ವಿರುದ್ಧ ಅಣ್ಣಾ ತಂಡ ಆರೋಪ ಇ-ಮೇಲ್‌ಗೆ ಲಗ್ಗೆ: ಕೇಜ್ರಿವಾಲ್

7

ವಿರುದ್ಧ ಅಣ್ಣಾ ತಂಡ ಆರೋಪ ಇ-ಮೇಲ್‌ಗೆ ಲಗ್ಗೆ: ಕೇಜ್ರಿವಾಲ್

Published:
Updated:

ನವದೆಹಲಿ (ಐಎಎನ್‌ಎಸ್):ಅರವಿಂದ್ ಕೇಜ್ರಿವಾಲ್ ಅವರ `ಆಮ್ ಆದ್ಮಿ ಪಾರ್ಟಿ' (ಎಎಪಿ)ಯು ಅಣ್ಣಾ ಹಜಾರೆಯವರ `ಭ್ರಷ್ಟಾಚಾರ ವಿರೋಧಿ ಭಾರತ (ಐಎಸಿ) ಸಂಘಟನೆ'ಯ ಇ-ಮೇಲ್ ಪಟ್ಟಿಯನ್ನು ಬಳಕೆಗೆ ನಿರುಪಯುಕ್ತವಾಗಿಸಿದೆ ಎಂದು ಅಣ್ಣಾ ತಂಡ ಆರೋಪಿಸಿದೆ.“ಸರ್ಕಾರಕ್ಕೆ ಸಂಬಂಧಿಸಿದವರು ಈ ಕೃತ್ಯ ಮಾಡಿರಬೇಕು ಎಂದು ಅಣ್ಣಾ ತಂಡ ಈ ಹಿಂದೆ ಆರೋಪಿಸಿತ್ತು. ಆದರೆ ಇದು ಅರವಿಂದ್ ಕೇಜ್ರಿವಾಲ್ ಅವರ ತಂಡದ್ದೇ ಕೃತ್ಯ. ಏಕೆಂದರೆ ಇತ್ತೀಚೆಗೆ ನಾವು `ಆಮ್ ಆದ್ಮಿ  ಪಾರ್ಟಿ'ಯ ಕಾರ್ಯಕರ್ತರು ಪೊಲೀಸ್ ಪೇದೆಯನ್ನು ಹೊಡೆದು ಸಾಯಿಸಿರುವ ಘಟನೆಗೆ ಸಂಬಂಧಿಸಿದಂತೆ ಕೆಲವು ಸಂದೇಶಗಳನ್ನು ಕಳುಹಿಸಿದ್ದೆವು.ಕಿರಣ್ ಬೇಡಿ ಮನವಿಯ ಮೇರೆಗೆ ಐಎಸಿಯಿಂದ ಅವರ ಪ್ರಾಥಮಿಕ ಸದಸ್ಯತ್ವ ಕೊನೆಗೊಳಿಸಿರುವುದು ಮತ್ತು ಎಎಪಿ ಕಾರ್ಯಕರ್ತರನ್ನು ತೆಗೆದು ಹಾಕಿರುವ ಬಗ್ಗೆ ಇನ್ನೊಂದು ಸಂದೇಶವನ್ನು ಕೂಡ ರವಾನಿಸಿದ್ದೆವು” ಎಂದು ಐಎಸಿ ರಾಷ್ಟ್ರೀಯ ಸೈಬರ್ ಮಾಧ್ಯಮ ಸಮನ್ವಯಕಾರ ಅಜಯ್ ದಿಕ್ಷೀತ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry