ವಿಲೇವಾರಿಯಾಗದ ಕಸ

7

ವಿಲೇವಾರಿಯಾಗದ ಕಸ

Published:
Updated:
ವಿಲೇವಾರಿಯಾಗದ ಕಸ

ಕೃಷ್ಣರಾಜಪುರ: ರಾಮಮೂರ್ತಿನಗರ ಪ್ರಮುಖ ರಸ್ತೆ ವಿಸ್ತರಣೆಗೆ ಬಿಬಿಎಂಪಿ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿದೆ. ಆದರೆ ವಾಹನಗಳ ಸುಗಮ ಸಂಚಾರ ಮತ್ತು ನಾಗರಿಕರ ಓಡಾಟಕ್ಕೆ ರಸ್ತೆ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ ಎಂದು ನಾಗರಿಕರ ಪರ ಸಂಘಟನೆಗಳು ದೂರಿವೆ. ಚನ್ನಸಂದ್ರ ವರ್ತುಲ ರಸ್ತೆ ಮತ್ತು ಹಳೇ ಮದ್ರಾಸ್ ರಸ್ತೆಗೆ ಸಂಪರ್ಕಿಸುವ ರಾಮಮೂರ್ತಿನಗರ ಪ್ರಮುಖ ರಸ್ತೆಯಲ್ಲಿ ಅಲ್ಲಲ್ಲಿ ಗುಂಡಿಗಳು ಬಿದ್ದಿರುವುದರಿಂದ ವಾಹನ ಸವಾರರು ತಿರುವು ಪಡೆಯುವಲ್ಲಿ ಹರಸಾಹಸ ಮಾಡಬೇಕಾಗಿದೆ. ಹೀಗಾಗಿ ಅಪಘಾತಕ್ಕೆ ಆಹ್ವಾನದಂತಿರುವ ಗುಂಡಿಗಳನ್ನು ಆದಷ್ಟು ಬೇಗ ಮುಚ್ಚಲು ಬಿಬಿಎಂಪಿ ಕ್ರಮಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ನರೇಂದ್ರ ಒತ್ತಾಯಿಸಿದ್ದಾರೆ.ಅಲ್ಲದೆ, ಮುಖ್ಯ ರಸ್ತೆಯ ಬದಿಗಳಲ್ಲಿ ಅಸಮರ್ಪಕ ಕಸ ವಿಲೇವಾರಿಯಿಂದ ವಾತಾವರಣ ಕಲುಷಿತಗೊಂಡಿದೆ. ಸಂಗ್ರಹವಾದ ಕಸವನ್ನು ಹಸು ಮತ್ತು ನಾಯಿಗಳು ತಿಂದು ರಸ್ತೆ ಮಧ್ಯಭಾಗಕ್ಕೆ ತಂದುಬಿಡುತ್ತವೆ. ವಿಲೇವಾರಿ ಆಗದ ಕಸ ತೆರೆದ ಚರಂಡಿಗೂ ಸೇರುತ್ತಿದೆ.ಹೀಗಾಗಿ ಶುಚಿತ್ವ ಇಲ್ಲದೆ ಪಾದಚಾರಿಗಳು  ಮೂಗುಮುಚ್ಚಿಕೊಂಡು ಓಡಾಡಬೇಕಿದೆ. ಈ ಅವ್ಯವಸ್ಥೆಯ ಬಗ್ಗೆ ಈಗಾಗಲೇ ಬಿಬಿಎಂಪಿಗೆ ಮನವಿ ಸಲ್ಲಿಸಿದ್ದರೂ ಇದವರೆರೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಂಗಡಿ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry