ವಿಲ್ಲಾ ಮೆಂಟ್ಸ್ ಯೋಜನೆ ಆರಂಭ

7

ವಿಲ್ಲಾ ಮೆಂಟ್ಸ್ ಯೋಜನೆ ಆರಂಭ

Published:
Updated:

ಬೆಂಗಳೂರು: ನಿರ್ಮಾಣ ಸಂಸ್ಥೆಯಾದ `ಹೆಬಿಟೇಟ್ ಕ್ರೆಸ್ಟ್~ ನಗರದ ವೈಟ್‌ಫೀಲ್ಡ್‌ನಲ್ಲಿ `ವಿಲ್ಲಾ ಮೆಂಟ್ಸ್~ ಹೆಸರಿನ ನೂತನ ವಸತಿ ಯೋಜನೆಯನ್ನು ಕೈಗೆತ್ತಿಕೊಂಡಿದೆ.ನಗರದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಕಾರ್ಯ ನಿರ್ವಾಹಕ ನಿರ್ದೇಶಕ ಭಾಸ್ಕರ್ ನಾಗೇಂದ್ರಪ್ಪ, `ವಿದೇಶಿ ನೇರ ಬಂಡವಾಳ ಹೂಡಿಕೆಯಡಿ ಮನೆಗಳನ್ನು ನಿರ್ಮಿಸಲಾಗುತ್ತಿದೆ. ನಿವೇಶನ ಹಾಗೂ ಕಟ್ಟಡ ಸೇರಿದಂತೆ ಒಟ್ಟು 120 ಕೋಟಿ ರೂಪಾಯಿಯಲ್ಲಿ ಯೋಜನೆ ಆರಂಭವಾಗಿದೆ. 2013ರ ವೇಳೆಗೆ ಮನೆಗಳು ವಾಸಕ್ಕೆ ಲಭಿಸಲಿವೆ~ ಎಂದರು.`2850ರಿಂದ 3335 ಚದರ ಅಡಿ ವಿಸ್ತೀರ್ಣದಲ್ಲಿ 150 ಮನೆಗಳನ್ನು ನಿರ್ಮಿಸಲಾಗುತ್ತಿದೆ. 3ರಿಂದ 4 ಬೆಡ್‌ರೂಂ ಇರುವ ಮನೆಗಳು ಲಭ್ಯ ಇವೆ. ನೆಲಮಾಳಿಗೆಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಇದ್ದು ಇಡೀ ಸಮುಚ್ಚಯದಲ್ಲಿ ವಾಹನ ಸಂಚಾರ ಇರುವುದಿಲ್ಲ~ ಎಂದು ಹೇಳಿದರು.ಸಂಸ್ಥೆಯ ಮತ್ತೊಬ್ಬ ಕಾರ್ಯನಿರ್ವಾಹಕ ನಿರ್ದೇಶಕ ಶಿವರಾಮ್ ಕುಮಾರ್ ಮಲಕಾಲ, `ವಸತಿ ಸಮುಚ್ಚಯದಲ್ಲಿ ಎಲ್ಲಾ ನಿವಾಸಿಗಳಿಗೂ ಉದ್ಯಾನ, ಕ್ರೀಡಾಂಗಣ, ಬಯಲು ರಂಗಮಂದಿರ, ಯೋಗ ಮಂದಿರ, ಮಕ್ಕಳ ಆಟಕ್ಕೆ ವ್ಯವಸ್ಥೆ, ಈಜುಕೊಳ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಪ್ರತಿ ಮನೆಗೂ 2 ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಹಾಗೂ ಸಿಸಿಟಿವಿ ಭದ್ರತೆ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಲಾಗುವುದು~ ಎಂದರು.`ಎಂ.ಜಿ.ರಸ್ತೆಯಿಂದ 12 ಕಿ.ಮೀ ದೂರದಲ್ಲಿ ವಸತಿ ಸಮುಚ್ಚಯ ನಿರ್ಮಾಣವಾಗುತ್ತಿದ್ದು ಮಾಹಿತಿ ತಂತ್ರಜ್ಞಾನ ಉದ್ಯೋಗಿಗಳಿಗೆ ಇದು ಹೆಚ್ಚು ಉಪಯುಕ್ತ. ಒಂದು ಬ್ಲಾಕ್‌ನಲ್ಲಿ ಐದು ಮನೆಗಳನ್ನು ನಿರ್ಮಿಸಿರುವುದರಿಂದ ಸುರಕ್ಷತೆಯ ದೃಷ್ಟಿಯಿಂದಲೂ ಇದು ಅನುಕೂಲಕರ~ ಎಂದು ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry