ಗುರುವಾರ , ನವೆಂಬರ್ 21, 2019
20 °C

ವಿಮಾನ ವಿನ್ಯಾಸ ಸ್ಪರ್ಧೆಗೆ ನಗರದ ವಿದ್ಯಾರ್ಥಿಗಳು

Published:
Updated:

ಬೆಂಗಳೂರು: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಏ.12 ರಿಂದ 14 ರವರೆಗೆ ನಡೆಯಲಿರುವ `ವಿಮಾನ ವಿನ್ಯಾಸ ಸ್ಪರ್ಧೆ' ಯಲ್ಲಿ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.ಬಿಎಂಎಸ್ ಕಾಲೇಜಿನ `ಏರೋಸ್ಪೇಸ್ ಕ್ಲಬ್'ನ `ಮ್ಯಾಚ್'  ತಂಡವು ವಿಮಾನಕ್ಕೆ ಸಂಬಂಧಿಸಿದ  ನವ ಮಾದರಿಗಳನ್ನು ಪ್ರದರ್ಶಿಸಲು ಕ್ಯಾಲಿಫೋರ್ನಿಯಾಕ್ಕೆ ತೆರಳಲಿದೆ.ತಂಡದಲ್ಲಿ ಸಿ.ಎಸ್.ಸಂಭ್ರಮ, ಶಾದ್‌ಮಾನ್ ಅಲಂ, ಹನಿ ಬಿ. ಮೆಹ್ತಾ, ಎಸ್.ದರ್ಶನ್, ಲಿನ್‌ಫೋರ್ಡ್ ಪಿಂಟೋ, ಸಚಿನ್ ಕುಕ್ಕೆ, ಜಿ.ಎಂ.ಶಶಾಂಕ, ಜೆ.ಆಕಾಶ್, ಸೋಹನ್ ಶೆಟ್ಟಿ, ಅಪ್ರತಿಮ್ ಹಲ್ದರ್, ಮಿಥುನ್ ಮೋಹನ್, ಆರ್. ಭಾರದ್ವಾಜ್ ಮತ್ತು ಹನೀನ್ ಮೊಯಿದೀನ್  ಯುವ ಎಂಜಿನಿಯರ್‌ಗಳು ಈ ತಂಡದಲ್ಲಿದ್ದಾರೆ.ವಿಮಾನದ ವಿನ್ಯಾಸದ ಕುರಿತು ಸಿದ್ಧಪಡಿಸಿದ ವಿಮಾನ ವಿನ್ಯಾಸದಲ್ಲಿನ ಹೊಸ ಪ್ರಯೋಗಗಳ ಕುರಿತು ಮಾದರಿಗಳನ್ನು ಪ್ರದರ್ಶಿಸಲಿದ್ದಾರೆ ಎಂದು ಪ್ರಕಟಣೆಯು ತಿಳಿಸಿದೆ.

ಪ್ರತಿಕ್ರಿಯಿಸಿ (+)