ವಿಮಾನ ನಿಲ್ದಾಣಕ್ಕೆ ಸರದಾರ ಶರಣಗೌಡರ ಹೆಸರಿಡಿ

7

ವಿಮಾನ ನಿಲ್ದಾಣಕ್ಕೆ ಸರದಾರ ಶರಣಗೌಡರ ಹೆಸರಿಡಿ

Published:
Updated:

ಗುಲ್ಬರ್ಗ: ಹೈದರಾಬಾದ್ ಕರ್ನಾಟಕ ವಿಮೋಚನೆಯ ಸೂರ್ಯಕಿರಣ, ಸ್ವಾತಂತ್ರ್ಯ ಹೋರಾಟಗಾರ ಸರದಾರ ಶರಣಗೌಡ ಇನಾಮದಾರ ಅವರ ಉಕ್ಕಿನ ಮೂರ್ತಿಯನ್ನು ಮಿನಿ ವಿಧಾನಸೌಧದ ಎದುರುಗಡೆ ಸ್ಥಾಪಿಸಬೇಕು ಹಾಗೂ  ಗುಲ್ಬರ್ಗದಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣಕ್ಕೆ ಅವರ ಹೆಸರು ಇಡುವಂತೆ ಕನ್ನಡ ಸೈನ್ಯ ಶನಿವಾರ ಇಲ್ಲಿ ಒತ್ತಾಯಿಸಿತು.



ಈ ಕುರಿತು ವಿಧಾನಪರಿಷತ್ ಸದಸ್ಯ ಶಶೀಲ್ ನಮೋಶಿ ಅವರ ಮೂಲಕ  ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು. ಇನಾಮದಾರ್ ಅವರಿಗೆ ಕರ್ನಾಟಕ ರತ್ನ ಮರಣೋತ್ತರ ಪ್ರಶಸ್ತಿ ನೀಡಬೇಕು. ಅವರ ಹೋರಾಟದ ಸಾಹಸಗಾಥೆಯನ್ನು ಶಾಲಾ ಪಠ್ಯಕ್ರಮದಲ್ಲಿ ಅಳವಡಿಸಬೇಕು. ಅವರ ಹುಟ್ಟುಹಬ್ಬವನ್ನು ‘ಕರ್ನಾಟಕ ಹಿರಿಯ ಸ್ವಾತಂತ್ರ್ಯ ಹೋರಾಟಗಾರರ ದಿನ’ ಎಂದು ಆಚರಿಸಬೇಕು ಹಾಗೂ ರಾಜ್ಯಮಟ್ಟದ ಸರದಾರ ಶರಣಗೌಡ ಇನಾಮದಾರ ಪ್ರಶಸ್ತಿ ಸ್ಥಾಪಿಸಬೇಕು ಎಂದು ಮನವಿಪತ್ರ ಆಗ್ರಹಿಸಿದೆ.ಸೋಮನಾಥ ಎಲ್.ಕಟ್ಟಿಮನಿ, ಎ.ಪಿ.ವೆಂಕಟೇಶ, ರಾಜಶೇಖರ ಎಲ್.ಕೆ., ಮಂಜುನಾಥ ಮತ್ತಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry