ಗುರುವಾರ , ಮೇ 19, 2022
20 °C

ವಿಮೆ: ಐಆರ್‌ಡಿಎ ಮಾರ್ಗಸೂಚಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಷೇರುಪೇಟೆ ವಹಿವಾಟಿಗೆ ನೋಂದಣಿ ಮಾಡಿಕೊಳ್ಳುವ ಜೀವ ವಿಮೆಯೇತರ, ಸಾಮಾನ್ಯ ವಿಮಾ ಸಂಸ್ಥೆಗಳಿಗೆ ಮಾರ್ಚ್ ಅಂತ್ಯದ ಒಳಗೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಭಾರತೀಯ ವಿಮೆ ನಿಯಂತ್ರಣ ಪ್ರಾಧಿಕಾರ (ಐಆರ್‌ಡಿಎ) ಹೇಳಿದೆ.ಸಾಮಾನ್ಯ ವಿಮೆ ಸಂಸ್ಥೆಗಳ ನೋಂದಣಿಗೆ ಸಂಬಂಧಿಸಿದ ಹೊಸ ಮಾರ್ಗಸೂಚಿಗಳನ್ನು ಮಾರ್ಚ್‌ನಲ್ಲಿ ಬಿಡುಗಡೆ ಮಾಡಲಾಗುವುದು. ಕರಡು ಪ್ರತಿಯನ್ನು ಕಂಪೆನಿಗಳಿಗೆ ಈಗಾಗಲೇ ನೀಡಲಾಗಿದೆ ಎಂದು `ಐಆರ್‌ಡಿಎ~  ಅಧ್ಯಕ್ಷ  ಜೆ. ಹರಿ ನಾರಯಣ್ ತಿಳಿಸಿದ್ದಾರೆ.ಹೊಸ ಮಾರ್ಗಸೂಚಿಯನ್ವಯ ಕನಿಷ್ಠ  10 ವರ್ಷಗಳಿಂದ  ಕಾ ನಿರ್ವಹಿಸುತ್ತಿರುವ ಮತ್ತು ಉತ್ತಮ ಹಣಕಾಸು ಸಾಧನೆ ಹೊಂದಿರುವ ಕಂಪೆನಿಗಳಿಗೆ ಮಾತ್ರ ಷೇರುಪೇಟೆಯಲ್ಲಿ ವಹಿವಾಟು ನಡೆಸಲು ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ. ಸದ್ಯಕ್ಕೆ ಒಟ್ಟು 24  ಜೀವ ವಿಮೆ ಮತ್ತು ಜೀವ ವಿಮೆಯೇತರ ಸಂಸ್ಥೆಗಳು ಷೇರುಪೇಟೆ ವಹಿವಾಟಿನಲ್ಲಿ ತೊಡಗಿಸಿಕೊಂಡಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.