ವಿಪತ್ತು ನಿರ್ವಹಣೆ ಅಣಕು ಪ್ರದರ್ಶನ

7

ವಿಪತ್ತು ನಿರ್ವಹಣೆ ಅಣಕು ಪ್ರದರ್ಶನ

Published:
Updated:

ಉಡುಪಿ: ಅಗ್ನಿ ಅವಘಡದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಉದ್ದೇಶದಿಂದ ಕನ್ನರ್ಪಾಡಿ ಸಂತ ಮೇರಿ ಪ್ರೌಢಶಾಲೆಯ ಆವರಣದಲ್ಲಿ ಅಗ್ನಿಶಾಮಕ ಇಲಾಖೆ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ  ಕಾರ್ಯಾಚರಣೆಯಲ್ಲಿ ವಿವಿಧ ಅಗ್ನಿಅನಾಹುತಗಳ ಬಗ್ಗೆ ಅಣಕು ಪ್ರದರ್ಶನ ನೀಡಲಾಯಿತು.ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆ ಶಿಕ್ಷಕಿ ಮಾರ್ಡಿಲ್ ಲೂಯಿಸ್ ಮತ್ತು ಅಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿಗಳೊಂದಿಗೆ ಜಿಲ್ಲಾ ಆಸ್ಪತ್ರೆ, ಆರೋಗ್ಯ ಕವಚ, ಆರಕ್ಷಕ ಇಲಾಖೆ ಸಹಯೋಗದಲ್ಲಿ ರಾಷ್ಟ್ರೀಯ ಅಗ್ನಿ ವಿಪತ್ತು ದಿನದ ಅಂಗವಾಗಿ ಅಣಕು ಪ್ರದರ್ಶನ ಕಾರ್ಯಕ್ರಮವನ್ನು ವಿವಿಧ ಕಾರ್ಯಚರಣೆಯ  ಅಣುಕು ಪ್ರದರ್ಶನವನ್ನು ಉಡುಪಿ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ಏರ್ಪಡಿಸಿದ್ದರು.ಈ ಸಂದರ್ಭ ಮಾತನಾಡಿದ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಶಿವಪ್ಪ ಗೌಡ, ಬೆಂಕಿಯ ಅಗಾಧತೆ ಬಗ್ಗೆ ವಿವರಣೆ ನೀಡಿರುವುದಲ್ಲದೆ, ಅಗ್ನಿ ಅನಾಹುತ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಯಾವ ಪ್ರಕಾರದಲ್ಲಿ ಮಾಡಬಹುದು ಎಂಬುದರ ಕುರಿತು ಮಾಹಿತಿ ನೀಡಿದರು.ಇದರೊಂದಿಗೆ ಅಗ್ನಿ ಅನಾಹುತದಲ್ಲಿ ಸಿಲುಕಿರುವವರ ರಕ್ಷಣೆ, ಹಗ್ಗದ ಮೂಲಕ ರಕ್ಷಣೆ, ನಿಚ್ಚಣಿಕೆ ಉಪಯೋಗಿಸಿ ರಕ್ಷಣೆ, ಹೊಗೆ ತುಂಬಿದ ಕೊಠಡಿಯಿಂದ ರಕ್ಷಣೆ, ಬಾವಿಗೆ ಬಿದ್ದವರ ರಕ್ಷಣೆ, ಅಗ್ನಿ ನಂದಿಸುವ ವಿವರ ಮತ್ತು ರಕ್ಷಣಾ ಉಪಕರಣಗಳ ವಿವರ ಹಾಗೂ ಕಾರ್ಯಗಳ ಬಗ್ಗೆ ಅಣಕು ಪ್ರದರ್ಶನದ ಮೂಲಕ ವಿದ್ಯಾರ್ಥಿ, ಅಧ್ಯಾಪಕ ವೃಂದ ಹಾಗೂ ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು. ಉಡುಪಿ ಅಗ್ನಿಶಾಮಕ ಠಾಣೆಯ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿ ಠಾಣೆಯಲ್ಲಿನ ರಕ್ಷಣಾ ವಾಹನಗಳೊಂದಿಗೆ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry