ಮಂಗಳವಾರ, ಜನವರಿ 28, 2020
24 °C

ವಿಮಾನ ನಿಲ್ದಾಣದಲ್ಲಿ ಬೆಂಕಿ ಆಕಸ್ಮಿಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್): ಇಲ್ಲಿನ ಇಂದಿರಾಗಾಂಧಿ ಅಂತರರಾಷ್ಟೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ಸಂಭವಿಸಿದ ಅಗ್ನಿ ಆಕಸ್ಮಿಕ ಆತಂಕಕ್ಕೆ ಎಡೆಕೊಟ್ಟಿತ್ತು.ಕಾರ್ಗೊ ಟರ್ಮಿನಲ್ಸ್‌ನಲ್ಲಿ ಮಧ್ಯಾಹ್ನ 12.45ರ ಸುಮಾರಿಗೆ ಬೆಂಕಿ ಹೊತ್ತಿ ಉರಿಯತೊಡಗಿದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಯತ್ನಿಸುತ್ತಿರುವಾಗಲೇ ಅದು ಕಟ್ಟಡದ ಮೊದಲ ಅಂತಸ್ತಿಗೂ ವ್ಯಾಪಿಸಿತ್ತು. ಅದರ ಪಕ್ಕದಲ್ಲಿಯೇ `ಏರ್ ಟ್ರಾಫಿಕ್ ಕಂಟ್ರೋಲ್~ ಕಟ್ಟಡವಿದ್ದು, ಅದರಲ್ಲಿ ಸುಮಾರು 20ದೇಶಗಳ ವಿಮಾನ ಯಾನ ಸಂಸ್ಥೆಗಳ ಕಚೇರಿಗಳಿದ್ದವು. ಕೊನೆಗೂ 4.30ರ ಸುಮಾರಿಗೆ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲು ಸಾಧ್ಯವಾಯಿತು. ಅಪಾರ ಪ್ರಮಾಣದ ನಷ್ಟ ಉಂಟಾಗಿದೆ ಎನ್ನಲಾಗಿದೆ.

 

ಪ್ರತಿಕ್ರಿಯಿಸಿ (+)