ಸೋಮವಾರ, ಮೇ 10, 2021
25 °C

ವಿಮಾನದ ಕಾಕ್‌ಪಿಟ್ ಅನಧಿಕೃತ ಪ್ರವೇಶಕ್ಕೆ ತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ವಿಮಾನದ ಕಾಕ್‌ಪಿಟ್ (ಚಾಲಕರ ಸ್ಥಳ) ಮತ್ತು ಫ್ಲೈಯರ್ ಒಳಗೆ ಸಾರ್ವಜನಿಕರು ಅನಧಿಕೃತವಾಗಿ ಪ್ರವೇಶಿಸಿ ಅಲ್ಲಿಂದ ಛಾಯಾಚಿತ್ರಗಳನ್ನು ತೆಗೆಯಲು ಪೈಲಟ್‌ಗಳು ಅನುಮತಿ ನೀಡುವುದನ್ನು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ಗಂಭೀರವಾಗಿ ಪರಿಗಣಿಸಿದೆ. ಈ ವಿಷಯದಲ್ಲಿ ನಿಯಮ ಉಲ್ಲಂಘಿಸುವ ವಿಮಾನಯಾನ ಸಂಸ್ಥೆಗಳು ಮತ್ತು ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅದು ಎಚ್ಚರಿಕೆ ನೀಡಿದೆ.ಪ್ರಯಾಣಿಕರು ಕಾಕ್‌ಪಿಟ್‌ಗೆ ಅನಧಿಕೃತವಾಗಿ ಪ್ರವೇಶಿಸುವ ಬಗ್ಗೆ ದೂರುಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಡಿಜಿಸಿಎ ಈ ಎಚ್ಚರಿಕೆ ನೀಡಿದೆ.ಇಂಥ ಘಟನೆಗಳು 1937ರ ವಿಮಾನ ನಿಯಮಗಳಲ್ಲದೆ 1997ರ ವೈಮಾನಿಕ ಮಾಹಿತಿ ಸುತ್ತೋಲೆಯ ಉಲ್ಲಂಘನೆ ಸಹ ಆಗಿದೆ ಎಂದು ನಿರ್ದೇಶನಾಲಯ ಸುತ್ತೋಲೆಯಲ್ಲಿ ತಿಳಿಸಿದೆ.9/11ರ ಮುಂಬೈ ದಾಳಿಯ ನಂತರ ವಿಮಾನಗಳಲ್ಲಿನ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.