ವಿವಾದಕ್ಕೆ ಕಾರಣವಾದ ಸರ್ಕಾರದ ನಡೆ

7
ಚಿನ್ನ ಗೆದ್ದ ರಾಜ್ಯದ ತೇಜಸ್ವಿನಿ, ಮಮತಾಗೆ ಇಲ್ಲ ಸನ್ಮಾನ ಭಾಗ್ಯ

ವಿವಾದಕ್ಕೆ ಕಾರಣವಾದ ಸರ್ಕಾರದ ನಡೆ

Published:
Updated:

ಬೆಂಗಳೂರು: ಏಷ್ಯನ್‌ ಕ್ರೀಡಾಕೂಟದ ಕಬಡ್ಡಿಯಲ್ಲಿ ಚಿನ್ನ ಗೆದ್ದ ಭಾರತ ಮಹಿಳಾ ತಂಡದಲ್ಲಿದ್ದ ಕರ್ನಾಟಕದ ತೇಜಸ್ವಿನಿಬಾಯಿ ಮತ್ತು ಮಮತಾ ಪೂಜಾರಿ ಅವರಿಗೆ ಸರ್ಕಾರ ಬಹು ಮಾನದ ಮೊತ್ತ ನೀಡದೇ ಇರುವುದು ವಿವಾದಕ್ಕೆ ಕಾರಣವಾಗಿದೆ.ಈ ಇಬ್ಬರೂ ಆಟಗಾರ್ತಿಯರು ಆಂಧ್ರದಲ್ಲಿ ರೈಲ್ವೆಯಲ್ಲಿ ಉದ್ಯೋಗಿ ಯಾಗಿದ್ದಾರೆ. ಈ ಕಾರಣಕ್ಕಾಗಿ ರಾಜ್ಯ ಸರ್ಕಾರ ಇವರಿಗೆ ಬಹುಮಾನ ಮೊತ್ತ ಕೊಡಲು ಹಿಂದೇಟು ಹಾಕುತ್ತಿದೆ. ಏಷ್ಯನ್‌ ಕೂಟದಲ್ಲಿ ಚಿನ್ನ ಗೆದ್ದವರಿಗೆ ₨ 25 ಲಕ್ಷ ನೀಡುವುದಾಗಿ ಸರ್ಕಾರ ಈ ಮೊದಲೇ ಪ್ರಕಟಿಸಿತ್ತು. ‘ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ಗೆದ್ದ ರಾಜ್ಯದ ಕ್ರೀಡಾಪಟುಗಳಿಗೆ ಮೊದಲು ಕಡಿಮೆ ಬಹುಮಾನ ನೀಡಲಾಗುತ್ತಿತ್ತು. ಆದ್ದರಿಂದಕ್ರೀಡಾ ಸಚಿವರೊಂದಿಗೆ ಚರ್ಚಿಸುತ್ತೇನೆ: ಸಿಎಂ

ತೇಜಸ್ವಿನಿ ಮತ್ತು ಮಮತಾ ಅವರು ಕರ್ನಾಟಕದವರು ಎನ್ನುವ ಹೆಮ್ಮಯಿದೆ. ಈ ವಿಷಯವನ್ನು ದೊಡ್ಡದು ಮಾಡುವ ಅಗತ್ಯವಿಲ್ಲ. ಅವರಿಗೂ ಬಹುಮಾನ ನೀಡಲು ಕ್ರಮ ಕೈಗೊಳ್ಳುತ್ತೇನೆ. ಕ್ರೀಡಾ ಸಚಿವರ ಜೊತೆ ಚರ್ಚಿಸುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏಕಲವ್ಯ ಪ್ರಶಸ್ತಿ ಪ್ರದಾನ ಸಮಾರಂಭ ಮುಗಿದ ನಂತರ ಮಾಧ್ಯಮದವರಿಗೆ ತಿಳಿಸಿದರು.

ಕೆಲ ಕ್ರೀಡಾಪಟುಗಳು ಉದ್ಯೋಗ ಅರಸಿ ಬೇರೆ ಕಡೆ ಹೋದರು. ರಾಜ್ಯದಲ್ಲಿ ಹೆಚ್ಚು ಉದ್ಯೋಗವಕಾಶಗಳೂ ಇಲ್ಲ. ಆದ್ದರಿಂದ ತೇಜಸ್ವಿನಿ ಮತ್ತು ಮಮತಾ ರೈಲ್ವೆ ಸೇರಿಕೊಂಡರು. ಆದರೆ, ಅವರು ರೈಲ್ವೆ ಬಿಟ್ಟು ಬೇರೆ ಯಾವ ರಾಜ್ಯದ ಪರವೂ ಆಡಿಲ್ಲ. ಆದ್ದರಿಂದ ರಾಜ್ಯ ಸರ್ಕಾರ ಬಹುಮಾನ ನೀಡಬಹುದಿತ್ತು’ ಎಂದು ಭಾರತ ಕಬಡ್ಡಿ ತಂಡದ ಮಾಜಿ ನಾಯಕ ಬಿ.ಸಿ. ರಮೇಶ್‌ ‘ಪ್ರಜಾವಾಣಿ’ ಜೊತೆ ಅನಿಸಿಕೆ ಹಂಚಿಕೊಂಡರು.ರೈಲ್ವೆಯಿಂದಲೇ ಪ್ರತಿನಿಧಿಸಿದ್ದು: ‘ತೇಜಸ್ವಿನಿ ಮತ್ತು ಮಮತಾ ಅವರು ಏಷ್ಯನ್‌ ಕೂಟಕ್ಕೆ ರೈಲ್ವೆಸ್ ತಂಡದಿಂದಲೇ ಆಯ್ಕೆಯಾಗಿದ್ದರು. ಆದರೆ, ಕೆಲಸದ ನಿಮಿತ್ತವಷ್ಟೇ ಅವರು ಆಂಧ್ರದಲ್ಲಿದ್ದಾರೆ. ಆ ರಾಜ್ಯದ ಪರ ಯಾವ ಚಾಂಪಿಯನ್‌ಷಿಪ್‌ ಗಳಲ್ಲಿಯೂ ಪಾಲ್ಗೊಂಡಿಲ್ಲ. ಇವರಿಗೆ ಆಂಧ್ರ ಸರ್ಕಾರವೂ ಬಹುಮಾನ ನೀಡಿಲ್ಲ.  ಆದ್ದರಿಂದ ರಾಜ್ಯ ಸರ್ಕಾರವೇ ಬಹುಮಾನ ಮೊತ್ತ ನೀಡಬೇಕಿತ್ತು’ ಎಂದು ರಾಜ್ಯ ಅಮೆಚೂರ್‌ ಕಬಡ್ಡಿ ಸಂಸ್ಥೆ ಕಾರ್ಯದರ್ಶಿ ವಿ. ಜಯರಾಮ್‌ ಅಭಿಪ್ರಾಯ ಪಟ್ಟಿದ್ದಾರೆ.‘ಪರ್ವತಾ ರೋಹಣ ಮಾಡಿದ ಉತ್ತರ ಪ್ರದೇಶದ ಅರುಣಿಮಾ ಸಿನ್ಹಾ ಅವರಿಗೆ ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಒಂದು ತಿಂಗಳ ಹಿಂದೆಯಷ್ಟೇ ₨ 6 ಲಕ್ಷ ಬಹುಮಾನ ನೀಡಿ ಗೌರವಿಸಿದೆ. ಈ ಬಗ್ಗೆ ಬೇಸರವೇನಿಲ್ಲ. ಆದರೆ, ರಾಜ್ಯದ ಕ್ರೀಡಾಪಟು ಗಳನ್ನು ಸರ್ಕಾರ ಕಡೆಗಣಿಸಬಾರದು. ಎಲ್ಲರಂತೆಯೇ ತೇಜಸ್ವಿನಿ ಮತ್ತು ಮಮತಾ ಅವರಿಗೂ ಗುರುವಾರವೇ ಬಹುಮಾನ ಕೊಟ್ಟಿದ್ದರೆ

ಸೂಕ್ತವಾಗಿರು ತ್ತಿತ್ತು’ ಎಂದು ಆಟಗಾರ್ತಿಯರ ಕೋಚ್‌ ವಿಜಯನಗರ ಕ್ಲಬ್‌ನ ನಾಗರಾಜ್‌ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry