ವಿಮಾ ಯೋಜನೆಯಲ್ಲಿ ಭಾಗಿಯಾಗಲು ಮನವಿ

ನವದೆಹಲಿ (ಪಿಟಿಐ): ಮುಂಬರುವ ಮುಂಗಾರು ಹಂಗಾಮಿನಿಂದ ಜಾರಿಗೆ ಬರುವ ನೂತನ ಫಸಲು ವಿಮಾ ಯೋಜನೆಯಲ್ಲಿ ಎಲ್ಲಾ ರೈತರೂ ಭಾಗಿ ಯಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.
ನೂತನ ವಿಮಾ ಯೋಜನೆ ಪ್ರಕಟಿಸಿದ ಬೆನ್ನಲ್ಲೇ ಮೋದಿ ಅವರು ಶನಿವಾರ ದೇಶದ ರೈತರನ್ನು ಉದ್ದೇಶಿಸಿ ಬರೆದ ಬಹಿರಂಗ ಪತ್ರ ಬರೆದಿದ್ದಾರೆ.
ಹಲವು ಕಾರಣಗಳಿಂದಾಗಿ ಹಿಂದಿನ ಎಲ್ಲಾ ಬೆಳೆ ವಿಮೆಗಳು ವಿಫಲವಾ ಗಿದ್ದರಿಂದ ರೈತರು ಹತಾಶರಾಗಿದ್ದರು. ಕೃಷಿಕ ಸಮುದಾಯದ ಹತಾಶೆಯನ್ನು ದೂರ ಮಾಡುವ ಉದ್ದೇಶದಿಂದ ಹೊಸ ಫಸಲು ವಿಮಾ ಯೋಜನೆಯನ್ನು ಜಾರಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ರೈತರಿಗೆ ಹಿಂದಿನ ಯಾವ ಸರ್ಕಾರವೂ ಇಷ್ಟು ದೊಡ್ಡ ಪ್ರಮಾಣದ ವಿಮಾ ಕಂತನ್ನು ನೀಡಿರಿರಲಿಲ್ಲ. ರೈತರು ಅತಿ ಕಡಿಮೆ ವಿಮಾ ಕಂತು ಕಟ್ಟಿದರೆ ಸಾಕು. ಉಳಿದಿದ್ದನ್ನು ಕೇಂದ್ರ ಸರ್ಕಾರ ತುಂಬುತ್ತದೆ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.
ನೈಸರ್ಗಿಕ ವಿಕೋಪ ಮತ್ತು ಬೆಲೆ ಕುಸಿತದ ಸಂದರ್ಭದಲ್ಲಿ ರೈತರಿಗೆ ನೆರವಾಗಬೇಕು ಎಂಬ ಉದ್ದೇಶದಿಂದ ಪ್ರಧಾನಮಂತ್ರಿ ಫಸಲು ವಿಮಾ ಯೋಜನೆ ಜಾರಿಗೆ ತರಲಾಗಿದೆ ಎಂದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.