ಭಾನುವಾರ, ಡಿಸೆಂಬರ್ 8, 2019
25 °C

ವಿಪ್ರೊ ಓಟ: 14,000 ಸಿಬ್ಬಂದಿ ಭಾಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಪ್ರೊ ಓಟ: 14,000 ಸಿಬ್ಬಂದಿ ಭಾಗಿ

ಬೆಂಗಳೂರು: ಮಾಹಿತಿ ತಂತ್ರಜ್ಞಾನ, ಸಮಾಲೋಚನೆ ಹಾಗೂ ಹೊರಗುತ್ತಿಗೆ ಕ್ಷೇತ್ರಗಳಲ್ಲಿ ಮಂಚೂಣಿ­ಯಲ್ಲಿರುವ ವಿಪ್ರೊ ಸಂಸ್ಥೆ ತನ್ನ ವಾರ್ಷಿಕ ಚಟು­ವಟಿಕೆ­ಯ ಭಾಗವಾಗಿ   ಎಂಟನೆಯ ಆವೃತ್ತಿಯ ‘ಸ್ಪಿರಿಟ್ ಆಫ್ ರನ್’ ಕಾರ್ಯಕ್ರಮ ನಗರದಲ್ಲಿ ಭಾನುವಾರ ನಡೆಯಿತು.

ಏಕಕಾಲಕ್ಕೆ 97 ನಗರಗಳಲ್ಲಿ ಓಟ ಆಯೋಜಿಸ­ಲಾಗಿತ್ತು. ನಗರದಲ್ಲಿ ನಡೆದ ಓಟದಲ್ಲಿ 14,000ಕ್ಕೂ ಅಧಿಕ ವಿಪ್ರೊ ಉದ್ಯೋಗಿಗಳು, ಅವರ ಕುಟುಂಬ ವರ್ಗ, ಸ್ನೇಹಿತರು, ಗ್ರಾಹಕರು, ವಿಶ್ಲೇಷಕರು ಹಾಗೂ ವಿತರಕರು ಪಾಲ್ಗೊಂಡಿದ್ದರು.‘ಬಲು ದೂರದ ಓಟಕ್ಕಾಗಿ’ ಅಥವಾ ‘ಬಹು­ಕಾಲದ ಬಾಳ್ವಿಕೆಗಾಗಿ’ ಎಂಬ ಕಲ್ಪನೆ ಈ ವರ್ಷದ ಓಟದ ಮುಖ್ಯ ವಿಷಯ. ಓಟಕ್ಕೆ  ಸಂಸ್ಥೆಯ ಮುಖ್ಯಸ್ಥ ಅಜೀಂ ಪ್ರೇಮ್‌ಜಿ ಚಾಲನೆ ನೀಡಿದರು.ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ  ಟಿ.ಕೆ.ಕುರಿಯನ್ ಮಾತನಾಡಿ, ‘ವೈಯಕ್ತಿಕ ಹಾಗೂ ಕಾರ್ಪೊರೇಟ್ ಬದುಕಿನಲ್ಲಿ ಸಹಿಷ್ಣುತೆಯ ಮಹತ್ವ­ವನ್ನು ‘ಸ್ಪಿರಿಟ್ ಆಫ್ ವಿಪ್ರೊ ಓಟ’ ಸಾರಿ ಹೇಳುತ್ತದೆ.  ಬೆಂಗಳೂರು ಸೇರಿ 97 ನಗರಗಳಲ್ಲಿ ಈ ಓಟ ನಡೆಯುತ್ತಿದೆ. 50 ಸಾವಿರಕ್ಕೂ ಅಧಿಕ ಮಂದಿ ಭಾಗಿಗಳಾಗಿದ್ದಾರೆ‘’ ಎಂದರು.‘ಮೊದಲ ಬಾರಿಗೆ, ಜಗತ್ತಿನ ನಾಲ್ಕು ನಗರಗಳಲ್ಲಿ ಓಟ ಪೂರ್ಣಗೊಳಿಸಲು ಬೇಕಾಗುವ ಅವಧಿಯನ್ನು ಅಧಿಕೃತವಾಗಿ ದಾಖಲುಗೊಳಿಸಲಾಗುವುದು. ಅಂತೆಯೇ, ಓಟವನ್ನು ಐದು ಬೇರೆ ಬೇರೆ ಭಾಗಗಳಲ್ಲಿ ಸಂಘಟಿಸಲಾಗುವುದು. ಬೆಂಗಳೂರಿನಲ್ಲಿ ಮೊದಲ ಬಾರಿಗೆ ಎಲಿವೇಟೆಡ್ ಹೆದ್ದಾರಿಯ ಮೇಲೆ ಈ ಓಟವನ್ನು ಏರ್ಪಡಿಸಲಾಗಿದೆ’ ಎಂದರು.ಓಟದಿಂದ ಸಂಗ್ರಹಿಸಲಾಗುವ ಆದಾಯವನ್ನು ವಿಪ್ರೊ ಸಮುದಾಯ ಯೋಜನೆಗಳ ಅಂಗವಾದ ವಿಪ್ರೊ ಕೇರ್ ಗುರುತಿಸುವ ಸ್ಥಳಿಯ ಕಾರ್ಯಗಳ ಅಭಿ­ವೃದ್ಧಿಯನ್ನು ಬೆಂಬಲಿಸಲು ವಿನಿಯೋಗಿಸಲಾಗುವುದು.

ಪ್ರತಿಕ್ರಿಯಿಸಿ (+)