹದಲ್ಲಿ ಭಾನುವಾರ ಆರಂಭಗೊಂಡ 3 ದಿನಗಳ ರಾಷ್ಟ್ರೀಯ ವಿಪತ್ತು ನಿರ್ವಹಣಾ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.ವಿಪತ್ತುಗಳನ್ನು ಪರಿಣಾಮಕಾರಿ ಆಗಿ ಎದುರಿಸಲು ಸರ್ಕಾರ ಜಿಲ್ಲಾಡಳಿತದ ನೇತೃತ್ವದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತದೆ. ಇದರ ಅಂಗವಾಗಿ ಆಯ್ದ ಸಾರ್ವಜನಿಕ ಪ್ರತಿನಿಧಿಗಳಿಗೆ ತರಬೇತಿ ನೀಡಲಾಗುತ್ತಿದೆ.ಪ್ರಕೃತಿಯಲ್ಲಿ ಸಂಭವಿಸುವ ವಿಕೋಪಗಳ ಸಂಧರ್ಭದಲ್ಲಿ, ಜನಜೀವನದ ಮೂಲ ಅವಶ್ಯಕತೆಗಳಾದ ಆಹಾರ, ನೀರು, ಆರೋಗ್ಯವನ್ನು ಸರಿದೂಗಿಸಿಕೊಂಡು ಹೋಗುವ ಮತ್ತು ಸಮತೋಲನ ಕಾಯ್ದುಕೊಳ್ಳುವ ಬಗ್ಗೆ ವಿಶೇಷವಾದ ತರಬೇತಿಯನ್ನು ಶಿಬಿರದಲ್ಲಿ ನೀಡಲಾಗುವುದು ಎಂದು ಅವರು ತಿಳಿಸಿದರು.ತಹಶೀಲ್ದಾರ್ ಯೋಗೇಶ್ ಮಾತನಾಡಿ ಈ ಹಿಂದೆ ಮಲೆನಾಡ ಪಶ್ಚಿಮಘಟ್ಟಗಳ ತಪ್ಪಲಿನಲ್ಲಿ ಪ್ರವಾಹಪೀಡಿತ ಪ್ರದೇಶದಲ್ಲಿ ಕಾರ್ಯ ನಿರ್ವಹಿಸಿದ ಅನುಭವಗಳನ್ನು ಹಂಚಿಕೊಂಡರು.ಸಾಗರ ಉಪ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಶರಣಪ್ಪ ಮಾತನಾಡಿ, ಮಾನವ ಜೀವಗಳು ಅಮೂಲ್ಯವಾದದ್ದು. ಶಿಬಿರದಲ್ಲಿ ತರಬೇತಿ ಪಡೆದವರು ವಿಪತ್ತು ಸಂಭವಿಸುವ ಸಂದರ್ಭದಲ್ಲಿ ಸಂತ್ರಸ್ತರ ಜೀವಗಳನ್ನು ಉಳಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದರು.ಸಾಗರ ತಹಶೀಲ್ದಾರ್ ರಾಜಣ್ಣ, ಸೊರಬ ತಹಶೀಲ್ದಾರ್ ಶ್ರೀಧರ ಪಂಡಿತ್, ಹೊಸನಗರ ತಹಶೀಲ್ದಾರ್ ಎಂ. ಕುಲಕರ್ಣಿ ಇನ್ನಿತರ ಮುಖಂಡರು ಇದ್ದರು.ಶಿಬಿರದಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಆಯ್ದ ಶಿಕ್ಷಕರು ಮತ್ತು ಶಿಕ್ಷಕಿಯರು, ಸಂಘ-ಸಂಸ್ಥೆಯ ಪ್ರತಿನಿಧಿಗಳು, ಕಾಲೇಜು ವಿಧ್ಯಾರ್ಥಿಗಳು, ಮಹಿಳಾ ಸಂಘಟನೆಯವರು, ಸಮಾಜಸೇವಕರು ಸೇರಿದಂತೆ 100ಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿದ್ದರು.ಶಿಬಿರದ ಸಂಪನ್ಮೂಲ ವ್ಯಕ್ತಿ ಡಾ.ಕುಮಾರ್ ಸ್ವಾಗತಿಸಿ, ರೋನಿ ಡಿಸೋಜ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.