ವಿರಾಟ್ ಕೊಹ್ಲಿ, ಓಜಾಗೆ ತಂಡದಲ್ಲಿ ಸ್ಥಾನ

7

ವಿರಾಟ್ ಕೊಹ್ಲಿ, ಓಜಾಗೆ ತಂಡದಲ್ಲಿ ಸ್ಥಾನ

Published:
Updated:
ವಿರಾಟ್ ಕೊಹ್ಲಿ, ಓಜಾಗೆ ತಂಡದಲ್ಲಿ ಸ್ಥಾನ

ನಾಟಿಂಗ್‌ಹ್ಯಾಮ್ (ಪಿಟಿಐ/ಐಎಎನ್‌ಎಸ್): ಹೊಟ್ಟೆ ನೋವಿನ ಸಮಸ್ಯೆಗೆ ಒಳಗಾಗಿರುವ ಭಾರತ ತಂಡದ ಆಫ್ ಸ್ಪಿನ್ನರ್ ಹರಭಜನ್ ಸಿಂಗ್ ಹಾಗೂ ಎಡಗೈ ತೋರು ಬೆರಳಿಗೆ ಗಾಯಮಾಡಿಕೊಂಡಿರುವ ಯುವರಾಜ್ ಸಿಂಗ್ ಅವರು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಯ ಉಳಿದ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ.ಈ ಆಟಗಾರರ ಬದಲಿಗೆ ಎಡಗೈ ಸ್ಪಿನ್ನರ್ ಪ್ರಗ್ಯಾನ್ ಓಜಾ ಹಾಗೂ ಯುವ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿಗೆ ಅವಕಾಶ ನೀಡಲಾಗಿದೆ. ಟ್ರೆಂಟ್‌ಬ್ರಿಜ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಜ್ಜಿ ಹಾಗೂ ಯುವಿ ಈ ಸಮಸ್ಯೆಗೆ ಒಳಗಾಗಿದ್ದರು.`ಓಜಾ ಹಾಗೂ ಕೊಹ್ಲಿಗೆ ಸ್ಥಾನ ನೀಡಲು ಆಯ್ಕೆ ಸಮಿತಿ ನಿರ್ಧರಿಸಿದೆ. ಈ ಆಟಗಾರರು ಆದಷ್ಟು ಬೇಗ ತಂಡ ಸೇರಿಕೊಳ್ಳಲಿದ್ದಾರೆ~ ಎಂದು ಬಿಸಿಸಿಐ ಕಾರ್ಯದರ್ಶಿ ಎನ್.ಶ್ರೀನಿವಾಸನ್ ತಿಳಿಸಿದ್ದಾರೆ.ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಅರ್ಧ ಶತಕ ಗಳಿಸಿದ್ದ ಯುವರಾಜ್ ವೇಗಿ ಟಿಮ್ ಬ್ರೆಸ್ನನ್ ಅವರ ಎಸೆತದಲ್ಲಿ ಗಾಯಕ್ಕೆ ಒಳಗಾಗಿದ್ದರು. ಆದರೆ ಈ ಸರಣಿಯಲ್ಲಿ ಹರಭಜನ್ ಸಂಪೂರ್ಣ ವಿಫಲರಾಗಿದ್ದಾರೆ. ಅವರು ಲಾರ್ಡ್ಸ್ ಟೆಸ್ಟ್‌ನಲ್ಲಿ 218ಕ್ಕೆ1 ಹಾಗೂ ಟ್ರೆಂಟ್‌ಬ್ರಿಜ್ ಟೆಸ್ಟ್‌ನಲ್ಲಿ 69ಕ್ಕೆ1 ವಿಕೆಟ್ ಪಡೆದಿದ್ದರು.ಯುವಿಗೆ ಕನಿಷ್ಠ ನಾಲ್ಕು ವಾರ ಹಾಗೂ ಭಜ್ಜಿಗೆ ಮೂರು ವಾರ ವಿಶ್ರಾಂತಿ ಬೇಕಾಗಿದೆ. ಹಾಗಾಗಿ ಅವರು ಏಕದಿನ ಸರಣಿಯ ಕೆಲ ಪಂದ್ಯಗಳಿಗೆ ಲಭ್ಯರಾಗುವುದು ಅನುಮಾನ. ಯುವರಾಜ್ ಲಂಡನ್‌ನಲ್ಲೇ ಚಿಕಿತ್ಸೆ ಪಡೆಯಲಿದ್ದಾರೆ.ಈಗಾಗಲೇ ನಾಲ್ಕು ಪಂದ್ಯಗಳ ಸರಣಿಯಲ್ಲಿ 0-2ರಲ್ಲಿ ಹಿನ್ನಡೆ ಹೊಂದಿರುವ ಭಾರತಕ್ಕೆ ಇದು ಮತ್ತಷ್ಟು ಪೆಟ್ಟು ನೀಡಿದೆ. ಗಾಯದ ಕಾರಣ ಈ ಸರಣಿಯಲ್ಲಿ ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್ ಹಾಗೂ ಜಹೀರ್ ಖಾನ್ ಸೇವೆ ಕೂಡ ಸರಿಯಾಗಿ ಲಭ್ಯವಾಗಿಲ್ಲ.ಆದರೆ ವೆಸ್ಟ್‌ಇಂಡೀಸ್ ವಿರುದ್ಧದ ಟೆಸ್ಟ್ ಸರಣಿ ವೇಳೆ ಪದಾರ್ಪಣೆ ಮಾಡಿದ್ದ ದೆಹಲಿಯ ಕೊಹ್ಲಿ ಮೂರು ಪಂದ್ಯಗಳಿಂದ ಕೇವಲ 76 ರನ್ ಗಳಿಸಿದ್ದರು. ಹಾಗಾಗಿ ಅವರನ್ನು ಇಂಗ್ಲೆಂಡ್ ವಿರುದ್ಧದ ಸರಣಿಗೆ ತಂಡದಿಂದ ಕೈಬಿಡಲಾಗಿತ್ತು.ತಂಡ ಸೇರಿದ ವೀರೂ: ಈ ಮಧ್ಯೆ, ಆರಂಭಿಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಭಾರತ ತಂಡ ಸೇರಿಕೊಂಡಿದ್ದಾರೆ.  ಅವರು ನಾರ್ಥ್ಯಾಂಪ್ಟನ್ ಎದುರು ಶುಕ್ರವಾರ ಶುರುವಾಗಲಿರುವ ಎರಡು ದಿನಗಳ ಅಭ್ಯಾಸದಲ್ಲಿ ಪಂದ್ಯದಲ್ಲಿ ಆಡುವ ಸಾಧ್ಯತೆ ಇದೆ. ಗಂಭೀರ್ ಕೂಡ ಗಾಯದಿಂದ ಚೇತರಿಸಿಕೊಂಡಿದ್ದು ಆಗಸ್ಟ್ 10ರಂದು ಆರಂಭವಾಗಲಿರುವ ಮೂರನೇ ಪಂದ್ಯಕ್ಕೆ ಲಭ್ಯರಿರುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry