ವಿಮಾನದಲ್ಲಿ ಅನುಚಿತ ವರ್ತನೆ; ಲಂಕಾದ ರಮಿತ್‌ಗೆ ದಂಡ

ಬುಧವಾರ, ಜೂಲೈ 24, 2019
23 °C

ವಿಮಾನದಲ್ಲಿ ಅನುಚಿತ ವರ್ತನೆ; ಲಂಕಾದ ರಮಿತ್‌ಗೆ ದಂಡ

Published:
Updated:

ಕೊಲಂಬೊ (ಪಿಟಿಐ): ಬ್ರಿಟಿಷ್ ಏರ್‌ವೇಸ್ ವಿಮಾನದಲ್ಲಿ ಕುಡಿದು ಅನುಚಿತವಾಗಿ ವರ್ತಿಸಿದ್ದ ಶ್ರೀಲಂಕಾ `ಎ' ತಂಡದ ಆಟಗಾರ ರಮಿತ್ ರಂಬುಕುವೆಲಾ ಅವರ ಮೇಲೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ದಂಡ ವಿಧಿಸಿದೆ. ವೆಸ್ಟ್‌ಇಂಡೀಸ್ ಪ್ರವಾಸದ ಸಂಭಾವನೆಯ ಶೇಕಡಾ 50ರಷ್ಟು ದಂಡವನ್ನು ಅವರ ಮೇಲೆ ವಿಧಿಸಲಾಗಿದೆ.ಕೆರಿಬಿಯನ್ ಪ್ರವಾಸ ಮುಗಿಸಿ ಲಂಡನ್‌ನ ಗ್ಯಾಟ್ವಿಕ್‌ಗೆ ಹಿಂತಿರುಗುತ್ತಿದ್ದಾಗ ರಮಿತ್ ಕುಡಿದ ಮತ್ತಿನಲ್ಲಿ ವಿಮಾನದ ಮುಖ್ಯ ಬಾಗಿಲು ತೆಗೆಯಲು ಪ್ರಯತ್ನಿಸ್ದ್ದಿದರು. ಇದರಿಂದ ಪ್ರಯಾಣಿಕರು ಆತಂಕಕ್ಕೆ ಒಳಗಾಗಿದ್ದರು. ಆದರೆ `ವಿಮಾನದೊಳಗೆ ಮಂದ ಬೆಳಕಿದ್ದ ಕಾರಣ ಶೌಚಾಲಯದ ಬಾಗಿಲು ಎಂದು ಭಾವಿಸಿ ಈ ರೀತಿ ಮಾಡ್ದ್ದಿದರು' ಎಂದು `ಡೇಲಿ ಮೇಲ್' ವರದಿ ಮಾಡಿತ್ತು.ಈ ಪ್ರಕರಣದ ಬಗ್ಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ತನಿಖೆಗೆ ಆದೇಶಿಸಿತ್ತು. 21 ವರ್ಷ ವಯಸ್ಸಿನ ರಮಿತ್ `ನಿದ್ದೆಯಲ್ಲಿ ನಡೆಯುವ ಸಮಸ್ಯೆ' ಎಂದು ತಮ್ಮನ್ನು ಸಮರ್ಥಿಸಿಕೊಂಡಿದ್ದರು. ರಮಿತ್ ಅವರ ತಂದೆ ಲಂಕಾ ಸರ್ಕಾರದಲ್ಲಿ ಸಚಿವರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry