ವಿಮಾ ಹಣ ನೀಡದ ಸೆಸ್ಕ್‌ಗೆ ರೂ 3 ಲಕ್ಷದಂಡ

ಸೋಮವಾರ, ಜೂಲೈ 22, 2019
27 °C

ವಿಮಾ ಹಣ ನೀಡದ ಸೆಸ್ಕ್‌ಗೆ ರೂ 3 ಲಕ್ಷದಂಡ

Published:
Updated:

ಚಾಮರಾಜನಗರ: ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಅವಘಡದಿಂದ ಮೃತಪಟ್ಟ ನೌಕರರೊಬ್ಬರ ಕುಟುಂಬಕ್ಕೆ ವಿಮಾ ಹಣ ನೀಡದ ಸೆಸ್ಕ್‌ಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ರೂ 3 ಲಕ್ಷ ದಂಡ ವಿಧಿಸಿದೆ.ಗುಂಡ್ಲುಪೇಟೆ ತಾಲ್ಲೂಕಿನ ಚಿಕ್ಕತುಪ್ಪೂರು ಗ್ರಾಮದ ಗುರುಸ್ವಾಮಿ ಎಂಬುವರು ಸೆಸ್ಕ್‌ನಲ್ಲಿ ಗ್ಯಾಂಗ್‌ಮನ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಸೆಸ್ಕ್ ಹುದ್ದೆ ನೇಮಕ ಸಂದರ್ಭ ದಲ್ಲಿ ಗುರುಸ್ವಾಮಿಗೆ ಮೈಸೂರಿನ ನ್ಯಾಷನಲ್ ಇನ್ಸೂರೆನ್ಸ್ ಕಂಪೆನಿಯಲ್ಲಿ ಜನತಾ ವೈಯಕ್ತಿಕ ಗುಂಪು ವಿಮೆ ಮಾಡಿಸಲಾಗಿತ್ತು. ಕರ್ತವ್ಯನಿರತರಾಗಿದ್ದ ವೇಳೆ ಅವಘಡ ದಿಂದ ಮೃತಪಟ್ಟರೆ ನಿಯಮಾನುಸಾರ 1 ಲಕ್ಷ ವಿಮಾ ಹಣ ಪಾವತಿ ಮಾಡಬೇಕಿತ್ತು.2006ರ ಜೂನ್ 23ರಂದು ನೌಕರ ಗುರುಸ್ವಾಮಿ ವಿದ್ಯುತ್ ಪರಿವರ್ತಕ ದುರಸ್ತಿಗೊಳಿಸುತ್ತಿದ್ದ ವೇಳೆ ಅವಘಡಕ್ಕೆ ತುತ್ತಾಗಿ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಅವರ ಪತ್ನಿ ಸಾವಿತ್ರಮ್ಮ ವಿಮಾ ಹಣ ಕೊಡುವಂತೆ ಕೋರಿದ್ದರು. ಹಣ ನೀಡದೆ ಇದ್ದ ಹಿನ್ನೆಲೆಯಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಗೆ ಸೆಸ್ಕ್ ಅಧಿಕಾರಿಗಳು ಹಾಗೂ ನ್ಯಾಷನಲ್ ಇನ್ಸೂರೆನ್ಸ್ ಕಂಪೆನಿಯ ಶಾಖಾ ವ್ಯವಸ್ಥಾಪಕರ ವಿರುದ್ಧ ದೂರು ದಾಖಲಿಸಿದ್ದರು.ವಾದ ಹಾಗೂ ಪ್ರತಿವಾದ ಆಲಿಸಿದ ಜಿಲ್ಲಾ ಗ್ರಾಹಕರ ವೇದಿಕೆಯು ವಿಮಾ ಹಣ ಪಾವತಿಸದ ಸೆಸ್ಕ್ ಸೇವಾ ನ್ಯೂನತೆ ಎಸಗಿದೆ. ಈ ಹಿನ್ನೆಲೆಯಲ್ಲಿ ದೂರುದಾರರಿಗೆ ವಿಮಾ ಮೊತ್ತ ರೂ 1 ಲಕ್ಷ ಹಾಗೂ ಈ ಮೊತ್ತದ ಮೇಲೆ ಶೇ. 8ರಷ್ಟು ಬಡ್ಡಿಹಣ ಪಾವತಿಸುವಂತೆ ಆದೇಶಿಸಿದೆ. ಜತೆಗೆ, ದೂರುದಾರರ ಕುಟುಂಬಕ್ಕೆ ರೂ 50 ಸಾವಿರ, ಗ್ರಾಹಕರ ಕಲ್ಯಾಣ ನಿಧಿಗೆ ರೂ 2.5 ಲಕ್ಷ ದಂಡ ಪಾವತಿಸುವಂತೆ ಆದೇಶಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry