ವಿಮಾ ರಂಗದಲ್ಲಿ ಹೂಡಿಕೆ: ಅಮೆರಿಕ ಮನವಿ

7

ವಿಮಾ ರಂಗದಲ್ಲಿ ಹೂಡಿಕೆ: ಅಮೆರಿಕ ಮನವಿ

Published:
Updated:

ವಾಷಿಂಗ್ಟನ್ (ಪಿಟಿಐ):ವಿಮಾ ರಂಗದಲ್ಲಿ ಬಹುವಿಧದ ಪಾಲಿಸಿಗಳನ್ನು ಪ್ರಾರಂಭಿಸಲು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಹೊಸ ಕೇಂದ್ರ ಬಜೆಟ್ ಮೂಲಕ ಅವಕಾಶ ನೀಡಬೇಕು ಎಂದು ಅಮೆರಿಕದ ಕಂಪೆನಿಗಳು ಭಾರತವನ್ನು ಕೋರಿವೆ.ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರು ಹೊಸ ಬಜೆಟ್ ಮಂಡಿಸಲು ಇನ್ನು ಹತ್ತು ದಿನ ಬಾಕಿ ಇರುವ ಈ ಸಂದರ್ಭದಲ್ಲಿ, ಅಮೆರಿಕ- ಭಾರತ ವ್ಯಾಪಾರ ಮಂಡಳಿಯ ಅಧ್ಯಕ್ಷ ರಾನ್ ಸಾಮರ್ಸ್ ಈ ಬೇಡಿಕೆ ಇರಿಸಿದ್ದಾರೆ.ವಿಮಾ ವಲಯದಲ್ಲಿ ವಿದೇಶಿ ನೇರ ಹೂಡಿಕೆಯನ್ನು ಶೇ 49ಕ್ಕೆ ಏರಿಸಬೇಕು ಎಂಬುದೂ ಬೇಡಿಕೆಗಳಲ್ಲಿ ಸೇರಿದೆ. ಭಾರತದಲ್ಲಿ ವ್ಯವಹಾರ ನಡೆಸುತ್ತಿರುವ ಪೆಪ್ಸಿಕೊ, ಬೋಯಿಂಗ್, ಜನರಲ್ ಎಲೆಕ್ಟ್ರಿಕ್ಸ್‌ನಂತಹ ಕಂಪೆನಿಗಳನ್ನು ಮಂಡಳಿ ಪ್ರತಿನಿಧಿಸುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry