ವಿಮಾ ಕ್ಷೇತ್ರದ ಮಾಹಿತಿ ದುರ್ಬಳಕೆ ತಡೆಗೆ ಯತ್ನ

7

ವಿಮಾ ಕ್ಷೇತ್ರದ ಮಾಹಿತಿ ದುರ್ಬಳಕೆ ತಡೆಗೆ ಯತ್ನ

Published:
Updated:

ನವದೆಹಲಿ (ಪಿಟಿಐ): ಆರೋಗ್ಯ ವಿಮೆ ದತ್ತಾಂಶ ಸುರಕ್ಷತೆಗೆ ಸಂಬಂಧಿಸಿದಂತೆ ಕೇಂದ್ರೀಕೃತ ವ್ಯವಸ್ಥೆಯೊಂದನ್ನು ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎ) ಅಭಿವೃದ್ಧಿಪಡಿಸುತ್ತಿದೆ.ಕೆಲವು ಖಾಸಗಿ ಆಸ್ಪತ್ರೆಗಳು ರೋಗಿಗಳ ದತ್ತಾಂಶ ವಿವರ ದುರುಪಯೋಗ ಪಡಿಸಿಕೊಂಡು ಅಕ್ರಮವಾಗಿ ದುಬಾರಿ ವಿಮೆ ಹಣ ವಸೂಲು ಮಾಡುತ್ತಿದ್ದವು. ಈ ಪ್ರವೃತ್ತಿಗೆ ಇದರಿಂದ ಕಡಿವಾಣ ಬೀಳಲಿದೆ. ಜತೆಗೆ ಒಟ್ಟಾರೆ ವೈದ್ಯಕೀಯ ಪರೀಕ್ಷೆ ಮತ್ತು ಆಸ್ಪತ್ರೆ ವೆಚ್ಚಗಳನ್ನು ಈ ವ್ಯವಸ್ಥೆಯಡಿ ಪಾರದರ್ಶಕವಾಗಿ ನಿರ್ವಹಿಸಬಹುದು ಎಂದು `ಐಆರ್‌ಡಿಎ~ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.ಖಾಸಗಿ ಆಸ್ಪತ್ರೆಗಳು ಗರಿಷ್ಠ ಮಟ್ಟದಲ್ಲಿ ವಿಮೆ ಹಣ ವಸೂಲು ಮಾಡುವುದರಿಂದ ಆರೋಗ್ಯ ವಿಮೆ ಕ್ಷೇತ್ರ ಹಲವು ಸಮಸ್ಯೆಗಳನ್ನು ಎದುರಿಸುತ್ತಿವೆ. ಇದರಿಂದ ಕಳೆದ ವರ್ಷ ಸರ್ಕಾರಿ ಸ್ವಾಮ್ಯದ ವಿಮಾ ಸಂಸ್ಥೆಗಳಾದ ನ್ಯಾಷನಲ್ ಇನ್ಷೂರೆನ್ಸ್, ನ್ಯೂ ಇಂಡಿಯಾ ಅಷ್ಯೂರೆನ್ಸ್, ಓರಿಯಂಟಲ್ ಇನ್ಷೂರೆನ್ಸ್ ಮತ್ತು ಯುನೈಟೆಡ್ ಇಂಡಿಯಾ ಅಷ್ಯೂರೆನ್ಸ್ ಕಂಪೆನಿಗಳು `ನಗದು ರಹಿತ~ ಆರೋಗ್ಯ ವಿಮೆ ಸೌಲಭ್ಯ ರದ್ದುಗೊಳಿಸಿದ್ದವು ಎಂದು ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry