ಮಂಗಳವಾರ, ನವೆಂಬರ್ 12, 2019
20 °C

ವಿರಾಜಪೇಟೆ: 7 ಅಭ್ಯರ್ಥಿಗಳು ಕಣ್ಕೆ

Published:
Updated:

ವಿರಾಜಪೇಟೆ: ವಿದಾನಸಭಾ ಚುನಾವಣೆಗೆ ಕೊನೆಯ ದಿನವಾದ ಬುಧವಾರ ವಿರಾಜಪೇಟೆಯ ವಿಧಾನಸಭಾ ಕ್ಷೇತ್ರಕ್ಕೆ ಸುಮಾರು ಏಳು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.ಪಟ್ಟಣ ಪಂಚಾಯಿತಿಯಲ್ಲಿರುವ ಚುನಾವಣಾಧಿಕಾರಿ ಕಚೇರಿಯಲ್ಲಿ ಜೆಡಿಎಸ್ ಅಭ್ಯರ್ಥಿ ಡಿ.ಎಸ್.ಮಾದಪ್ಪ, ಎಸ್‌ಡಿಪಿಐ ಅಭ್ಯರ್ಥಿ ಉಸ್ಮಾನ್, ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜೆನಿತ್ ಅಯ್ಯಪ್ಪ, ಸಿ.ಪಿ.ಐ.ಎಂ. ಪಕ್ಷದಿಂದ ಚಂಗಪ್ಪ ಹಾಗೂ ಪಕ್ಷೇತರ ಅಭ್ಯರ್ಥಿ ಗಿರಿ ಉತ್ತಮ್,  ಉದಯ, ಮಾರಣ್ಣ ದಿಲೀಪ್ ಕುಮಾರ, ವಿಜಯಸಿಂಗ್ ಆರ್.ಡೆವಿಡ್ ಅವರು ನಾಮಪತ್ರ ಸಲ್ಲಿಸಿದ್ದಾರೆ.ಜೆಡಿಎಸ್ ಪಕ್ಷದ ಅಭ್ಯರ್ಥಿ ಡಿ.ಎಸ್. ಮಾದಪ್ಪ ಮಾತನಾಡಿ, ಈ ಬಾರಿ ನಮ್ಮ ಪಕ್ಷವು ಶಾಂತಿ ಸೌಹಾರ್ದಯುತ ಆಡಳಿತ ನೀಡಲಿದೆ ಎನ್ನುವ ಮುಖಾಂತರ ಗೆಲುವು ನಮ್ಮದೆ ಎಂದು ತಿಳಿಸಿದರು.ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜೆನಿತ್ ಅಯ್ಯಪ್ಪ ಮಾತನಾಡಿ, ಈ ಬಾರಿಯ ಚುನಾವಣೆಯಲ್ಲಿ ಅಭ್ಯರ್ಥಿಯ ಗೆಲುವು ವ್ಯಕ್ತಿತ್ವದ ಮೇಲೆ ನಿಂತಿದೆ. ಪಕ್ಷಕ್ಕಿಂತಲೂ ವ್ಯಕ್ತಿ ಮುಖ್ಯವಾಗಲಿದ್ದಾರೆ ಎಂದರು.

ಪ್ರತಿಕ್ರಿಯಿಸಿ (+)