ಬುಧವಾರ, ಜೂನ್ 23, 2021
22 °C

ವಿಲಾಸಿ ಯೋಜನೆ: ಪೂರ್ವ ಸೀಸನ್ಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇಶದ ಮುಂಚೂಣಿಯ ರಿಯಲ್ ಎಸ್ಟೇಟ್ ಕಂಪೆನಿ ಪುರವಂಕರ ಪ್ರಾಜೆಕ್ಟ್ ಲಿಮಿಟೆಡ್ ಇದೀಗ ಬೆಂಗಳೂರಿನ ಕೇಂದ್ರ ಭಾಗದಲ್ಲಿ ರೂ 700 ಕೋಟಿ ವೆಚ್ಚದ ಸೂಪರ್ ಲಕ್ಷುರಿ  ಪ್ರಾಜೆಕ್ಟ್ `ಪೂರ್ವ ಸೀಸನ್ಸ್~ಗೆ ಚಾಲನೆ ನೀಡಿದೆ.  `ಇಪ್ಪತ್ತುನಾಲ್ಕು ಗಂಟೆಗಳಿಗೂ ಅಧಿಕ ಸಮಯದ ಲೈಫ್‌ಸ್ಟೈಲ್~ ಎಂಬ ತತ್ವ ಈ ಯೋಜನೆಯ ಹಿಂದಿದೆ.ಎಂ. ಜಿ. ರಸ್ತೆಯಿಂದ ಕೇವಲ 15 ನಿಮಿಷ ಹಾಗೂ ಇಂದಿರಾ ನಗರದ 100 ಅಡಿ ರಸ್ತೆಯಿಂದ ಕೇವಲ ಐದು ನಿಮಿಷ ಪ್ರಯಾಣದ ಸಿ.ವಿ.ರಾಮನ್ ನಗರದಲ್ಲಿ ಈ ಯೋಜನೆ ಕಾರ್ಯರೂಪಕ್ಕೆ ಬರುತ್ತಿದೆ. ನಗರದ ವೇಗದ ಜೀವನದ ನಡುವೆ   ಶಾಂತಿ ಹಾಗೂ ನೆಮ್ಮದಿಯ ಬದುಕು ದೊರಕಿಸಿಕೊಡುವ ಉದ್ದೇಶ ಈ ಯೋಜನೆಯ ಹಿಂದಿದೆ.ಸಮರ್ಪಕ ವಿನ್ಯಾಸದ ಹಾಗೂ ಸೌಂದರ್ಯಾಭಿರುಚಿಗೆ ಹೆಸರುವಾಸಿಯಾದ `ಪೂರ್ವ ಸೀಸನ್ಸ್~ ವಿಶ್ವ ದರ್ಜೆಯ ಸೌಲಭ್ಯಗಳನ್ನು ಹೊಂದಿದೆ. ಕ್ಲಬ್‌ಹೌಸ್, ಈಜುಕೊಳ, ಹೊರಾಂಗಣ ಆಟಕ್ಕೆ ಅನುಕೂಲವಾಗುವ ಸ್ಥಳಗಳು ಮುಂತಾದ ಅತ್ಯಾಧುನಿಕ ಜೀವನಕ್ಕೆ ಅಗತ್ಯವಾದ ಎಲ್ಲಾ ಸೌಲಭ್ಯಗಳನ್ನು ಈ ಯೋಜನೆ ಹೊಂದಿದ್ದು ನಿಜಕ್ಕೂ ಇಪ್ಪತ್ತನಾಲ್ಕು ಗಂಟೆಗೂ ಅಧಿಕದ ಜೀವನಶೈಲಿಯ ಅನುಭವವನ್ನು ನೀಡಲಿದೆ.1.08 ದಶಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಹರಡಿಕೊಂಡಿರುವ  `ಪೂರ್ವ ಸೀಸನ್ಸ್~ನಲ್ಲಿ ಒಟ್ಟು 660 ಫ್ಲ್ಯಾಟ್ ಮತ್ತು 1980 ಚದರ ಅಡಿ ವಿಸ್ತೀರ್ಣದ ಎರಡು ಮತ್ತು ಮೂರು ಬೆಡ್‌ರೂಂಗಳ ಫ್ಲ್ಯಾಟ್‌ಗಳು  ಲಕ್ಷುರಿ ಹಾಗೂ ಆರಾಮದ ಅನುಭವವನ್ನು ನೀಡಲಿದೆ.            

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.