ವಿರೋಧಾಭಾಸ !

7

ವಿರೋಧಾಭಾಸ !

Published:
Updated:

`ಅತ್ಯಾಚಾರ ಪ್ರಕರಣ: ಸಂಸತ್‌ನಲ್ಲಿ ತೀವ್ರ ಆಕ್ರೋಶ' (ಪ್ರ. ವಾ. ಡಿ. 19)ಭೇಷ್! ದೇಶ ತಕ್ಕಮಟ್ಟಿಗಾದರೂ ಎಚ್ಚತ್ತಿದೆ ಎಂಬುದಕ್ಕೆ ನಿದರ್ಶನ. ಇಂಥದೊಂದು ಪ್ರಕರಣಕ್ಕೆ ಸಂಸತ್ ಹಿಂದೆಂದೂ ಹೀಗೆ ಸ್ಪಂದಿಸಿರಲಿಲ್ಲ!ಇದೊಂದು `ಸುಮುಖ'. ಆದರೆ `ದುರ್ಮುಖ'ಗಳೂ ಇವೆ: ಉದಾಹರಣೆಗೆ, ಭೀಭತ್ಸ `ಮಡೆ ಮಡೆ ಸ್ನಾನ'ಕ್ಕೆ ಸರ್ವೋಚ್ಚ ನ್ಯಾಯಾಲಯ ಅವಕಾಶ ನೀಡಿದ್ದು! ಮಡೆಯಿಂದ ಸಮಾಜದ ಹಿನ್ನಡೆ ಎಂಬುದು ನ್ಯಾಯಮೂರ್ತಿಗಳಿಗೆ ಅರಿವಾಗಲಿಲ್ಲವೇಕೆ? `ಭಾರತ ವಿರೋಧಾಭಾಸಗಳ ದೇಶ' ಎಂಬ ಉಕ್ತಿ ಈ ಎರಡೂ ಪ್ರಕರಣಗಳಲ್ಲೂ ಮತ್ತೆ ಸಾಬೀತಾಯಿತೆ?

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry