ಬುಧವಾರ, ಜೂನ್ 23, 2021
28 °C

ವಿವರಣೆಯ ವೇದಿಕೆಯಾದ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ಸೋಮವಾರ ನಡೆದ ಬೆಂಗಳೂರು ಉತ್ತರ ಲೋಕ­ಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಮಾ­ವೇಶ ಅಭ್ಯರ್ಥಿ ಆಯ್ಕೆಯಲ್ಲಿ ಉಂಟಾಗಿದ್ದ  ಗೊಂದಲ­ಗಳಿಗೆ ಸ್ಪಷ್ಟನೆ ನೀಡುವ ವೇದಿಕೆಯಾಗಿ ಪರಿವರ್ತನೆಗೊಂಡಿತು.ಸಂಸತ್‌ ಸದಸ್ಯ ಡಿ.ಬಿ. ಚಂದ್ರೇಗೌಡ, ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಹಾಗೂ ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ. ಸದಾನಂದಗೌಡ, ಶಾಸಕ ಆರ್‌. ಅಶೋಕ್‌, ಸಂಸತ್‌ ಸದಸ್ಯ ಅನಂತ­ಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯ­ಕರು ಸೇರಿದ್ದ ಈ ವೇದಿಕೆಯಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಿ, ಒಮ್ಮತದಿಂದ ಅಭ್ಯರ್ಥಿ ಆಯ್ಕೆ ಮಾಡಿರುವ ಕುರಿತು ಕಾರ್ಯ­ಕರ್ತರಿಗೆ ಮನವರಿಕೆ ಮಾಡಿ­ಕೊಡುವ ಪ್ರಯತ್ನ ಮಾಡಿದರು.ಚಂದ್ರೇಗೌಡ ಮಾತನಾಡಿ, ‘ಟಿಕೆಟ್‌ ಕೇಳದಿದ್ದರೂ ನನಗೆ ಕೊಕ್‌ ಎಂದು ಮಾಧ್ಯಮಗಳಲ್ಲಿ ವರದಿಯಾಯಿತು. ಕಳೆದ 50 ವರ್ಷಗಳ ಸಾರ್ವಜನಿಕ ಸೇವೆಯಲ್ಲಿ ಮುಖ್ಯಮಂತ್ರಿ ಸ್ಥಾನ ಹೊರತು­ಪಡಿಸಿ ಕೇಂದ್ರ ಮತ್ತು ರಾಜ್ಯದಲ್ಲಿ ವಿವಿಧ ಉನ್ನತ ಹುದ್ದೆ­ಗಳನ್ನು ನಾನು ಅಲಂಕರಿಸಿದ್ದೇನೆ. ಇನ್ನು ಮುಂದೆ ಕಿರಿಯರು ನಮ್ಮ ಸ್ಥಾನಕ್ಕೆ ಬರಲಿ ಎಂದು ಆಪೇಕ್ಷೆ ಪಟ್ಟಿದ್ದೆ. ಆದರೆ, ಕಿರಿಯರು ಬರುವಾಗ ಜಗಳ­ವಾಯ್ತು. ಅಂತಿಮವಾಗಿ ಒಮ್ಮತದಿಂದ ಡಿ.ವಿ.­ಸದಾನಂದಗೌಡ ಅವರನ್ನು ಆಯ್ಕೆ ಮಾಡಲಾಗಿದ್ದು, ಎಲ್ಲರೂ ಅವರ ಗೆಲುವಿಗೆ ಶ್ರಮಿಸಬೇಕು’ ಎಂದರು.ಅನಂತಕುಮಾರ್‌ ಮಾತನಾಡಿ, ‘ಚುನಾ­ವಣಾ ರಾಜಕೀಯದಿಂದ ಹೊರ­ಗಿದ್ದು ಪಕ್ಷದ ಸೇವೆಯಲ್ಲಿ ತೊಡ­ಗು­ತ್ತೇನೆ ಎಂದು ಹಿರಿಯ ಮುಖಂಡ­ರಾದ ಡಿ.ಬಿ. ಚಂದ್ರೇಗೌಡ ಅವರು ತಿಳಿಸಿದ್ದರಿಂದ ಅವರಿಗೆ ಟಿಕೆಟ್‌ ತಪ್ಪಿದೆ. ಚಂದ್ರೇ­ಗೌಡ ಅವರು ಮನ­ಪೂರ್ವಕವಾಗಿ ಒಪ್ಪಿಗೆ ನೀಡಿ ಚುನಾ­­ವಣಾ ರಾಜಕೀಯದಿಂದ ಮಾತ್ರ ದೂರ ಉಳಿದಿದ್ದಾರೆ. ಹೀಗಾಗಿ ಉತ್ತರ ಕ್ಷೇತ್ರಕ್ಕೆ ಹೊಸ ಅಭ್ಯರ್ಥಿಯನ್ನು ಆಯ್ಕೆ ಮಾಡಿ­ದ್ದೇವೆ’ ಎಂದು ಸ್ಪಷ್ಟಪಡಿಸಿದರು.ದೇಶ ಮತ್ತು ಬೆಂಗಳೂರು ಅಭಿವೃದ್ಧಿ ಸೇರಿದಂತೆ ಯಾವುದೇ ವಿಷಯದ ಬಹಿ­ರಂಗ ಚರ್ಚೆಗೆ ಬಿಜೆಪಿ ಸಿದ್ಧ.  ಕಾಂಗ್ರೆಸ್‌ ನಾಯಕರು ಇಂತಹ ಚರ್ಚೆ­ಯಿಂದ ಪಲಾಯನ ಮಾಡಬಾರದು. ಈಗ ಕೆಲವರು ‘ನಮ್ಮ ಬೆಂಗಳೂರು’ ಎಂದು ಹೇಳಿಕೊಂಡು ಡೋಂಗಿ­ತನ ಪ್ರದರ್ಶಿಸಿ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ ಎಂದು ಟೀಕಿಸಿದರು.ಶಾಸಕ ಆರ್‌. ಅಶೋಕ್‌ ಮಾತ­ನಾಡಿ, ‘ಈ ಕ್ಷೇತ್ರದ ಅಭ್ಯರ್ಥಿ ಆಯ್ಕೆಗೆ ಸಂಬಂ­ಧಿಸಿ­ದಂತೆ ಗೊಂದಲ ಉಂಟಾ­ಗಿತ್ತು.  ಅಂತಿಮವಾಗಿ ಕಾರ್ಯ­ಕರ್ತರು, ನಾಯಕರು, ಬಿಬಿಎಂಪಿ ಸದ­ಸ್ಯರು ಜತೆ ಚರ್ಚಿಸಿ ಕ್ಷೇತ್ರದ

ಅಭಿ­ವೃದ್ಧಿಗೆ ಶ್ರಮಿಸುವ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗಿದೆ. ವಿಧಾನ­ಪರಿಷತ್‌ ಸದಸ್ಯ ಸೋಮಣ್ಣ ಅವರು ಸಹ ನನಗೆ ಲೋಕಸಭೆ ಚುನಾವಣೆ ಸ್ಪರ್ಧಿಸಬೇಡ ಎಂದು ಸಲಹೆ ನೀಡಿದರು. ಹೀಗಾಗಿ ಮುಕ್ತ ಮನಸ್ಸಿ­ನಿಂದ ಎಲ್ಲರ ಸಹಮತದಿಂದ ಸದಾ­ನಂದ­ಗೌಡ ಅವರನ್ನು ಕಣಕ್ಕಿಳಿಸ­ಲಾಗಿದೆ’ ಎಂದು ವಿವರಿಸಿದರು.ಎಲ್ಲೆಡೆ ಸಲ್ಲುತ್ತೇನೆ...

ನಾನು ಎಲ್ಲಿ ಹೋದರೂ ಹೊಂದಾಣಿಕೆ­ಯಾಗು­ತ್ತೇನೆ ಎಂದು ನಿರ್ಧರಿಸಿ ಪಕ್ಷದ ಕಾರ್ಯ­­ಕರ್ತರು ಈ ಕ್ಷೇತ್ರದ ಅಭ್ಯರ್ಥಿ­ಯ­ನ್ನಾಗಿ ಆಯ್ಕೆ ಮಾಡಿದ್ದಾರೆ. ಕುಗ್ರಾಮದಲ್ಲಿ ಬೆಳೆದ ನಾನು ಸರ್ಕಾರಿ ಸೇವೆಯಲ್ಲಿದ್ದೆ. ಬಿಜೆಪಿ ಸೇರಿದ ನಂತರ ಪಕ್ಷ ಹಲವು ಮಹತ್ವದ ಹುದ್ದೆಗಳನ್ನು ನೀಡಿದೆ. ಸಾಮಾನ್ಯ ಕಾರ್ಯ­ಕರ್ತ­ನೊಬ್ಬ ಪ್ರಮುಖ ಹುದ್ದೆ ಅಲಂಕರಿಸಲು ಬಿಜೆಪಿಯಲ್ಲಿ ಮಾತ್ರ ಸಾಧ್ಯ ಎನ್ನುವುದಕ್ಕೆ ನಾನೇ ಸಾಕ್ಷಿ.

–ಡಿ.ವಿ. ಸದಾನಂದಗೌಡ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.