ಶನಿವಾರ, ಮೇ 8, 2021
26 °C

ವಿಲಿಯಂಗೆ ಭಾರತ ನಂಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಲಿಯಂಗೆ ಭಾರತ ನಂಟು

ಲಂಡನ್ (ಪಿಟಿಐ): ಬ್ರಿಟನ್ ರಾಜಮನೆತನದ ಮುಂದಿನ ಉತ್ತರಾಧಿಕಾರಿ ಆಗಲಿರುವ ರಾಜಕುಮಾರ ವಿಲಿಯಂ ಅವರ ಪೂರ್ವಜರು ಭಾರತದವರು ಎಂಬುದು ಡಿಎನ್‌ಎ ವಿಶ್ಲೇಷಣೆಯಿಂದ ಗೊತ್ತಾಗಿದೆ.ವಿಲಿಯಂ ಅವರ ಮುತ್ತಜ್ಜನಿಗೆ (1788-1820) ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದವಳು ಭಾರತೀಯ ಮೂಲದ ಎಲಿಜಾ ಕೆವರ್ಕ್. ಆಕೆಯ ಜತೆ ಮುತ್ತಜ್ಜ ಹೊಂದಿದ್ದ ಸಂಬಂಧದಿಂದಾಗಿ ಎಲಿಜಾ ಅವರ ವಂಶವಾಹಿನಿಯು ಮಗಳು, ಮೊಮ್ಮಗಳು, ನಂತರ ಮರಿಮೊಮ್ಮಗಳಾದ ಡಯಾನಾ ಮೂಲಕ ವಿಲಿಯಂಗೆ ಬಂದಿದೆ ಎಂದು ಡಿಎನ್‌ಎ ವಿಶ್ಲೇಷಣಾ ವರದಿ ತಿಳಿಸಿದೆ ಎನ್ನಲಾಗಿದೆ.ಸ್ಕಾಟಿಷ್ ವ್ಯಾಪಾರಿಯಾಗಿದ್ದ ವಿಲಿಯಂ ಅವರ 5ನೇ ತಲೆಮಾರಿನ ಮುತ್ತಜ್ಜ ತಿಯೊದೊರೆ ಫೋಬ್ಸ್ ಅವರು ಗುಜರಾತ್‌ನ ಸೂರತ್ ಪಟ್ಟಣದಲ್ಲಿ ಈಸ್ಟ್ ಇಂಡಿಯಾ ಕಂಪೆನಿಗಾಗಿ ಕೆಲಸ ಮಾಡುತ್ತಿದ್ದಾಗ ಎಲಿಜಾ ಜೊತೆ ಸಂಬಂಧ ಬೆಳೆಸಿರುವುದಾಗಿ ಹೇಳಲಾಗಿದೆ.ಎಲಿಜಾ ತಾಯಿ ಭಾರತೀಯಳು ಮತ್ತು ತಂದೆ ಅರ್ಮೇನಿಯಾ ಮೂಲದವರು ಇರಬಹುದು ಎಂದೂ ಡಿಎನ್‌ಎಯಿಂದ ತಿಳಿದಿರುವುದಾಗಿ ವಿಶ್ಲೇಷಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.