ವಿವಾದಾತ್ಮಕ ಕಾಯಿದೆ ಹಠಾತ್ ಅನೂರ್ಜಿತ

7

ವಿವಾದಾತ್ಮಕ ಕಾಯಿದೆ ಹಠಾತ್ ಅನೂರ್ಜಿತ

Published:
Updated:

ಕೈರೊ (ಪಿಟಿಐ): ಈಜಿಪ್ಟ್‌ನ ಇಸ್ಲಾಂವಾದಿ ರಾಷ್ಟ್ರಾಧ್ಯಕ್ಷ  ಮುಹಮ್ಮದ್ ಮೊರ್ಸಿ, ತಮಗೆ ಸರ್ವಾಧಿಕಾರತ್ವ ಒದಗಿಸಿದ್ದ ವಿವಾದಾತ್ಮಕ ಕಾಯಿದೆಯನ್ನು ಭಾನುವಾರ ಹಠಾತ್ ಅನೂರ್ಜಿತಗೊಳಿಸಿದ್ದಾರೆ. ಆದರೆ ಹೊಸ ಸಂವಿಧಾನದ ಬಗ್ಗೆ ಡಿ.15ರಂದು ನಡೆಸಲು ಉದ್ದೇಶಿಸಿರುವ ಜನಮತಗಣನೆಯನ್ನು ಮುಂದೂಡಬೇಕೆಂಬ ವಿರೋಧ ಪಕ್ಷಗಳ ಬೇಡಿಕೆಯನ್ನು ಅವರು ತಿರಸ್ಕರಿಸಿದ್ದಾರೆ.ರಾಜಕೀಯ ನಾಯಕರೊಂದಿಗೆ ಶನಿವಾರ ಮಧ್ಯರಾತ್ರಿಯ ನಂತರವೂ ಮುಂದುವರಿದ `ರಾಷ್ಟ್ರೀಯ ಚರ್ಚೆ'ಯ ಪರಿಣಾಮವಾಗಿ ಮೊರ್ಸಿ ಈ ದಿಢೀರ್ ನಿರ್ಧಾರ ಕೈಗೊಂಡಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.ಒಂದೊಮ್ಮೆ ಡಿ.15ರ ಜನಮತಗಣನೆಯಲ್ಲಿ ಬಹುಪಾಲು ಜನರು  ಕರಡು ಸಂವಿಧಾನದ ವಿರುದ್ಧ ಮತ ಚಲಾಯಿಸಿದ್ದೇ ಆದರೆ, ಮೂರು ತಿಂಗಳ ಒಳಗಾಗಿ ಹೊಸ ಶಾಸನ ರಚನಾ ಸಮಿತಿಯನ್ನು ರಚಿಸಲಾಗುವುದು. ಪರಿಷ್ಕೃತ ಕರಡು ತಯಾರಿಸಲು ಸಮಿತಿಗೆ ಆರು ತಿಂಗಳ ಕಾಲಾವಕಾಶ ನೀಡಲಾಗುವುದು.ಈಗ ಮೊರ್ಸಿ ಅವರು ವಿವಾದಾತ್ಮಕ ಕಾಯಿದೆಯನ್ನು ರದ್ದುಗೊಳಿಸಿದ್ದರೂ ಅದು ಪೂರ್ವಾನ್ವಯವಾಗಿ ಜಾರಿಯಾಗುವುದಿಲ್ಲ. ಅಂದರೆ, ಕಾಯಿದೆ ಜಾರಿಯಾದಂದಿನಿಂದ ಈವರೆಗೆ ಮೊರ್ಸಿ ಕೈಗೊಂಡಿರುವ ನಿರ್ಧಾರಗಳು ಅಬಾಧಿತವಾಗಿ ಮುಂದುವರಿಯಲಿವೆ. ತಮ್ಮ ನಿರ್ಧಾರಗಳನ್ನು ನ್ಯಾಯಾಂಗ ಕೂಡ ಪ್ರಶ್ನಿಸಲಾಗದ ವಿವಾದಾತ್ಮಕ ಕಾಯಿದೆಗೆ ಸ್ವತಃ ಮೊರ್ಸಿ ನ.22ರಂದು ಅಂಗೀಕಾರ ನೀಡಿದ್ದರು. ಆದರೆ ಉದಾರವಾದಿ ಮುಸ್ಲಿಮರು ಇದರ ವಿರುದ್ಧ ದನಿಯೆತ್ತಿ ಬೀದಿಗಿಳಿದು ನಡೆಸಿದ ಪ್ರತಿಭಟನೆ ವೇಳೆ ಕನಿಷ್ಠ ಏಳು ಜನ ಸಾವಿಗೀಡಾಗಿ, 700ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry