ಮಂಗಳವಾರ, ಜೂನ್ 15, 2021
27 °C
ಅಪಹರಣದ ಶಂಕೆ, ಶೋಧ ಕಾರ್ಯ ಚುರುಕು

ವಿಮಾನ ನಾಪತ್ತೆ ನಿಗೂಢ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕ್ವಾಲಾಲಂಪುರ/ ಬೀಜಿಂಗ್‌ (ಪಿಟಿಐ­/­ಐಎಎ­ನ್‌ಎಸ್‌): ವಿಯೆಟ್ನಾಂನ ದಕ್ಷಿಣ ಭಾಗದ ಫು ಕೋ ದ್ವೀಪದ ಸಮೀಪ ಪತನಗೊಂಡಿರುವ ಮಲೇಷ್ಯಾ ಏರ್‌­ಲೈನ್ಸ್‌ನ ವಿಮಾನ ಭಾನು­ವಾರವೂ ಪತ್ತೆ­ಯಾ­ಗಿಲ್ಲ.  ಶೋಧ­­ಕಾರ್ಯ ಭರ­ದಿಂದ ಸಾಗಿದ್ದು, ಉಗ್ರರು ವಿಮಾನ ಅಪಹರಿಸಿರುವ ಶಂಕೆ ವ್ಯಕ್ತವಾಗಿದೆ.ರಕ್ಷಣಾ ಕಾರ್ಯಕ್ಕಾಗಿ ಆರು ದೇಶ ಗಳು ಕೈಜೋಡಿಸಿವೆ. ಇದಕ್ಕಾಗಿ ಹಡಗು ಮತ್ತು ವಿಮಾನಗಳನ್ನು ಬಳಸಿಕೊಳ್ಳ ಲಾಗುತ್ತಿದೆ. ರಕ್ಷಣಾ ಕಾರ್ಯಕ್ಕೆ ಮೂರು ಜೆಟ್‌ ವಿಮಾನಗಳನ್ನು ಕಳುಹಿಸ­ಲಾಗಿದೆ ಎಂದು ಮಲೇಷ್ಯಾ ನಾಗರಿಕ ವಿಮಾನಯಾನ ಅಧಿಕಾರಿ ಗಳು ಹೇಳಿದ್ದಾರೆ. ಸಿಂಗಪುರ ಎರಡು ಯುದ್ಧ ವಿಮಾನ ಹಾಗೂ ನೌಕಾಪಡೆ ಹೆಲಿಕಾಪ್ಟರ್‌ ಕಳುಹಿಸಿಕೊಟ್ಟಿದೆ.ವಿಮಾನ ಪತ್ತೆಗೆ ಅಮೆರಿಕದ ಅಟ್ಲಾಂಟಾ ವಿಪತ್ತು  ನಿರ್ವಹಣಾ ತಜ್ಞರ ನೆರವನ್ನೂ ಸಹ ಪಡೆಯ­ಲಾಗಿದೆ. ಶನಿವಾರ ರಾತ್ರಿಯಿಡೀ ವಿಮಾನಕ್ಕೆ ಹುಡುಕಾಟ ನಡೆಸಲಾ­ಗಿತ್ತು. ಆದರೆ ನತದೃಷ್ಟ ವಿಮಾನದ ಯಾವುದೇ ಅವಶೇಷಗಳು ಸಮುದ್­ರದಲ್ಲಿ ಕಂಡು­ಬಂದಿಲ್ಲ.ವಿಮಾನ ಕಣ್ಮರೆ ಬಗ್ಗೆ ಸರಿಯಾದ ಮಾಹಿತಿ ನೀಡುವಲ್ಲಿ ಮಲೇಷ್ಯಾ ಏರ್‌ಲೈನ್ಸ್‌ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಪ್ರಯಾಣಿಕರ ಸಂಬಂಧಿಗಳ ಆರೋಪಕ್ಕೆ ಪ್ರತಿಕ್ರಿಯಿ­ಸಿರುವ ಕಂಪೆನಿ, ಈ ನಿಟ್ಟಿನಲ್ಲಿ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದೆ. ಮಲೇಷ್ಯಾದ ಕೋಟ ಬರು ನಗರ, ಹೊಚಿಮಿನ್‌ ಸಿಟಿ ಹಾಗೂ ವಿಯೆಟ್ನಾಂನಲ್ಲಿ ಪ್ರಯಾಣಿಕರ ಬಗ್ಗೆ ಮಾಹಿತಿ ನೀಡುವ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.ವಿಮಾನದಲ್ಲಿ ಯಾವುದೇ ರೀತಿಯ  ತಾಂತ್ರಿಕ ದೋಷ ಇದ್ದಿರಲಿಲ್ಲ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶಕ ಅಜರುದ್ದಿನ್‌ ಅಬ್ದುಲ್‌ ರೆಹಮಾನ್‌ ಹೇಳಿದ್ದಾರೆ.ಕದ್ದ ಪಾಸ್‌ಪೋರ್ಟ್‌ಗಳನ್ನು ಮಾರಾಟ ಮಾಡುವವರ ಬಗ್ಗೆ ತನಿಖೆ ನಡೆಸುತ್ತಿ­ರುವುದಾಗಿ ಅವರು ವಿವರಿಸಿದ್ದಾರೆ.  ನಕಲಿ ಪಾಸ್‌ಪೋರ್ಟ್‌ ಬಳಸಿದ ಪ್ರಯಾಣಿಕರ ಬಗ್ಗೆ  ಇತರ ದೇಶಗಳ ಭಯೋತ್ಪಾದನಾ ನಿಗ್ರಹ ತಂಡಗಳಿಗೆ ಮಾಹಿತಿ ನೀಡಲಾಗಿದೆ. ಇಟಲಿಯ ಲುಗಿ ಮರಾಲ್ಡಿ  ಹಾಗೂ ಅಸ್ಟ್ರೀಯಾದ ಕ್ರಿಸ್ಟಿಯನ್‌ ಕೋಜಲ್‌ ಕಳೆದುಕೊಂಡಿದ್ದ ಪಾಸ್‌­ಪೋರ್ಟ್‌ ಅನ್ನು ಮೋಸದಿಂದ ಬಳಸಿ ಇಬ್ಬರು ವ್ಯಕ್ತಿಗಳು ಕಣ್ಮರೆ­ಯಾದ ವಿಮಾ­ನದಲ್ಲಿ ಪ್ರಯಾಣಿ­ಸಿ­ದ್ದಾರೆ ಎಂದು ಮಲೇಷ್ಯಾ ಸಚಿವ ಹಿಶಾ­ಮ್‌­­ಮುದ್ದಿನ್‌ ಹೇಳಿದ್ದಾರೆ.  ಪತ್ತೆ ಹಚ್ಚಲು ಎಫ್‌ಬಿಐ ಸೇರಿ­ದಂತೆ ಬೇಹು­ಗಾರಿಕೆ ಏಜೆಸ್ಸಿ­ಯೊಂದಿಗೆ ಸಂಪ­ರ್ಕ­ದಲ್ಲಿ ರುವುದಾಗಿ ಹೇಳಿದ್ದಾರೆ. ಸುಳ್ಳು ಮಾಹಿತಿ ನೀಡಿ ಪ್ರಯಾಣಿ­ಸಿ­ರುವ ನಾಲ್ವರ ಬಗ್ಗೆ ಮಾತ್ರ ತನಿಖೆ ನಡೆ­ಸ­ದೇ ಎಲ್ಲ ಪ್ರಯಾಣಿಕರ ಮಾಹಿತಿ ಸಂಗ್ರ­­­ಹಿಸುತ್ತಿದ್ದೇವೆ ಎಂದು

ವಿವರಿಸಿ­ದ್ದಾರೆ.ನಕಲಿ ಪಾಸ್‌ಪೋರ್ಟ್‌ ನೀಡಿ ಪ್ರಯಾಣಿಸಿರುವ ಇಬ್ಬರು ಒಟ್ಟಿಗೆ ಟಿಕೆಟ್‌ ಖರೀದಿ ಮಾಡಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.ಟಿಕೆಟ್‌ಗಳನ್ನು ಚೀನಾ ದಕ್ಷಿಣಾ ಏರ್‌ಲೈನ್ಸ್‌ನ ಥಾಯ್‌ಬಾತ್‌ನಲ್ಲಿ ಪಡೆದಿದ್ದು, ಅವುಗಳ ಸಂಖ್ಯೆ ಒಂದಾದ ನಂತರ ಒಂದಿದೆ.ಉಗ್ರರ ಕೃತ್ಯದ ಶಂಕೆ: ವಿಮಾನ ಕಣ್ಮರೆ ಹಿಂದೆ ಉಗ್ರರ ಕೃತ್ಯದ ಶಂಕೆಯನ್ನು ಪೊಲೀಸ್‌ ಮಹಾ ನಿರ್ದೇಶಕ ಖಾಲಿದ್‌ ಅಬು ಬಕರ್‌, ಪೂರ್ಣವಾಗಿ ತಳ್ಳಿಹಾಕಿಲ್ಲ.ಕ್ವಾಲಾಲಂಪುರ ವಿಮಾನ ನಿಲ್ದಾಣ ದಲ್ಲಿನ ಸಿಸಿಟಿವಿ ದೃಶ್ಯಗಳನ್ನು ಪಡೆದು ತನಿಖೆಗೊಳಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.ವಿಮಾನವು ಸಮುದ್ರಕ್ಕೆ ಬಿದ್ದಿರು­ವುದಕ್ಕೆ ಸಾಕ್ಷಿಯಾಗಿ ಸುಮಾರು 10 ರಿಂದ 15 ಕಿ.ಮೀ. ವ್ಯಾಪ್ತಿಯಲ್ಲಿ ತೈಲ ಚೆಲ್ಲಿದೆ. ಇದು ಪತನಗೊಂಡಿರುವ ವಿಮಾನದ್ದು ಎಂದು ಅನುಮಾನಿಸ­ಲಾಗಿದೆ.ತೈಲ ಚೆಲ್ಲಿರುವುದನ್ನು ವಿಯೆಟ್ನಾಂ ಹೆಲಿಕಾಪ್ಟರ್‌ ಸಹ ಪತ್ತೆ ಹಚ್ಚಿದೆ. ಎಂಎಚ್‌ 370 ವಿಮಾನ  ಪತನಗೊಳ್ಳುವುದಕ್ಕಿಂತ 30 ನಿಮಿಷ ಮೊದಲು ಅದನ್ನು ಸಂಪರ್ಕಿಸಿದ್ದಾಗಿ ಬೋಯಿಂಗ್‌ 777 ವಿಮಾನದ ಪೈಲಟ್‌ ಒಬ್ಬರು ಹೇಳಿದ್ದಾರೆ. ವಿಯೆಟ್ನಾಂ ವಾಯು ನಿಯಂತ್ರಣ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿರುವುದಾಗಿ ಅವರು ತಿಳಿಸಿದ್ದಾರೆ.ಆದರೆ ಎಂಎಚ್‌ 370 ವಿಮಾನ ಕಣ್ಮರೆಯಾಗುವುದಕ್ಕಿಂತ ಮೊದಲು ಯಾವುದೇ ಪೈಲಟ್‌ ಸಂಪರ್ಕ ಸಾಧಿಸಿಲ್ಲ ಎಂದು ವಿಮಾನ­ಯಾನ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.ರವಾನೆಯಾಗದ ಸಂದೇಶ

ವಿಮಾನ ಬೀಳುವ ಸುಳಿವು ಪೈಲಟ್‌ಗೆ ಸಿಕ್ಕಿದ್ದರೂ ಆ ಕುರಿತು ತುರ್ತು ಸಂದೇಶ ರವಾನಿಸಲು ಸಾಧ್ಯ­ವಾಗಿಲ್ಲ ಎಂದು ತಜ್ಞರು ಶಂಕಿಸಿದ್ದಾರೆ.ನಕಲಿ ಗುರುತು ತನಿಖೆ

ನಕಲಿ ಗುರುತು ನೀಡಿ ವಿಮಾನದಲ್ಲಿ ಪ್ರಯಾಣಿಸಿರುವ ನಾಲ್ವರು ಪ್ರಯಾಣಿ ಕರ ಬಗ್ಗೆ ಮಲೇಷ್ಯಾ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.ಸಮುದ್ರದಲ್ಲಿ ಪತನ ?

ವಿಮಾನವು ಸಮುದ್ರದಲ್ಲಿ ಬಿದ್ದಿದೆ ಎಂದು ಚೀನಾದ ವಿಪತ್ತು ಪರಿಹಾರ ತಂಡ ಅನುಮಾನಿಸಿದೆ. ವಿಯೆಟ್ನಾಂ ಸಮುದ್ರದಲ್ಲಿ ತೈಲ ಚೆಲ್ಲಿರುವ ಗುರುತು ಕಂಡು ಬಂದಿದೆ ಎಂದು ಅದು ಹೇಳಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.