ವಿಪ್ರೊ: ರೂ. 1,318 ಕೋಟಿ ನಿವ್ವಳ ಲಾಭ

7

ವಿಪ್ರೊ: ರೂ. 1,318 ಕೋಟಿ ನಿವ್ವಳ ಲಾಭ

Published:
Updated:

ಬೆಂಗಳೂರು: ದೇಶದ ಮೂರನೇ ಅತಿ ದೊಡ್ಡ ಸಾಫ್ಟ್‌ವೇರ್ ರಫ್ತು ಸಂಸ್ಥೆಯಾಗಿರುವ ವಿಪ್ರೊ ಟೆಕ್ನಾಲಜೀಸ್, ಮೂರನೇ ತ್ರೈಮಾಸಿಕದಲ್ಲಿ ರೂ. 1,318 ಕೋಟಿಗಳಷ್ಟು ನಿವ್ವಳ ಲಾಭ ಗಳಿಸಿದೆ.

ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ನಿವ್ವಳ ಲಾಭವು ಶೇ 10ರಷ್ಟು ಮಾತ್ರ ಹೆಚ್ಚಳವಾಗಿದೆ. ಒಟ್ಟು ವರಮಾನವು ಶೇ 12ರಷ್ಟು ಏರಿಕೆಯಾಗಿ ರೂ. 7829 ಕೋಟಿಗಳಷ್ಟಾಗಿದೆ. ಸಂಸ್ಥೆಯ ಒಟ್ಟಾರೆ ವಹಿವಾಟಿನಲ್ಲಿ ಶೇ 76ರಷ್ಟಿರುವ ಐ.ಟಿ ಸೇವೆಯ ವರಮಾನವು  ರೂ. 5,949 ಕೋಟಿಗಳಷ್ಟಾಗಿದ್ದು ವರ್ಷದಿಂದ ವರ್ಷಕ್ಕೆ ಶೇ 15ರಷ್ಟು ಏರಿಕೆ ದಾಖಲಿಸಿದೆ.

‘ನಮ್ಮ ಸಾಮರ್ಥ್ಯಕ್ಕೆ ಮತ್ತು ಪ್ರತಿಸ್ಪರ್ಧಿ ಸಂಸ್ಥೆಗಳಿಗಿಂತ ನಮ್ಮ ಹಣಕಾಸು ಸಾಧನೆ ಕಡಿಮೆ ಮಟ್ಟದಲ್ಲಿ ಇದೆ. ಆರೋಗ್ಯ ಮತ್ತು ಹಣಕಾಸು ಸೇವಾ ವಿಭಾಗದಲ್ಲಿ ಪುನಶ್ಚೇತನಕ್ಕೆ  ಇದ್ದ ಅವಕಾಶಗಳನ್ನು ನಾವು ಸದುಪಯೋಗ ಮಾಡಿಕೊಂಡಿಲ್ಲ’ ಎಂದು ಸಂಸ್ಥೆಯ ಅಧ್ಯಕ್ಷ ಅಜೀಂ ಪ್ರೇಮ್‌ಜಿ ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry