ಗುರುವಾರ , ಫೆಬ್ರವರಿ 25, 2021
19 °C
ಟ್ವೆಂಟಿ–20 ಕ್ರಿಕೆಟ್: ಮರಳಿ ಅರಳಿದ ಸುರೇಶ್ ರೈನಾ

ವಿರಾಟ್ ಆರ್ಭಟಕ್ಕೆ ಒಲಿದ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿರಾಟ್ ಆರ್ಭಟಕ್ಕೆ ಒಲಿದ ಜಯ

ಅಡಿಲೇಡ್ (ಪಿಟಿಐ): ಮಂಗಳವಾರ ಹತ್ತು ರನ್‌ಗಳಿಂದ ವಿರಾಟ್ ಕೊಹ್ಲಿ ಶತಕ ತಪ್ಪಿಸಿಕೊಂಡರು. ಆದರೆ, ಭಾರತ ತಂಡವು ಗೆಲುವಿನ ಸಂಭ್ರಮ ಆಚರಿಸಲು ಅವರ ಭರ್ಜರಿ ಬ್ಯಾಟಿಂಗ್ ಕಾರಣವಾಯಿತು.  ಅಡಿಲೇಡ್ ಓವಲ್‌ ಕ್ರೀಡಾಂಗಣದಲ್ಲಿ ಆರಂಭವಾದ ಆಸ್ಟ್ರೇಲಿಯಾ ವಿರುದ್ಧದ  ಟ್ವೆಂಟಿ–20 ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಮಹೇಂದ್ರಸಿಂಗ್ ದೋನಿ ಬಳಗವು 37 ರನ್‌ಗಳ ಭರ್ಜರಿ ಜಯ ದಾಖಲಿಸಿತು.ಟಾಸ್ ಗೆದ್ದ ಆತಿಥೇಯರು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಆದರೆ, ಬೌಲರ್‌ಗಳಿಗೆ ಆರಂಭಿಕ ಯಶಸ್ಸು ಒಲಿಯಲಿಲ್ಲ. ಏಕದಿನ ಸರಣಿ ಯಲ್ಲಿ ಎರಡು ಶತಕ ಬಾರಿಸಿ ಉತ್ತಮ ಲಯದಲ್ಲಿರುವ ರೋಹಿತ್ ಶರ್ಮಾ (31; 20ಎ, 4ಬೌಂ, 1ಸಿ) ಉತ್ತಮ ಆರಂಭ ನೀಡಿದರು. ಇನ್ನೊಂದು ಬದಿಯಲ್ಲಿದ್ದ ಶಿಖರ್ ಧವನ್ (5; 8ಎ) ಹೆಚ್ಚು ಬ್ಯಾಟ್‌ ಮಾಡದೆ ರೋಹಿತ್‌ಗೆ ಅವಕಾಶ ಬಿಟ್ಟುಕೊಟ್ಟರು. ನಾಲ್ಕು ಓವರ್‌ಗಳಲ್ಲಿ 40 ರನ್‌ಗಳು ಸೇರಿದವು.ಆದರೆ, ಇನಿಂಗ್ಸ್‌ನ ಐದನೇ ಓವರ್‌ ಬೌಲಿಂಗ್ ಮಾಡಲು ಇಳಿದ ಆಸ್ಟ್ರೇಲಿಯಾದ ಅನುಭವಿ ಆಲ್‌ ರೌಂಡರ್ ಶೇನ್ ವಾಟ್ಸನ್ ಭಾರತಕ್ಕೆ ಆಘಾತ ನೀಡಿದರು. ತಮ್ಮ ಮೊದಲ ಎಸೆತದಲ್ಲಿಯೇ ರೋಹಿತ್ ಶರ್ಮಾಗೆ ಪೆವಿಲಿಯನ್‌ಗೆ ದಾರಿ ತೋರಿಸಿದರು. ದೊಡ್ಡ ಹೊಡೆತಕ್ಕೆ ಯತ್ನಿಸಿ ಜೇಮ್ಸ್‌ ಫಾಕ್ನರ್‌ಗೆ ಕ್ಯಾಚ್‌ ನೀಡಿದರು. ಅದೇ ಓವರ್‌ನ ಐದನೇ ಎಸೆತದಲ್ಲಿ ಶಿಖರ್ ಧವನ್ ಕೂಡ ವಿಕೆಟ್‌ಕೀಪರ್‌ ಮ್ಯಾಥ್ಯೂ ವೇಡ್‌ಗೆ ಕ್ಯಾಚ್ ಆದರು. ನಂತರ ಆಸ್ಟ್ರೇಲಿಯಾ ಬೌಲರ್‌ಗಳಿಗೆ ವಿರಾಟ್ ಆಟದ ಬಿಸಿ ತಟ್ಟಿತು!ವಿರಾಟ್ ವೀರಾವೇಷ: ಏಕದಿನ ಕ್ರಿಕೆಟ್ ಸರಣಿಯಲ್ಲಿ ಎರಡು ಶತಕ ಮತ್ತು ಅರ್ಧ ಶತಕಗಳೊಂದಿಗೆ ಭರ್ಜರಿ ಫಾರ್ಮ್‌ ನಲ್ಲಿದ್ದ ವಿರಾಟ್ ಚುಟುಕು ಕ್ರಿಕೆಟ್‌ ನಲ್ಲಿಯೂ  ಆಟ ಮುಂದುವರಿಸಿದರು. ಆಸ್ಟ್ರೇಲಿಯಾದ ವೇಗಿಗಳ ಎಸೆತಗಳು ಬೌಂಡರಿಯತ್ತ ದೌಡಾಯಿ ಸಿದವು. ವಿರಾಟ್ ಕೊಹ್ಲಿ (ಅಜೇಯ 90; 55ಎಸೆತಗಳು, 9ಬೌಂಡರಿ, 2 ಸಿಕ್ಸರ್‌ಗಳು) ಅವರು ಒಟ್ಟು 71ನಿಮಿಷಗಳ ಕಾಲ ಕ್ರೀಸ್‌ನಲ್ಲಿದ್ದರು.ಅವರಿಗೆ ಉತ್ತಮ ಜೊತೆ ನೀಡಿದ ಸುರೇಶ್ ರೈನಾ ( 41; 34ಎ, 3ಬೌಂ, 1ಸಿ) ಮೂರನೇ ವಿಕೆಟ್‌ ಜತೆಯಾಟದಲ್ಲಿ 134 ರನ್‌ಗಳನ್ನು ಸೇರಿಸಿದರು. ಇವರಿಬ್ಬರ ಬೀಸಾಟಕ್ಕೆ ಆಸ್ಟ್ರೇಲಿಯಾದ ಐವರು ಬೌಲರ್‌ಗಳು ಸುಸ್ತಾದರು. ಕೊನೆಯ ಓವರ್‌ನಲ್ಲಿ ಫಾಕ್ನರ್ ಎಸೆತದ ವೇಗವನ್ನು ಗುರುತಿಸದೇ ಬ್ಯಾಟ್ ಬೀಸಿದ ಸುರೇಶ್ ರೈನಾ ಕ್ಲೀನ್ ಬೌಲ್ಡ್‌ ಆದರು. ನಂತರ ಬಂದ ನಾಯಕ ದೋನಿ ಕೇವಲ ಮೂರು ಎಸೆತಗಳಲ್ಲಿ 11 ರನ್ ಗಳಿಸಿ ತಂಡದ ಮೊತ್ತವನ್ನು 188 ರನ್‌ಗಳಿಗೆ ಹೆಚ್ಚಿಸಿದರು.ಮಿಂಚಿದ ಜೋಡಿ: ಅಂತರರಾಷ್ಟ್ರೀಯ ಚುಟುಕು ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ  ಪಂದ್ಯದಲ್ಲಿ ಮಧ್ಯಮ ವೇಗಿಗಳ ಜೋಡಿಯು ತಮ್ಮ ಪರಿಣಾಮ ಕಾರಿ ಬೌಲಿಂಗ್ ಮೂಲಕ ಗಮನ ಸೆಳೆಯಿತು.  ಪಂಜಾಬ್‌ನ  ಜಸ್‌ಪ್ರೀತ್ ಬೂಮ್ರಾ (23ಕ್ಕೆ3) ಮತ್ತು ಗುಜರಾತ್‌ನ ಹಾರ್ದಿಕ್ ಪಾಂಡ್ಯ (37ಕ್ಕೆ2) ಆತಿಥೇಯರ ಬಲಿಷ್ಠ ಬ್ಯಾಟಿಂಗ್ ಬೆನ್ನೆಲುಬನ್ನು ಮುರಿದರು.ಬೂಮ್ರಾ ತಮ್ಮ ಶಿಸ್ತಿನ ಬೌಲಿಂಗ್ ಮೂಲಕ ಡೇವಿಡ್ ವಾರ್ನರ್, ಜೇಮ್ಸ್ ಫಾಕ್ನರ್ ಮತ್ತು ಕೆಮರೂನ್ ಬೊಯ್ಸ್ ವಿಕೆಟ್‌ ಕಬಳಿಸಿದರು.  ಆರು ವೈಡ್‌ಗಳನ್ನು ಹಾಕಿದರೂ ಮಹತ್ವದ ವಿಕೆಟ್ ಕಬಳಿಸಿದ ಹಾರ್ದಿಕ್ ಪಾಂಡ್ಯ ಗಮನ ಸೆಳೆದರು. ತಂಡಕ್ಕೆ ಆಸರೆಯಾಗಿದ್ದ ಕ್ರಿಸ್ ಲಿನ್ (17 ರನ್) ಮತ್ತು ಮ್ಯಾಥ್ಯೂ ವೇಡ್ (05) ಅವರ ವಿಕೆಟ್ ಪಡೆದರು.ಆರ್. ಅಶ್ವಿನ್ (28ಕ್ಕೆ2) ಮತ್ತು ರವೀಂದ್ರ ಜಡೇಜ (21ಕ್ಕೆ2) ತಮ್ಮ  ಸ್ಪಿನ್‌ ಕೈಚಳಕವನ್ನು ಮತ್ತೊಮ್ಮೆ ತೋರಿಸಿ ದರು.  ಐದು ವರ್ಷಗಳ ನಂತರ ತಂಡ ದಲ್ಲಿ ಸ್ಥಾನ ಪಡೆದಿರುವ ಎಡಗೈ ವೇಗಿ ಆಶಿಶ್ ನೆಹ್ರಾ (30ಕ್ಕೆ1) ಅವರು ಕೇನ್ ರಿಚರ್ಡ್‌ಸನ್ ವಿಕೆಟ್ ಉರುಳಿಸಿದರು.

ಭಾರತ  3 ಕ್ಕೆ 188  (20 ಓವರ್‌ಗಳಲ್ಲಿ)

ರೋಹಿತ್ ಶರ್ಮಾ ಸಿ ಜೇಮ್ಸ್ ಫಾಕ್ನರ್ ಬಿ ಶೇನ್ ವಾಟ್ಸನ್  31

ಶಿಖರ್ ಧವನ್ ಸಿ ಮೈಕೆಲ್ ವೇಡ್ ಬಿ ಶೇನ್ ವಾಟ್ಸನ್  05

ವಿರಾಟ್ ಕೊಹ್ಲಿ ಔಟಾಗದೆ  90

ಸುರೇಶ್ ರೈನಾ ಬಿ ಜೇಮ್ಸ್ ಫಾಕ್ನರ್  41

ಮಹೇಂದ್ರಸಿಂಗ್ ದೋನಿ ಔಟಾಗದೆ  11

ಇತರೆ: (ಲೆಗ್‌ಬೈ 3, ವೈಡ್ 7)  10

ವಿಕೆಟ್‌ ಪತನ: 1–40 (ರೋಹಿತ್; 4.1), 2–41 (ಶಿಖರ್; 4.5), 3–175 (ರೈನಾ; 19.2)

ಬೌಲಿಂಗ್‌: ಶಾನ್ ಟೈಟ್ 4–0–45–0 (ವೈಡ್ 6), ಕೇನ್ ರಿಚರ್ಡ್‌ಸನ್ 4–0–41–0, ಜೇಮ್ಸ್ ಫಾಕ್ನರ್ 4–0–43–1, ಶೇನ್ ವಾಟ್ಸನ್ 4–0–24–2 (ವೈಡ್ 1), ಕೆಮರಾನ್ ಬೊಯ್ಸ್ 3–0–23–0ಆಸ್ಟ್ರೇಲಿಯಾ  151  (19.3 ಓವರ್‌ಗಳಲ್ಲಿ)

ಆ್ಯರನ್ ಫಿಂಚ್ ಎಲ್‌ಬಿಡಬ್ಲ್ಯು ಬಿ ಆಶ್ವಿನ್  44

ಡೇವಿಡ್ ವಾರ್ನರ್ ಸಿ ವಿರಾಟ್ ಕೊಹ್ಲಿ ಬಿ ಜಸ್‌ಪ್ರೀತ್ ಬೂಮ್ರಾ  17

ಸ್ಟಿವನ್ ಸ್ಮಿತ್ ಸಿ ವಿರಾಟ್ ಕೊಹ್ಲಿ ಬಿ ರವೀಂದ್ರ ಜಡೇಜ  21

ಟ್ರಾವಿಸ್ ಹೆಡ್ ಎಲ್‌ಬಿಡಬ್ಲ್ಯು ಬಿ ರವೀಂದ್ರ ಜಡೇಜ  02

ಕ್ರಿಸ್ ಲಿನ್ ಸಿ ಯುವರಾಜ್ ಸಿಂಗ್ ಬಿ ಹಾರ್ದಿಕ್ ಪಾಂಡ್ಯ  17

ಶೇನ್ ವಾಟ್ಸನ್ ಸಿ ಆಶಿಶ್ ನೆಹ್ರಾ ಬಿ ಅಶ್ವಿನ್  12

ಮ್ಯಾಥ್ಯೂ ವೇಡ್ ಸಿ ರವೀಂದ್ರ ಜಡೇಜ ಬಿ ಹಾರ್ದಿಕ್ ಪಾಂಡ್ಯ  05

ಜೇಮ್ಸ್ ಫಾಕ್ನರ್ ಬಿ ಜಸ್‌ಪ್ರೀತ್ ಬೂಮ್ರಾ  10

ಕೇನ್ ರಿಚರ್ಡ್‌ಸನ್ ಬಿ ಆಶಿಶ್ ನೆಹ್ರಾ  09

ಕೆಮರೂನ್ ಬೊಯ್ಸ್ ಸಿ ಹಾರ್ದಿಕ್ ಪಾಂಡ್ಯ ಬಿ ಜಸ್‌ಪ್ರೀತ್ ಬೂಮ್ರಾ  03

ಶಾನ್ ಟೈಟ್ ಔಟಾಗದೆ  01

ಇತರೆ: (ಲೆಗ್‌ಬೈ 2, ವೈಡ್ 8)  10

ವಿಕೆಟ್‌ ಪತನ:  1–47 (ವಾರ್ನರ್‌; 5.1), 2–89 (ಸ್ಮಿತ್; 8.6), 3–89 (ಫಿಂಚ್; 9.2), 4–93 (ಹೆಡ್; 10.6), 5– 110 (ವಾಟ್ಸನ್; 13.3), 6–124 (ಲಿನ್; 14.6), 7–129 (ವೇಡ್; 16.1), 8–143 (ಫಾಕ್ನರ್; 17.2),

9–149 (ರಿಚರ್ಡ್‌ಸನ್; 18.2), 10–151 (ಕೆಮರೂನ್; 19.3)

ಬೌಲಿಂಗ್‌: ಆಶಿಶ್ ನೆಹ್ರಾ 4–0–30–1, ಆರ್. ಅಶ್ವಿನ್ 4–0–28–2 (ವೈಡ್1), ಜಸ್‌ಪ್ರೀತ್ ಬೂಮ್ರಾ 3.3–0–23–3 (ವೈಡ್ 1), ರವೀಂದ್ರ

ಜಡೇಜ 4–0–21–2, ಹಾರ್ದಿಕ್ ಪಾಂಡ್ಯ 3–0–37–2 (ವೈಡ್ 6), ಯುವರಾಜ್ ಸಿಂಗ್ 1–0–10–0

ಫಲಿತಾಂಶ:   ಭಾರತಕ್ಕೆ 37 ರನ್‌ಗಳ ಗೆಲುವು ಹಾಗೂ ಸರಣಿಯಲ್ಲಿ   1 –0ರಲ್ಲಿ ಮುನ್ನಡೆ

ಪಂದ್ಯಶ್ರೇಷ್ಠ: ವಿರಾಟ್‌ ಕೊಹ್ಲಿ, ಮುಂದಿನ ಪಂದ್ಯ: ಜನವರಿ 29 (ಸ್ಥಳ: ಮೆಲ್ಬರ್ನ್)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.