ಸೋಮವಾರ, ಮಾರ್ಚ್ 8, 2021
19 °C
ಎಸ್‌ಪಿ ಅಭ್ಯರ್ಥಿ ಬ್ಯಾಂಕ್‌ ಖಾತೆಯಲ್ಲಿ ₨ 210

ವಿ.ಮುನಿಸ್ವಾಮಿ ನಾಮಪತ್ರ ಸಲ್ಲಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿ.ಮುನಿಸ್ವಾಮಿ ನಾಮಪತ್ರ ಸಲ್ಲಿಕೆ

ಕೋಲಾರ: ಕೋಲಾರ ಲೋಕಸಭೆ ಕ್ಷೇತ್ರದ ಚುನಾವಣೆಗೆ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಶುಕ್ರವಾರ ನಾಮಪತ್ರ ಸಲ್ಲಿಸಿದ ಕೆಜಿಎಫ್‌ನ ಗುತ್ತಿಗೆದಾರ ವಿ.ಮುನಿಸ್ವಾಮಿ ಅವರ ಬ್ಯಾಂಕ್‌ ಖಾತೆಯಲ್ಲಿ ಕಳೆದ ಮಾರ್ಚ್‌ ಅಂತ್ಯದ ಹೊತ್ತಿಗೆ  ₨ 210 ಇತ್ತು. ಹೊಸದಾಗಿ ತೆರೆದಿರುವ ಬ್ಯಾಂಕ್‌ ಖಾತೆಯಲ್ಲಿ ₨ 500 ಇದೆ. ಈಗ ಅವರ ಬಳಿ ಕೇವಲ ₨ 3,254 ಇದೆ. ಟಾಟಾ ಇಂಡಿಕಾ ಕಾರಿದೆ.ನಿವೇಶನ, ಮನೆ ಇಲ್ಲ. ಒಟ್ಟು ಅವರ ಆಸ್ತಿ ಮೌಲ್ಯ ₨ 1.03 ಲಕ್ಷ.  2012–13ನೇ ಸಾಲಿ­ನಲ್ಲಿ ಅವರ ಆದಾಯ ₨ 5,31 ಲಕ್ಷ.

ಅವರ ಪತ್ನಿ ಶಾಂತಾ ಅವರ ಬಳಿ 3 ಲಕ್ಷ ಮೌಲ್ಯದ ನ್ಯಾನೋ ಕಾರು ಮತ್ತು ಒಡವೆಗಳಿವೆ. ಅಜ್ಜಪಲ್ಲಿಯಲ್ಲಿ ಕೃಷಿಯೇತರ ಜಮೀನಿದೆ. ನಿವೇಶನ­ವೊಂದಿದೆ. ಬ್ಯಾಂಕ್‌ನಲ್ಲಿ ₨ 1.50 ಲಕ್ಷ ಸಾಲ ಪಡೆದಿದ್ದಾರೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.