ವಿಯೆಟ್ನಾಂ: ದೋಣಿ ಮುಳುಗಿ 12 ಸಾವು

7

ವಿಯೆಟ್ನಾಂ: ದೋಣಿ ಮುಳುಗಿ 12 ಸಾವು

Published:
Updated:

ಹಾಲೊಂಗ್ ನಗರ (ಎಎಫ್‌ಪಿ): ವಿದೇಶಿ ಪ್ರವಾಸಿಗರೇ ಹೆಚ್ಚಾಗಿದ್ದ ದೋಣಿಯೊಂದು ಹಠಾತ್ತಾಗಿ ಮುಳುಗಿದ ಪರಿಣಾಮವಾಗಿ 12 ಮಂದಿ ಮೃತಪಟ್ಟಿದ್ದಾರೆ.

ಘಟನೆಯಲ್ಲಿ ಬದುಕುಳಿದ ಅಮೆರಿಕದ ಪ್ರವಾಸಿಗ ಜಾರ್ಜ್ ಫಾಸ್ಮಿರ್ ಪ್ರಕಾರ, ದೋಣಿಯಲ್ಲಿನ ತನ್ನ ಕ್ಯಾಬಿನ್‌ನಲ್ಲಿ ಇನ್ನೊಬ್ಬಳು ಯುವತಿಯೊಂದಿಗೆ ಮಲಗಿದ್ದ ಫಾಸ್ಮಿರ್ ಸ್ನೇಹಿತೆ, ದೋಣಿ ಮುಳುಗುತ್ತಿದೆ ಎಂದು ಹೇಳುತ್ತಿದ್ದಂತೆಯೇ ಧ್ವನಿ ಕೇಳಿಸದಾಯಿತು. ಆಕೆ ಮತ್ತು ಆಕೆಯೊಂದಿಗಿದ್ದ ಯುವತಿ ಇಬ್ಬರೂ ಒಮ್ಮೆಗೆ ನುಗ್ಗಿದ ನೀರಿನಲ್ಲಿ ಮುಳುಗಿದರು. ಈ ಎಲ್ಲ ಸಂಗತಿ 30 ಸೆಕೆಂಡ್‌ನಿಂದ ಒಂದು ನಿಮಿಷದ ಒಳಗೆ ನಡೆಯಿತು. ಫಾಸ್ಮಿರ್ ಕ್ಯಾಬಿನ್‌ನ ಕಿಟಕಿಯಿಂದ ಹೊರಬಂದು ಪಾರಾಗುವಲ್ಲಿ ಯಶಸ್ವಿಯಾಗಿದ್ದಾನೆ.ಘಟನೆಯಲ್ಲಿ ಮೃತಪಟ್ಟ 12 ಪ್ರವಾಸಿಗರಲ್ಲಿ 10 ಮಂದಿ ವಿದೇಶಿಯರು. ಉಳಿದ ಇಬ್ಬರು ವಿಯೆಟ್ನಾಂನವರು ಎಂದು ಸ್ಥಳೀಯ ಸರ್ಕಾರದ ವಕ್ತಾರ ಕ್ವಾಂಗ್ ನಿಹ್ ಪ್ರಾಂತ್ಯದ ವು ವಾನ್ ತಿನ್ ಹೇಳಿದ್ದಾರೆ.ಅಮೆರಿಕ, ರಷ್ಯ, ಸ್ವೀಡನ್‌ನ ತಲಾ ಇಬ್ಬರು ಹಾಗೂ ಬ್ರಿಟನ್, ಜಪಾನ್, ಫ್ರಾನ್ಸ್, ಸ್ವಿಟ್ಜರ್ಲೆಂಡ್‌ನ ತಲಾ ಒಬ್ಬರು ಇರಬಹುದು ಎಂದು ಈ ಪ್ರಾಂತ್ಯದ ವಲಸೆ ಪೊಲೀಸರು ತಿಳಿಸಿದ್ದಾರೆ. ಹನೋಯಿಯಲ್ಲಿರುವ ಫ್ರಾನ್ಸ್‌ನ ರಾಯಭಾರ ಕಚೇರಿ ತನ್ನ ದೇಶದ ಪ್ರಜೆಗಳು ಈ ದುರ್ಘಟನೆಯಲ್ಲಿ ಸೇರಿದ್ದಾರೆ ಎಂದು ಹೇಳಿದೆ. ಆದರೆ ಅವರ ಸಾವಿನ ಬಗ್ಗೆ ಇಲ್ಲಿಯವರೆಗೆ ಗೊತ್ತಾಗಿಲ್ಲ. ‘ಈ ಘಟನೆಯಲ್ಲಿ ಒಂಬತ್ತು ಪ್ರವಾಸಿಗರು ಹಾಗೂ ಆರು ದೋಣಿಯ ಸಿಬ್ಬಂದಿಯನ್ನು ರಕ್ಷಿಸಲಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ ದೋಣಿಯ ಒಂದು ಭಾಗ ಆಕಸ್ಮಿಕವಾಗಿ ಬಿರುಕು ಬಿಟ್ಟಿತು. ಆದರೆ ಇದಕ್ಕಾಗಿ ಹವಾಮಾನವನ್ನು ದೂಷಿಸುವಂತಿಲ್ಲ’ ಎಂದು ಸರ್ಕಾರದ ವಕ್ತಾರ ತಿನ್ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry