ವಿಮೋಚನಾ ಚಳವಳಿಗಾರ ಭೀಮಾಚಾರ್ಯ

7

ವಿಮೋಚನಾ ಚಳವಳಿಗಾರ ಭೀಮಾಚಾರ್ಯ

Published:
Updated:

ಕೆಂಭಾವಿ: ದೇಶದ ಸ್ವಾತಂತ್ರ್ಯಕ್ಕಾಗಿ ದುಡಿದ ಅನೇಕ ಮಹನೀಯರು ಇಂದಿಗೂ ನಮಗೆ ನಿತ್ಯ ಸ್ಮರಣೀಯರು. ದೇಶ ಸ್ವತಂತ್ರ ಪಡೆದರೂ ಹೈದರಾಬಾದ್‌ -ಕರ್ನಾಟಕ ಭಾಗದ ಗುಲ್ಬರ್ಗ, ರಾಯಚೂರು, ಬೀದರ್‌, ಬಳ್ಳಾರಿ, ಈಗಿನ ಹೊಸ ಜಿಲ್ಲೆಗಳಾದ ಯಾದಗಿರಿ, ಕೊಪ್ಪಳ ಜಿಲ್ಲೆಗಳು ನಿಜಾಮರ ಕೈವಶದಲ್ಲಿದ್ದವು. ಅವರ ಕಪಿಮುಷ್ಟಿಯಿಂದ ಪಾರಾಗಲು ಇಲ್ಲಿನ ಅನೇಕ ಜನರು ಹೋರಾಟ ಮಾಡಿ ಅವರ ಆಳ್ವಿಕೆಯಿಂದ ಈ ಭಾಗವನ್ನು ಮುಕ್ತಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.



ನಿಜಾಮರ ವಿರುದ್ಧ ಹೋರಾಟ ಮಾಡಿದ ಅಪ್ಪಾರವ ವಕೀಲ ಅವರ ನೇತೃತ್ವದಲ್ಲಿ ಸರ್ದಾರ್‌ ಶರಣಗೌಡ ದುಮ್ಮದ್ರಿ, ಜಗನ್ನಾಥರಾವ ಚಂಡ್ರಕಿ, ಕೆಂಭಾವಿಯ ಸಹೋದರ­ರಾದ ವಾಮ­ನಾ­­ಚಾರ್ಯ ಪುರೋಹಿತ, ಭೀಮಾ­ಚಾ­ರ್ಯ ಪು­ರೋ­­ಹಿತ, ನ­ಗ­ನೂರ ಗ್ರಾಮ­­ದ ಮಲ್ಹಾರಾವ ಕುಲಕರ್ಣಿ, ಸಗರ ಗ್ರಾಮದ ಗಣಪತರಾವ ಕುಲಕರ್ಣಿ, ವಿಠ್ಠಲರಾವ ಕುಲಕರ್ಣಿ, ಮಲ್ಲಪ್ಪ ಚೌಡಗುಂಡ, ಮಲ್ಲಪ್ಪ ನಂದಿಕೋಲ, ರಾಜನಕೊಳೂರ ಗ್ರಾಮದ ಯಂಕನ­ಗೌಡ ಪೊಲೀಸ್ ಪಾಟೀಲ ಸೇರಿದಂತೆ ಜಿಲ್ಲೆಯ ಇನ್ನೂ ಹಲವಾರು ಹೋರಾಟ­ಗಾರರು ತಮ್ಮ ಜೀವದ ಹಂ­ಗು ತೊರೆ­ದು ನಿಜಾಮರ ವಿರುದ್ಧ ಹೋರಾಡಿ­ದ­ರು. ಅದರ ಫ­ಲ­ವಾಗಿ 1948 ಸೆಪ್ಟೆ­ಂಬರ್ 17 ರಂದು ಹೈದ­ರಾ­ಬಾದ್‌ ಕ­ರ್ನಾ­ಟಕ ಭಾ­ಗ­ವು ಸ್ವತಂತ್ರ­ವಾಯಿತು.



ಹಿರಿಯ ಹೋರಾಟಗಾರ ದಿ. ಭೀಮಾಚಾರ್ಯ ಪುರೊಹಿತ, ಈ ಭಾಗದ ಹಿರಿಯ ಸ್ವತಂತ್ರ ಹೋರಾಟ­ಗಾರರಲ್ಲಿ ಒಬ್ಬರಾಗಿದ್ದರು. 

ಕರ್ನಾಟಕ ಪೊಲೀಸ್ ಕೊಡ­ಮಾಡುವ ಅತ್ಯುತ್ತಮ ಸೇವಾ ಪ್ರಶಸ್ತಿ, ಸ್ವತಂತ್ರ ಹೋರಾಟಗಾರ ಪ್ರಶಸ್ತಿ, ಜಿಲ್ಲಾಡಳಿತದ ವತಿಯಿಂದ ಹೋರಾಟ­ಗಾರ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಅವರಿಗೆ ಸಂದಿವೆ.



ಆ ಕಷ್ಟದ ದಿನಗಳನ್ನು ನೆನಪಿಸಿದರೆ ಇಂದಿಗೂ ಕಣ್ಣುಗಳು ಒದ್ದೆಯಾಗುತ್ತವೆ. ನಿಜಾಮರು ಕೊಟ್ಟ ಕಷ್ಟ ಅಷ್ಟಿಷ್ಟಲ್ಲ. ಮನೆಗಳನ್ನು ದೋಚುವುದು, ಕಂಡಕಂಡವರನ್ನು ಕೊಲ್ಲುವುದು, ಆಸ್ತಿ-ಪಾಸ್ತಿಗಳನ್ನು ಹಾಳು ಮಾಡುವುದು ಮಾಡುತ್ತಿದ್ದರು. ಅವರ ಅಟ್ಟಹಾಸ­ವನ್ನು ಮೆರೆದು ನಾವು ದಿಟ್ಟತನದಿಂದ ಹೋರಾಡಿದೆವು. ಇದರಲ್ಲಿ ಅನೇಕರ ಪಾತ್ರವೂ ಇದೆ. ಎಂದು ­ನೆನಪು­­­ ಬಿಚ್ಚಿಡುತ್ತಾರೆ ಹಿರಿಯ ಸ್ವಾತಂತ್ರ ಯೋಧ ಯಂಕನಗೌಡ ಪೊಲೀಸ್ ಪಾಟೀಲ ರಾಜನಕೋಳೂರ.



ನಿಜಾಮರ ವಿರುದ್ಧ ಹೋರಾಟ ಮಾಡಿ ನಮಗೆ ಸ್ವತಂತ್ರ ತಂದುಕೊಟ್ಟ ಈ ಭಾಗದ ಅನೇಕ ಮಹನೀಯರನ್ನು ಗುರುತಿಸುವಲ್ಲಿ ಸರ್ಕಾರ ವಿಫಲ­ವಾಗಿದೆ. ಸರ್ಕಾರದಿಂದ ಸಿಗುವ ಕನಿಷ್ಠ ಸೌಲಭ್ಯಗಳೂ ಅವರಿಗೆ ದೊರಕುತ್ತಿಲ್ಲ. ನಿಜಾಮರ ಆಳ್ವಿಕೆಯಿಂದ ಬೇಸತ್ತಿದ್ದ ಆಗಿನ ಜನತೆಗೆ ಹೋರಾಟ­ಗಾರರು ತಮ್ಮ ಪ್ರಾಣದ ಹಂಗು ತೊರೆದು ಹೋರಾಟ ಮಾಡಿ, ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ. ಸರ್ಕಾರ ಈಗಲಾದರೂ ಅವರ ಕುಟುಂಬಕ್ಕೆ ನೆರವು ಒದಗಿಸಬೇಕು ಎಂದು ಶ್ರೀನಿವಾಸ ಕುಲಕರ್ಣಿ ಹೇಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry