ಶನಿವಾರ, ನವೆಂಬರ್ 23, 2019
18 °C

ವಿರೋಧ ಪಕ್ಷಗಳ ವಾಗ್ದಾಳಿ ಎದುರಿಸಲು ಕಾಂಗ್ರೆಸ್ ಕಾರ್ಯತಂತ್ರ

Published:
Updated:

ನವದೆಹಲಿ (ಪಿಟಿಐ): ಮುಂದಿನ ವಾರ ಸಂಸತ್ತಿನ ಬಜೆಟ್ ಅಧಿವೇಶನದ ಎರಡನೇ ಭಾಗ ಆರಂಭವಾಗಲಿದ್ದು, ವಿರೋಧ ಪಕ್ಷಗಳು ಕಲ್ಲಿದ್ದಲು ಹಗರಣ ಮತ್ತು 2ಜಿ ತರಂಗಾಂತರ ಹಂಚಿಕೆ ಹಗರಣವನ್ನು ಪ್ರಸ್ತಾಪಿಸಿ ಸರ್ಕಾರವನ್ನು ಹಣಿಯಲು ತುದಿಗಾಲಲ್ಲಿ ನಿಂತಿರುವುದರಿಂದ ತಂತ್ರ ರೂಪಿಸಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಶುಕ್ರವಾರ ಹಿರಿಯ ಮುಖಂಡರ ಸಭೆ ನಡೆಸಿದರು.ರಕ್ಷಣಾ ಸಚಿವ ಎ. ಕೆ. ಅಂಟನಿ, ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ, ಸಂಸದೀಯ ವ್ಯವಹಾರಗಳ ಸಚಿವ ಕಮಲ್‌ನಾಥ್, ಗ್ರಾಮೀಣಾಭಿವೃದ್ಧಿ ಸಚಿವ ಜಯರಾಂ ರಮೇಶ್, ಸೋನಿಯಾ ಅವರ ರಾಜಕೀಯ ಕಾರ್ಯದರ್ಶಿ ಅಹಮದ್ ಪಟೇಲ್ ಅವರು ಭಾಗವಹಿಸಿದ್ದರು.ಭೂ ಸ್ವಾಧೀನ ಮಸೂದೆಯ ಬಗ್ಗೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಭೆ ಕರೆದು ಒಟ್ಟಾಭಿಪ್ರಾಯ ಮೂಡಿಸಲು ಯಶಸ್ವಿಯಾದ ನಂತರ ಈ ತಂತ್ರಗಾರಿಕೆ ರೂಪಿಸುವ ಸಭೆ ನಡೆದಿದೆ.

ಪ್ರತಿಕ್ರಿಯಿಸಿ (+)