ವಿಮಾನ ಅಪಘಾತ: 50ಕ್ಕೂ ಹೆಚ್ಚು ಸಾವು

7

ವಿಮಾನ ಅಪಘಾತ: 50ಕ್ಕೂ ಹೆಚ್ಚು ಸಾವು

Published:
Updated:

ಟೆಹರಾನ್ (ಡಿಪಿಎ/ಎಪಿ): ಇರಾನಿನ ಪ್ರಯಾಣಿಕ ವಿಮಾನವೊಂದು ಅಜರ್‌ಬೈಜಾನ್ ಪ್ರಾಂತ್ಯದ ಒರುಮೀಹ್‌ನ ಬಳಿ ಕೆಟ್ಟ ಹವಾಮಾನ ಮತ್ತು ದಟ್ಟ ಮಂಜಿನಿಂದ ಭಾನುವಾರ ರಾತ್ರಿ ಅಪಘಾತಕ್ಕೀಡಾಗಿದೆ.ವಿಮಾನದಲ್ಲಿದ್ದ ಎಲ್ಲ 105 ಪ್ರಯಾಣಿಕರು ಮತ್ತು ವಿಮಾನದ ಸಿಬ್ಬಂದಿ ಮೃತಪಟ್ಟಿರುವುದಾಗಿ ‘ಇಸ್ನಾ’ ಸುದ್ದಿಸಂಸ್ಥೆ ವರದಿ ಮಾಡಿದೆ. ಆದರೆ 50 ಮಂದಿ ಗಾಯಗೊಂಡಿರುವುದಾಗಿ  ‘ಫಾರ್ಸ್‌’ ಸುದ್ದಿಸಂಸ್ಥೆ ತಿಳಿಸಿದೆ. ವಿಮಾನದಲ್ಲಿದ್ದ 95 ಜನರಲ್ಲಿ ಅರ್ಧದಷ್ಟು ಬದುಕುಳಿದಿದ್ದಾರೆ ಎಂದು ಇರಾನ್ ಟಿವಿ ಹೇಳಿದೆ. ಬೋಯಿಂಗ್ ವಿಮಾನ ಹಲವು ತುಂಡುಗಳಾಗಿ ಬಿದ್ದಿದ್ದು ಆದರೆ ಬೆಂಕಿ ಹತ್ತಿಕೊಂಡಿಲ್ಲ. ಅಪಘಾತ ಪ್ರದೇಶದಲ್ಲಿ ಭಾರಿ ಹಿಮಪಾತ ಇರುವುದರಿಂದ ರಕ್ಷಣಾ ಕಾರ್ಯಕ್ಕೆ ತೊಡಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry