ವಿಮಾನ ಸ್ಫೋಟ ಯತ್ನ: ಜೀವಿತಾವಧಿ ಶಿಕ್ಷೆ

7

ವಿಮಾನ ಸ್ಫೋಟ ಯತ್ನ: ಜೀವಿತಾವಧಿ ಶಿಕ್ಷೆ

Published:
Updated:

ವಾಷಿಂಗ್ಟನ್ (ಪಿಟಿಐ): ಒಳಉಡುಪಿನ ಒಳಗೆ ಬಾಂಬ್ ಬಚ್ಚಿಟ್ಟಕೊಂಡು ವಿಮಾನ ಸ್ಫೋಟಿಸಲು ಯತ್ನಿಸಿದ್ದ ನೈಜೀರಿಯಾ ಪ್ರಜೆಗೆ ಅಮೆರಿಕದ ಜಿಲ್ಲಾ ನ್ಯಾಯಾಲಯ ಜೀವಿತಾವಧಿ ಶಿಕ್ಷೆ ವಿಧಿಸಿದೆ.ಉಮರ್ ಫಾರೂಕ್ ಅಬ್ದುಲ್ ಮುತಲ್ಲಾಬ್ (25) ಎಂಬಾತ ಈ ಶಿಕ್ಷೆಗೆ ಗುರಿಯಾದವನು. 2009ರ ಕ್ರಿಸ್ಮಸ್ ದಿನದಂದು ಡೆಟ್ರಾಯಿಟ್‌ಗೆ ತೆರಳುತ್ತಿದ್ದ 289 ಜನರಿದ್ದ ನಾರ್ಥ್‌ವೆಸ್ಟ್ ಏರ್‌ಲೈನ್ಸ್‌ಗೆ ಸೇರಿದ ವಿಮಾನ ಸ್ಫೋಟಿಸಲು ಆತ ಯತ್ನಿಸಿದ್ದ.`ಉಮರ್ ಅಬ್ದುಲ್ ಕರುಣೆಯೇ ಇಲ್ಲದ ಭಯೋತ್ಪಾದಕನಾಗಿದ್ದ ಹಾಗೂ ಅಮೆರಿಕನ್ನರನ್ನು ಕೊಲ್ಲುವುದೇ ತನ್ನ ಕರ್ತವ್ಯ ಎಂದು ನಂಬಿದ್ದ ಎಂಬುದು ವಿಚಾರಣೆಯಿಂದ ಸಾಬೀತಾಗಿದೆ. 289 ಮುಗ್ಧರ ಜೀವ ತೆಗೆಯಲು ಯತ್ನಿಸಿದ ಆತ ಜೀವನದ ಕೊನೆವರೆಗೂ ಜೈಲಿನಲ್ಲಿ ಇರುವುದು ಸೂಕ್ತ~ ಎಂದು ಅಟಾರ್ನಿ  ಜನರಲ್ ಎರಿಕ್ ಹೋಲ್ಡರ್ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry