ವಿಮಾ ಸೌಲಭ್ಯ ಸದುಪಯೋಗಕ್ಕೆ ಸಲಹೆ

7

ವಿಮಾ ಸೌಲಭ್ಯ ಸದುಪಯೋಗಕ್ಕೆ ಸಲಹೆ

Published:
Updated:

ಎಚ್‌.ಡಿ.ಕೋಟೆ: ಜಾನುವಾರುಗಳಿಗೆ ಶೇ 50ರ ರಿಯಾಯಿತಿಯಲ್ಲಿ  ವಿಮಾ ಸೌಲಭ್ಯ ಜಾರಿಯಲ್ಲಿದ್ದು, ರೈತರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಪಶು ವೈದ್ಯ ಪ್ರಕಾಶ್‌ ತಿಳಿಸಿದರು.ತಾಲ್ಲೂಕಿನ ಕ್ಯಾತನಹಳ್ಳಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಗುರುವಾರ ನಡೆದ ಹೈನುಗಾರಿಕಾ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಯೋಜನೆಯ ಯೋಜನಾಧಿಕಾರಿ ಉಮಾರಬ್ಬ ಮಾತನಾಡಿ, ಸ್ವ-ಉದ್ಯೋಗಕ್ಕೆ ಹೈನುಗಾರಿಕೆ ಉತ್ತಮ ಕ್ಷೇತ್ರ. ಹೈನುಗಾರಿಕೆಯನ್ನು ಆಸಕ್ತಿಯಿಂದ ಇಷ್ಟಪಟ್ಟು ಮಾಡಿದರೆ ಅಧಿಕ ಲಾಭ ಗಳಿಸಬಹುದು.ರಾಸುಗಳ ಆರೋಗ್ಯದ ದೃಷ್ಟಿಯಿಂದ ಕೊಟ್ಟಿಗೆ ರಚನೆ ಮತ್ತು ಶುಚಿತ್ವದ ಬಗ್ಗೆ ಗಮನಹರಿಸುವಂತೆ ಸಲಹೆ ನೀಡಿದರು. ಹೈನುಗಾರಿಕಾ  ಮೇಲ್ವಿಚಾರಕರಾದ ಸದಾಶಿವ ನಾಯಕ್‌, ವಲಯದ ಮೇಲ್ವಿಚಾರಕ ಪ್ರದೀಪ್‌, ಸೇವಾ ಪ್ರತಿನಿಧಿ ಪ್ರಮೀಳಾ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry