ಗುರುವಾರ , ಮೇ 6, 2021
31 °C

ವಿಮಾನ ಅಪಘಾತ: 10 ಭಾರತೀಯರು ಸೇರಿ 19 ಜನರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಠ್ಮಂಡು(ಪಿಟಿಐ): ‌ಎವೆರೆಸ್ಟ್  ಶಿಖರದ ವಿಕ್ಷಣೆಗೆ ತೆರಳಿದ್ದ ಪ್ರವಾಸಿಗರನ್ನು ಕೊಂಡೊಯುದಿದ್ದ ಸಣ್ಣ ವಿಮಾನವೊಂದು ಹಿಂದಿರುಗುತ್ತಿದ್ದಾಗ ನೇಪಾಳದ ರಾಜಧಾನಿ ಹತ್ತಿರದ ಕೊಟ್ದಾಂಡದ ಬೆಟ್ಟಕ್ಕೆ ಅಪ್ಪಳಿಸಿದ ಪರಿಣಾಮ ಅದರಲ್ಲಿದ್ದ 10 ಭಾರತೀಯರು ಸೇರಿದಂತೆ 19 ಜನರು ಸಾವಿಗೀಡಾಗೀಡಾದ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ.

ಸ್ಫಳೀಯ ಕಾಲಮಾನ 7.30ರ ವೇಳೆಗೆ ಬುದ್ಧ ಏರ್‌ಲೈನ್ ಎಂಬ ಖಾಸಗಿ ವಿಮಾನ ಸಂಸ್ಥೆಗೆ ಸೇರಿದ  ~ಬೀಚ್‌ಕ್ರಾಪ್ಟ್ ಪ್ಲೇನ್~ (ಬಿಎಚ್‌ಎ103) ವಿಮಾನ ಅಪಘಾತಕ್ಕೀಡಾಯಿತು ಎಂದು ನೇಪಾಳದ ನಾಗರಿಕ ವಿಮಾನಯಾನ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.

ಈ ಅಪಘಾತದಲ್ಲಿ ಮೃತರಾದ ವಿಮಾನದಲ್ಲಿದ್ದ 19 ಪ್ರಯಾಣಿಕರಲ್ಲಿ 10 ಜನ ಭಾರತೀಯರು, ಇಬ್ಬರು ಅಮೆರಿಕನ್ನರು ಮತ್ತು  ಒಬ್ಬ ಜಪಾನ್ ದೇಶದ ಪ್ರಜೆಯಾಗಿದ್ದರೆ ಉಳಿದವರು ನೇಪಾಳಕ್ಕೆ ಸೇರಿದವರು  ಪ್ರಾಧಿಕಾರದ ಅಧಿಕಾರಿಗಳು ಹೇಳಿದ್ದಾರೆ.

ಸಾವಿಗೀಡಾದ ಭಾರತೀಯರನ್ನು ಪಂಕಜ್ ಮೆಹ್ತಾ ಮತ್ತು ಪತ್ನಿ ಛಾಯಾ ಹಾಗೂ ತಮಿಳುನಾಡಿನ ಎಂ.ವಿ.ಮರ್ಥಾಚಲಂ, ಮಣಿಮಾರನ್, ವಿ.ಎಂ. ಕನಕಸಬೇಸನ್, ಎ.ಕೆ.ಕೃಷ್ಣನ್, ಆರ್.ಎಂ.ಮೀನಾಕ್ಷಿ ಸನ್ಸರಮ್, ಕೆ.ತ್ಯಾಗರಾಜನ್, ಟಿ.ಧನಶೇಖರನ್ ಮತ್ತು ಕಾಟೂಸ್ ಮಹಾಲಿಂಗಂ ಎಂದು ಗುರುತಿಸಲಾಗಿದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.