ಮಂಗಳವಾರ, ಡಿಸೆಂಬರ್ 10, 2019
26 °C
ಕವಿತೆ

ವಿಲೇವಾರಿ

Published:
Updated:
ವಿಲೇವಾರಿ

ವಿಲೇವಾರಿಗಿದೆ ಈ ಮನೆ

ರೀಪು ಪಕಾಸಿ ಹಿರಿದ

ಹಲವು ಕಂಬದ ಈ ಹಳೆಮನೆ

ಆರು ದಶಕಗಳ ಹಿಂದೆ ಇತ್ತು

ಅದರದೇ ಆದ ಗೈರತ್ತು

ಗಾಳಿ ಬೆಳಕಿಗೆ ಸದಾ ತೆರೆದಮನೆ

ಮೂಲೆ ಮೂಲೆಗಳಲ್ಲಿ

ಗಂಧವತಿ ಪೃಥ್ವಿಯ ಹೊಸ ಹವೆ

ಅಜ್ಜ ಹೊರಟು ಹೋದ

ಮುಚ್ಚುತ್ತಾ ಬಂತು ಒಂದೊಂದು ಕಿಟಕಿ ಬಾಗಿಲು

ಉಳಿದವು ಕೆಲವೇ ಲೆಕ್ಕಕ್ಕೆ

ಮೊಮ್ಮಗನ ಕಾಲಕ್ಕೆ

ಬರುಬರುತ್ತಾ

ಒಳಗೆ ಗವ್ವೆನ್ನುವ ಕತ್ತಲು

ಕಾಗೆ ಗೂಗೆಗಳ ಆವಾಸಸ್ಥಾನ

ಅನಾದಿಯ ದೈದೀಪ್ಯಮಾನ ದೀಪ

ಎಣ್ಣೆಬತ್ತಿಯ ಕೊರತೆಯಲ್ಲಿ ಕ್ಷೀಣ

ಒಮ್ಮೆಲೆ

ಬಾಗಿಲು ಮುರಿದು ಬಿರುಗಾಳಿ ಒಳ ನುಗ್ಗಿತು

ತತ್ತರಿಸಿದ ಅಜ್ಜನ ಆತ್ಮ ಹೇಳಿತು

ವ್ಯರ್ಥ ಈ ಹೊತ್ತಿನ (ಪ್ರಜಾ) ಪ್ರಭುತ್ವ.

ಪ್ರತಿಕ್ರಿಯಿಸಿ (+)